ರಾಯಚೂರು: ರಾಯಚೂರು ಮೂಲದ ಗೋಲ್ಡ್ ಸುರೇಶ್ ಎಂದೆ ಪ್ರಖ್ಯಾತಿಯನ್ನು ಹೊಂದಿರುವ ಗೋಲ್ಡ್ ಸುರೇಶ್ ಅವರು ಬಿಗ್ ಬಾಸ್ ಗೆ ಎಂಟ್ರಿ ಕೊಡುವ ಮೂಲಕ ಇನ್ನಷ್ಟು ಹೆಸರು ಮಾಡಿದ್ದಾರೆ.
ಮೈತುಂಬ ಚಿನ್ನಾಭರಣಗಳನ್ನು ಹಾಕಿಕೊಂಡು ಸುತ್ತಾಡುವ ಅವರು ಚಿಕ್ಕ ವಯಸ್ಸಿನಲ್ಲೇ ಉನ್ನತ ಮಟ್ಟಕ್ಕೆ ಬೆಳೆದಿದ್ದಾರೆ.
ಯೆಸ್… ಗೋಲ್ಡ್ ಸುರೇಶ ಎಂದೆ ಹೆಸರು ಮಾಡಿರುವ ಸುರೇಶ್ ಅವರ ವಿರುದ್ಧ ಮೈನುದ್ದೀನ್ ಎನ್ನುವ ವ್ಯಕ್ತಿ ದೂರು ನೀಡಲು ಮುಂದಾಗಿದ್ದಾರೆ. ಗೋಲ್ಡ್ ಸುರೇಶ್ ಮೈನುದ್ದೀನ್ ಅವರಿಂದ ಅಕ್ರಮವಾಗಿ ಹಣದ ಪಡೆದುಕೊಂಡು ವಾಪಸ್ ನೀಡದೆ ಸತಾಯಿಸುತ್ತಿದ್ದಾರೆ ಎಂಬ ಕಾರಣಕ್ಕೆ ದೂರು ನೀಡಲು ಮುಂದಾಗಿದ್ದಾರೆ.
ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿದ ಗೋಲ್ಡ್ ಸುರೇಶ್ ಅವರು, ಚಿಕ್ಕವಯಸ್ಸಿನಲ್ಲಿ ಉನ್ನತ ಮಟ್ಟಕ್ಕೆ ಬೆಳೆದಿದ್ದಾರೆ ಎಂಬ ಕಾರಣಕ್ಕೆ ನನ್ನ ಮೇಲೆ ಇಲ್ಲದ ಸಲದ ಆರೋಪ ಮಾಡುತ್ತಿದ್ದಾರೆ ಎಂದು ಗೋಲ್ಡ್ ಸುರೇಶ್ ಹೇಳುತ್ತಿದ್ದಾರೆ.
ಮೈನುದ್ದೀನ್ ನ ಆರೋಪವೇನು?
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಮೈನುದ್ದಿನ್ ಎಂಬ ಯುವಕನ ಜೊತೆ ಗೋಲ್ಡ್ ಸುರೇಶ್ ಬರೋಬ್ಬರಿ 14 ಲಕ್ಷಕ್ಕೆ ಅಗ್ರೀಮೆಂಟ್ ಮಾಡಿಕೊಂಡಿದ್ದರಂತೆ. ಸ್ಟುಡಿಯೋ ನಿರ್ಮಾಣ ಹಾಗೂ ಉಪಕರಣಗಳ ಖರೀದಿಗೆ ಸಂಬಂಧಿಸಿ 2017ರಲ್ಲೇ ಗೋಲ್ಡ್ ಸುರೇಶ್ ಜೊತೆ 14 ಲಕ್ಷ ರೂ.ಗೆ ಒಪ್ಪಂದ ಮಾಡಲಾಗಿತ್ತಂತೆ. ಇದರ ಭಾಗವಾಗಿ ಪ್ರಾರಂಭದಲ್ಲಿ 4 ಲಕ್ಷ ರೂ. ಮುಂಗಡವಾಗಿ ನೀಡಲಾಗಿತ್ತು. ನಂತರ ಹಂತ ಹಂತವಾಗಿ 7 ಲಕ್ಷ ರೂಪಾಯಿ ನೀಡಿದ್ದೇನೆ ಎಂದು ಮೈನುದ್ದಿನ್ ಆರೋಪಿಸಿದ್ದಾರೆ. ಆದರೆ, ಕೆಲಸವನ್ನು ಅರ್ಧಕ್ಕೆ ಬಿಟ್ಟು, ಅತಂತ್ರ ಸ್ಥಿತಿಗೆ ಸಿಲುಕಿದಂತಾಗಿದೆ ಅಂತಾ ಕಿಡಿಕಾರಿದ್ದಾರೆ. ಇದನ್ನೂ ಓದಿ: ರಚಿತಾ ರಾಮ್ ವಿರುದ್ಧ ನಿರ್ದೇಶಕರಿಂದ ದೂರು
ಗೋಲ್ಡ್ ಸುರೇಶ್ ಹೇಳಿದ್ದೇನು?
ನಾನು 2017ರಲ್ಲಿಯೇ ಆ ವ್ಯಕ್ತಿಗೆ ಪಡೆದ ಹಣ ವಾಪಸ್ ನೀಡಿದ್ದೇನೆ. ಈಗ ನನ್ನ ಬಳಿ ಹಣವಿದೆ ಅನ್ನೋ ಕಾರಣಕ್ಕೆ ಆರೋಪ ಮಾಡಿದ್ದಾನೆ. ನಾನು ಉದ್ಯಮಿಯಾಗಿ ಬೆಳೆದಿರುವ ಕಾರಣ ವಿನಾಕಾರಣ ಆರೋಪ ಮಾಡಿದ್ದಾರೆ. ಆ ವ್ಯಕ್ತಿಯ ಸಾಲವನ್ನೆಲ್ಲಾ ನಾನು ಮರು ಪಾವತಿ ಮಾಡಿದ್ದೇನೆ. ಯಾವುದೇ ರೀತಿಯ ಬಾಕಿ ಹಣವನ್ನ ನಾನು ಉಳಿಸಿಕೊಂಡಿಲ್ಲ. ಸುಳ್ಳು ಆರೋಪ ಮಾಡುತ್ತಿರುವ ಹಿನ್ನೆಲೆಯಲ್ಲಿ ಕಾನೂನು ಹೋರಾಟ ಮಾಡುತ್ತೇನೆ ಎಂದಿದ್ದರು.
