Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ರೈತರು ವೈಜ್ಞಾನಿಕ ಕೃಷಿ ಮಾಡಿ ಲಾಭ ಪಡೆಯಿರಿ: ಶಿವಾನಂದ ಪಾಟೀಲ್
  • Politics
  • State

ರೈತರು ವೈಜ್ಞಾನಿಕ ಕೃಷಿ ಮಾಡಿ ಲಾಭ ಪಡೆಯಿರಿ: ಶಿವಾನಂದ ಪಾಟೀಲ್

admin June 14, 2025 1 minute read
Spread the love

ವಿಜಯಪುರ: ಇಂಡಿ ತಾಲ್ಲೂಕಿನ ಹೋರ್ತಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ 50ನೇ ವರ್ಷದ ಸವಿನೆನಪಿನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ  ಮಾನ್ಯ ಸಚಿವರು, ಜವಳಿ ಮತ್ತು ಸಕ್ಕರೆ ಖಾತೆ ಕರ್ನಾಟಕ ಸರಕಾರ ಹಾಗೂ ಅಧ್ಯಕ್ಷರು  ವ್ಹಿ ಡಿ ಸಿ ಸಿ ಬ್ಯಾಂಕ್ ವಿಜಯಪುರ ರವರು ಮಾತನಾಡಿ.

ಮಹಿಳೆಯರು ಎಲ್ಲರೂ ಸೇರಿ ಅತಿ ಹೆಚ್ಚು ಲಾಭ ಮಾಡಿದ ಸಂಘವಾಗಿದೆ. ಬಸ್ ಟಿಕೆಟ್, ವಿಮಾನ, ರೈಲ್ವೆ ಟಿಕೆಟ್‌, ಸಾರ್ವಜನಿಕ ಕುಡಿಯುವ ನೀರು ವ್ಯವಸ್ಥೆ ಜನರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಸಂಘ ಹೋರ್ತಿ ಮಾಡಿದೆ ಎಂದು ಹೇಳಿದರು.

ಸಂಸ್ಥೆಗಳು ಉಳಿಬೇಕಾದರೆ ಪ್ರಾಮಾಣಿಕತೆಯಿಂದ ಅಲ್ಲಿನ ಸಿಬ್ಬಂದಿಗಳು ಕೆಲಸ ಮಾಡಬೇಕು. ರೈತರಿಗೆ ಅನುಕೂಲ ಕಲ್ಪಿಸು ಕೆಲಸವನ್ನ ಸಹಕಾರ ಬ್ಯಾಂಕಗಳು ಮಾಡುತ್ತವೆ. ಹಳ್ಳಿಯಿಂದ ದಿಲ್ಲಿ, ವಿನಹ ದಿಲ್ಲಿಯಿಂದ ಹಳ್ಳಿ ಯಾವತ್ತೂ ಆಗಲ್ಲಾ ಎಂದು ಹೇಳಿದರು.

ರೈತ ದೇಶದ ಬೆನ್ನೆಲುಬು ಅನ್ನೋದು ನಾವು ಯಾವತ್ತೂ ಪಾಲಿಸೋದು ನಮ್ಮ ಆದ್ಯ ಕರ್ತವ್ಯ, ದಿವಂಗತ ಪಾಂಡುರಂಗ ದೇಸಾಯಿ 1919ರಲ್ಲಿ ಡಿ. ಸಿ. ಸಿ. ಬ್ಯಾಂಕ ಪ್ರಾರಂಭ ಮಾಡಿದ್ದನ್ನು ಇವತ್ತು ಹೆಮ್ಮರವಾಗಿ ಬೆಳೆದಿದೆ. ಸ್ವಸಹಾಯ ಗುಂಪುಗಳು, ರೈತರಿಗೆ ಬಡ್ಡಿರಹಿತ ಸಾಲ ನೀಡುವುದು ನಮ್ಮ ಸಂಘದ ಮುಖ್ಯ ಉದ್ದೇಶ ಎಂದು ಹೇಳಿದರು.

ಇಡಿ ದೇಶದಲ್ಲಿ ಬಡ್ಡಿರಹಿತ ಸಾಲ ನೀಡೋ ರಾಜ್ಯ ಕೇವಲ ನಮ್ಮ ಕರ್ನಾಟಕ ರಾಜ್ಯ ಮಾತ್ರ. ಒಂದು ದಿನದಲ್ಲಿ ಒಂದು ಕೋಟಿ ಒಂದು ಲಕ್ಷ ಹಾಲು ಉತ್ಪಾದನೆ ಮಾಡಿದೆ ನಮ್ಮ ರಾಜ್ಯ, ಆದರೆ ರೈತ ಬೆಳೆದ ಬೆಳೆಗೆ ಸರಿಯಾದ, ಯೋಗ್ಯ ಬೆಲೆ ಸಿಗುತ್ತಿಲ್ಲ. ಇದನ್ನು ನಮ್ಮ ದೇಶದ ಪ್ರಧಾನ ಮಂತ್ರಿಗಳು ತಿಕ್ಷಣವಾಗಿ ವಿಚಾರಣೆ ಮಾಡಬೇಕು ಎಂದು ತಿಳಿಸಿದರು.

ಇಂಡಿ ಶಾಸಕ ಮಾತನಾಡಿ, ರೈತ ಅಭಿವೃದ್ಧಿ ಸಲುವಾಗಿ ನಾವು ಭದ್ದ, ಯಾವುದೇ ಸರಕಾರ ಇದ್ದರೂ ನಾನು ರೈತರ ಪರ ನಿಲ್ಲುತ್ತೆನೆ. ಶ್ರೀ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಸಂಪೂರ್ಣವಾದರೆ ನಮ್ಮ ರೈತರ ಬಾಳು ಬಂಗಾರ ವಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಕೆಕೆಆರ್‌ಡಿಬಿಗೆ 13 ಸಾವಿರ ಕೋಟಿ.ರೂ ಅನುದಾನ

ನಾಗಠಾಣ ಶಾಸಕ ವಿಠ್ಠಲ ಕಡಲಟಕದೊಂಡ,ಮಾತನಾಡಿ, ನೇಗಿಲ ಮೇಲೆ ನಿಂತಿದೆ ಕರ್ಮ್, ನೇಗಿಲ ಮೇಲೆ ನಿಂತಿದೆ ಧರ್ಮ,  ರೈತ ಒಕ್ಕದೆ ಹೋದಲ್ಲಿ ಬುಕ್ಕುವದು ದೇಶ ಅಂದರೆ, ರೈತ ದುಡಿಯದೆ ಹೋದರೆ, ಬಿತ್ತನೆ ಮಾಡದೇ ಹೋದರೆ ದೇಶ ಬಿಕ್ಕೊದು ಸತ್ಯ. ಅದೇ ರಾಜಕಾರಣಿ, ಅಧಿಕಾರಿಗಳು, ತಮ್ಮ ಕೆಲಸ ನಿಲ್ಲಿಸಿದರು ದೇಶಕ್ಕೆ ತೊಂದರೆ ಆಗದು. ಆದರೆ ರೈತ ತನ್ನ ಕೆಲಸ ನಿಲ್ಲಿಸದರೆ ನಾವು ಬದುಕಲು ಸಾಧ್ಯವಿಲ್ಲ, ಎಂದರು.

ಈ ಸಂದರ್ಭದಲ್ಲಿ ಮ. ನಿ.ಪ್ರ ಡಾ. ಮಂಹಾಂತಪ್ರಭು ಮಹಾಸ್ವಾಮಿಗಳು ವಿರಕ್ತ ಮಠ ಶೆಗುಣಸಿ, pkps ಅಧ್ಯಕ್ಷ ಮಾಹದೇವ ಪೂಜಾರಿ, ಮಾನ್ಯ ಸಚಿವ ಶಿವಾನಂದ ಪಾಟೀಲ, ಇಂಡಿ ಶಾಸಕ ಯಶವಂತ್ರಾಗೌಡ ಪಾಟೀಲ, ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ಆರ್ ಬಿ ಗುಡದಿನ್ನಿ, ಈರಣ್ಣ ಎಸ್ ಕರಿಗೌಡರ, ಸಿದ್ದರಾಯ ಭೋಸಗಿ, ಎಮ್ ಆರ್ ಪಾಟೀಲ, ಶ್ರೀಮಂತ ಇಂಡಿ, ಕಲ್ಲನಗೌಡ ಪಾಟೀಲ, ಅರವಿಂದ ಪೂಜಾರಿ, ಸಂತೋಷ ಪಾಟೀಲ, ಶ್ರೀಮತಿ ಎಸ್ ಕೆ ಭಾಗ್ಯಶ್ರೀ ಇತರರು ಇದ್ದರು.

About the Author

admin

Administrator

Visit Website View All Posts

Spread the love

Post navigation

Previous: ಕೆಕೆಆರ್‌ಡಿಬಿಗೆ 13 ಸಾವಿರ ಕೋಟಿ.ರೂ ಅನುದಾನ
Next: ಕನ್ಯಾಕೊಳ್ಳೂರ ಗ್ರಾ.ಪಂ ಅನುದಾನ ದುರ್ಭಳಕೆ

Views:

18

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.