ಬೆಂಗಳೂರು: ಐಶ್ವರ್ಯ ಗೌಡ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ತಿರುವ ಪಡೆದುಕೊಳ್ಳುತ್ತಿದ್ದು, ಕಳೆದ ಎರಡು ದಿನಗಳ ಹಿಂದೆ ಕಾಂಗ್ರೆಸಿನ ಮಾಜಿ ಸಂಸದ ಡಿಕೆ ಸುರೇಶ್ ಅವರಿಗೆ ಇಡಿ ಅಧಿಕಾರಿಗಳು ಸಮನ್ಸ್ ನೀಡಿದ್ದು, ಇಂದು (ಗುರುವಾರ ಜೂನ್ 19) ರಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಿತ್ತು.
ಇದರ ಬೆನ್ನಲ್ಲೇ ಇದೀಗ ಇಡಿ ಅಧಿಕಾರಿಗಳು ಐಶ್ವರ್ಯ ಗೌಡಗೆ ಸಂಬಂಧಿಸಿದ ಎಲ್ಲಾ ಆಸ್ತಿಗೂ ಮುಟ್ಟುಗೋಲು ಹಾಕವ ಪ್ರಕ್ರಿಯೆ ಶುರು ಮಾಡಿದೆ.
ಹೌದು, ಐಶ್ವರ್ಯಗೌಡ ಕೋಟ್ಯಂತರ ರೂ. ಆಸ್ತಿ ಹೊಂದಿದ್ದು, ಅಕ್ರಮ ಹಣ ವರ್ಗಾವಣೆಯಿಂದ ಎಷ್ಟು ಹಣ ಸಂಪಾದನೆ ಮಾಡಿದ್ದಾಳೆ? ಎಲ್ಲೆಲ್ಲಿಗೆ ಹಣ ವರ್ಗಾವಣೆ ಮಾಡಲಾಗಿದೆ? ಯಾರ‍್ಯಾರ ಸಂಪರ್ಕ ಮಾಡಿದ್ದಾಳೆ? ಅನ್ನೋದನ್ನ ಬಯಲಿಗೆಳೆಯಲು ಇಡಿ ತನಿಖೆ ಮುಂದುವರಿಸಿದೆ. ಇದನ್ನೂ ಓದಿ: ಗೋಲ್ಡ್ ಸುರೇಶ್ ವಂಚನೆ ಕೇಸ್ ; ಇದರ ಅಸಲಿ ಕಥೆ ಏನು?
ಐಶ್ವರ್ಯಗೌಡ ಬಹುಕೋಟಿ ಹಗರಣದಲ್ಲಿ ಈಗ ಮಾಜಿ ಸಂಸದ ಡಿಕೆ ಸುರೇಶ್ ಸರದಿ. ಐಶ್ವರ್ಯಗೌಡ ಪ್ರತಿ ಕಾರ್ಯಕ್ರಮದಲ್ಲಿ ನಾನು ಡಿಕೆ ಸುರೇಶ್ ಸಹೋದರಿ ಅಂತ ಹೇಳಿಕೊಂಡು ಓಡಾಡ್ತಾ ಇದ್ರು. ಇಡಿ ಐಶ್ವರ್ಯಳನ್ನ ಬಂಧಿಸಿದ ಬಳಿಕ ದಾಖಲಾತಿ, ಹಣದ ವರ್ಗಾವಣೆ ಎಲ್ಲವನ್ನೂ ಪರಿಶೀಲಿಸಿ ಒಂದಷ್ಟು ಬಲವಾದ ಸಾಕ್ಷ್ಯಗಳನ್ನು ಇಟ್ಟುಕೊಂಡು ಡಿಕೆಸುಗೆ ಸಮನ್ಸ್ ನೀಡಿದೆ.
ಹಾಗಾದ್ರೆ ಇಡಿ ಅಧಿಕಾರಿಗಳ ಮುಂದಿನ ನಿಲುವೇನು? ಡಿಕೆ ಸುರೇಶ್ ಅವರ ಆಸ್ತಿಗೂ ಇಡಿ ಅಧಿಕಾರಿಗಳು ಮುಟ್ಟುಗೋಲು ಹಾಕ್ತಾರ ಎಂಬುದು ಕಾದು ನೋಡಬೇಕಿದೆ.
