ಕೇರಳದಲ್ಲಿರುವ ಕೊಟ್ಟಿಯೂರ ಶಿವನ ದೇವಾಲಯಕ್ಕೆ ನಟ ದರ್ಶನ್ ಭೇಟಿ ನೀಡಿ ಮಹದೇವನ ದರ್ಶನ ಪಡೆದಿದ್ದಾರೆ. ದಕ್ಷಿಣ ಕಾಶಿ ಎಂದೇ ಪ್ರಸಿದ್ಧ ಹೊಂದಿರುವ ದೇವಾಲಯಕ್ಕೆ ಕಿಲ್ಲಿಂಗ್ ಸ್ಟಾರ್ ಭೇಟಿ ಕೊಟ್ಟಿದ್ದಾರೆ.
ಕುಟುಂಬ ಸಮೇತವಾಗಿ ದರ್ಶನ್ ಅವರು ಶಿವನ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಳೆಯನ್ನು ಲೆಕ್ಕಿಸದೆ ಕುಟುಂಬ ಸಮೇತವಾಗಿ ದೇವರ ಮೊರೆ ಹೋಗಿದ್ದಾರೆ.
ಯೆಸ್…ನಟ ದರ್ಶನ್ ಅವರು ಡೆವಿಲ್ ಸಿನಿಮಾದ ಚಿತ್ರೀಕರಣದಲ್ಲಿ ಸಖತ್ ಬಿಜಿಯಾಗಿದ್ದು ಕೊಂಚ ಬಿಡುವಿನ ಸಮಯದಲ್ಲಿ ಪತ್ನಿ, ಮಗನ ಜೊತೆ ಸಮಯ ಕಳೆಯುತ್ತಾರೆ. ಡೆವಿಲ್ ಸಿನಿಮಾದ ಶೂಟಿಂಗ್ನಲ್ಲಿ ಬಿಜಿಯಾಗಿರುವ ನಟ ದರ್ಶನ್ ಅವರು ಇಂದು (ಬುಧವಾರ ಜೂನ್ 18) ರಂದು ಕುಟುಂಬ ಸಮೇತ ಟೆಂಪಲ್ ರನ್ ಮಾಡಿದ್ದಾರೆ.
ತಮಗಿರುವ ವಿಘ್ನಗಳೆಲ್ಲ ದೂರವಾಗಲೆಂದು ಈಗಾಗಲೇ ಹಲವಾರು ದೇವಸ್ಥಾನಗಳಿಗೆ ಪತ್ನಿ, ವಿಜಯಲಕ್ಷ್ಮಿಯವರು ಭೇಟಿ ನೀಡಿ ದೇವರ ಆಶೀರ್ವಾದ ಪಡೆದಿದ್ದರು. ಇದೀಗ ನಟ ದರ್ಶನ್ ಅವರು ಕೂಡ ಪತ್ನಿ ಜೊತೆ ದೇವಸ್ಥಾನಕ್ಕೆ ತೆರಳಿ ಮಹದೇವನ ದರ್ಶನ ಪಡೆದಿದ್ದಾರೆ.
ಇನ್ನೂ, ಈ ದೇವಸ್ಥಾನದ ವಿಶೇಷತೆ ಏನೆಂದರೆ, ವರ್ಷದಲ್ಲಿ 2 ತಿಂಗಳ ಕೆಲವು ದಿನಗಳು ಮಾತ್ರ ತೆರೆಯಲಾಗುತ್ತದೆ. ಅಲ್ಲದೇ 27ರಿಂದ 28 ದಿನಗಳವರೆಗೂ ಭಕ್ತರ ಭೇಟಿಗೆ ಅವಕಾಶ ಕಲ್ಪಿಸಲಾಗಿರುತ್ತದೆ. ಇದನ್ನೂ ಓದಿ: ರಚಿತಾ ರಾಮ್ ವಿರುದ್ಧ ನಿರ್ದೇಶಕರಿಂದ ದೂರು
ಸಾಮಾನ್ಯವಾಗಿ ಜೂನ್ 8ರಿಂದ ಜುಲೈ 4ರ ತನಕ ಈ ದೇವಸ್ಥಾನ ಭಕ್ತಾದಿಗಳ ಭೇಟಿಗೆ ಮುಕ್ತವಾಗಿರುತ್ತದೆ. ಇಕ್ಕರೆ ಕೊಟ್ಟಿಯೂರು ದೇವಸ್ಥಾನ ವರ್ಷ ಪೂರ್ತಿ ತೆರೆದಿದ್ದರೂ ಅಕ್ಕರೆ ಕೊಟ್ಟಿಯೂರು ಬರೀ 28 ದಿನ ತೆರೆದಿರುತ್ತದೆ. ಹೀಗಾಗಿ ಜೂನ್ ತಿಂಗಳಲ್ಲಿ ಈ ದೇವಸ್ಥಾನಕ್ಕೆ ಭಕ್ತರು ಮಾತ್ರವಲ್ಲದೆ ಪ್ರವಾಸಿಗರ ದಂಡೇ ಹರಿದುಬರುತ್ತದೆ.
ಇಂತಹ ವಿಶೇಷ ಸ್ಥಾನಮಾನ ಇರುವ ದೇವಸ್ಥಾನಕ್ಕೆ ಇಂದು ಕುಟುಂಬ ಸಮೇತ ದರ್ಶನ್ ಅವರು ಭೇಟಿ ದೇವರ ಆಶೀರ್ವಾದ ಪಡೆದುಕೊಂಡಿದ್ದಾರೆ.
