ಮೈಸೂರು: ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಮೈಸೂರು ಅರಮನೆಯ ಮುಂಭಾಗದಲ್ಲಿ ಜರುಗಿದ ಯೋಗ ದಿನಾಚರಣೆಯಲ್ಲಿ ಇಂದು (ಶನಿವಾರ ಜೂನ್ 21) ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಾ. ಹೆಚ್ ಸಿ ಮಾದೇವಪ್ಪನವರು ಭಾಗವಹಿಸಿದ್ದರು.
ಯೋಗ ಪ್ರಾಚೀನ ಭಾರತದ ಕಾಲದಿಂದ ನಡೆದುಕೊಂಡು ಬಂದ ಹವ್ಯಾಸ ಮತ್ತು ಅಭ್ಯಾಸಗಳಲ್ಲಿ ಒಂದು. ಇದೊಂದು ಪುರಾತನವಾದ ಆರೋಗ್ಯ ಕ್ರಮವಾಗಿದ್ದು ವಿಶ್ವಕ್ಕೇ ಯೋಗದ ಮಹತ್ವವನ್ನು ಪರಿಚಯಿಸಿದ ಶಕ್ತಿ ಭಾರತಕ್ಕೆ ಸಲ್ಲುತ್ತದೆ.
ಪ್ರಪಂಚವೇ ಒಂದು ಐಕ್ಯತೆಯ ಘಟಕವಾಗಿದ್ದು ಯೋಗದಂತಹ ಮಹತ್ತರ ಅಂಶಗಳು ಅದನ್ನು ಆರೋಗ್ಯಕರ ಹಿನ್ನಲೆಯಲ್ಲಿ ಬೆಸೆಯುವ ಶಕ್ತಿಯನ್ನು ಪಡೆದಿದೆ. ಇದನ್ನೂ ಓದಿ: ವಿಶ್ವಕ್ಕೆ ಭಾರತ ನೀಡಿದ ಅನನ್ಯ ಕಾಣಿಕೆ ಯೋಗ: ಸಿಎಂ
ವೈದ್ಯಲೋಕವೂ ಸಹ ಯೋಗದ ಅಭ್ಯಾಸವನ್ನು ಮಾಡಲು ಸೂಚಿಸುತ್ತದೆ ಎಂದರೆ ಯೋಗದ ಮಹತ್ವವನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದು ಈ ವೇಳೆ ತಿಳಿಸಿದರು.
ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾದ ಯದುವೀರ್ ಒಡೆಯರ್, ಶಾಸಕರಾದ ಶ್ರೀವತ್ಸ ಹಾಗೂ ವಿವಿಧ ಯೋಗ ಸಂಘಟನೆಗಳು ಉಪಸ್ಥಿತರಿದ್ದರು.
