ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಚಿಕ್ಕ ವಯಸ್ಸಿನಲ್ಲಿ ಹೆಚ್ಚು ಹೆಸರು ಮಾಡಿರುವ ನಟಿ ರಚಿತರಾಮ್ ಅವರ ವಿರುದ್ಧ ಕನ್ನಡ ಚಿತ್ರರಂಗದಿಂದಲೇ ಇದೀಗ ದೂರು ದಾಖಲಾಗಿರುವುದು ರಚ್ಚು ಅಭಿಮಾನಿಗಳಿಗೆ ದಿಗ್ ಭ್ರಮೆ ಬಡೆದಂತಾಗಿದೆ.
ಹೌದು, ಸಂಜು ವೆಡ್ಸ್ ಗೀತಾ 2 ಸಿನಿಮಾದ ಪ್ರಚಾರಕ್ಕೆ ಬರದ ಕಾರಣಕ್ಕೆ, ಸಂಜು ವೆಡ್ಸ್ ಗೀತಾ 2 ಸಿನಿಮಾದ ನಿರ್ದೇಶಕ ನಾಗಶೇಖರ್ ಕನ್ನಡ ಫಿಲಂ ಚೇಂಬರ್ ಗೆ ದೂರು ನೀಡಿದ್ದಾರೆ.
ದೂರು ನೀಡಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು, ನಾವು ಎಲ್ಲ ನಟಿಯರನ್ನು ಬಹಳ ಗೌರವದಿಂದ ಕಾಣುತ್ತೇವೆ. ಯಾವುದೇ ಕಾರಣಕ್ಕೂ ನಟ-ನಟಿಯರನ್ನು ಕೇವಲವಾಗಿ ನೋಡದೆ ಅವರ ಪಾತ್ರಕ್ಕೆ ತಕ್ಕಂತೆ ನಾವು ಸಂಭಾವಣೆಯನ್ನು ನೀಡುತ್ತೇವೆ.
ಯಾವುದೇ ಸಿನಿಮಾಗಳಾಗಲಿ ಅದಕ್ಕೆ ತಕ್ಕಂತೆ ಪ್ರಚಾರಗಳು, ಪ್ರಮೋಷನ್ಗಳು ಇದ್ದೇ ಇರುತ್ತವೆ. ಹಾಗಾಗಿ ಸಿನಿಮಾದಲ್ಲಿ ನಟನೆ ಮಾಡಿರುವ ಪ್ರಮುಖ ನಟ, ನಟಿಯರು ಸಿನಿಮಾ ಪ್ರಚಾರದಲ್ಲಿ ತೊಡಗಿದರೆ ಆ ಸಿನಿಮಾಗೆ ಒಂದೊಳ್ಳೆ ರೆಸ್ಪಾನ್ಸ್ ಸಿಗುತ್ತದೆ ಎಂಬ ಕಾರಣಕ್ಕೆ ಪ್ರತಿಯೊಬ್ಬರು ಸಿನಿಮಾ ಪ್ರಚಾರದಲ್ಲಿ ತೊಡಗುತ್ತಾರೆ.
ಆದರೆ ನಟಿ ರಚಿತಾರಾಮ್ ಅವರು ಸಿನಿಮಾ ಪ್ರಚಾರಕ್ಕೆ ಬರದಿದ್ದ ಕಾರಣಕ್ಕೆ ನಾವು ಅವರ ಮೇಲೆ ದೂರು ದಾಖಲಿಸಿದ್ದೇವೆ ಎಂದಿದ್ದಾರೆ. ಇದನ್ನೂ ಒದಿ: ರಚಿತಾ ರಾಮ್ ವಿರುದ್ಧ ನಿರ್ದೇಶಕರಿಂದ ದೂರು
ನಾನು ಬಹಳ ಗೌರವದಿಂದ ಕಲಾವಿದರನ್ನು ನೋಡಿಕೊಳ್ಳುತ್ತೇವೆ. ರಚಿತಾ ರಾಮ್ ಮ್ಯಾನೇಜರ್ಗೆ ನಾನು ಕರೆ ಮಾಡಿ ಈ ಬಗ್ಗೆ ಮಾತನಾಡಿದ್ದೇನೆ. 2 ದಿನ ಬರದೇ ಇದ್ದಿದ್ದಕ್ಕೆ 2 ವರ್ಷಗಳ ಸಂಬಂಧ ಹಾಳಾಗೋದು ನನಗೆ ಇಷ್ಟ ಇಲ್ಲ ಎಂದು ಹೇಳಿದ್ದೇನೆ. ಮೆಸೇಜ್ ಕಳುಹಿಸಿದ್ದೇನೆ. ಜನವರಿ 8ರವರೆಗೆ ಅವರು ಸರಿಯಾಗಿ ರೆಸ್ಪಾನ್ಸ್ ಮಾಡಿದರು. ಆ ಬಳಿಕ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ಯಾವ ಕಲಾವಿದರೂ ಹೀಗೆ ಮಾಡಬಾರದು. ನಮ್ಮಿಂದ ಆದ ಅಗೌರವ ಏನು ಎಂಬುದನ್ನು ರಚಿತಾ ಸ್ಪಷ್ಟಪಡಿಸಬೇಕು’ ಎಂದು ನಾಗಶೇಖರ್ ಹೇಳಿದ್ದಾರೆ.
