Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಕನ್ಯಾಕೊಳ್ಳೂರ ಗ್ರಾ.ಪಂ ಅನುದಾನ ದುರ್ಭಳಕೆ
  • Crime
  • State

ಕನ್ಯಾಕೊಳ್ಳೂರ ಗ್ರಾ.ಪಂ ಅನುದಾನ ದುರ್ಭಳಕೆ

admin June 16, 2025
Spread the love

ಶಹಾಪುರ:  ಸರ್ಕಾರದ ನಿಯಮ ಉಲ್ಲಂಘಿಸಿ ಕನ್ಯಾಕೊಳ್ಳುರ ಗ್ರಾ.ಪಂಗೆ ಬಂದ ಅನುದಾನವನ್ನು ಪಿಡಿಓ ಹಣಮಪ್ಪ ದೇವರಮನಿ ತಮಗೆ ಬೇಕಾದ ಏಜೆನ್ಸಿಗಳ ಮೂಲಕ ಅನುದಾನ ದುರ್ಭಳಕೆ ಮಾಡಿಕೊಂಡಿದ್ದಾರೆಂದು 19 ಜನ ಗ್ರಾ.ಪಂ ಸದಸ್ಯರಲ್ಲಿ 14 ಜನ ಗೈರು ಹಾಜರಾಗುವ ಮೂಲಕ ಸಾಮಾನ್ಯ ಸಭೆಯನ್ನು ಸದಸ್ಯರು ಬಹಿಷ್ಕಾರಿಸಿದ್ದಾರೆ.
ಗ್ರಾ.ಪಂ ಪಿಡಿಓ ಹನುಮಪ್ಪ ದೇವರಮನಿ ಅವರು ತಮ್ಮ ತಂದೆಯವರ ಅನಾರೋಗ್ಯ ಹಿನ್ನಲೇ 30 ದಿನಗಳ ವೈದ್ಯಕೀಯ ರಜೆ ಕೋರಿ ಏ.24ರಂದು ತಾ.ಪಂ ಇಓ ಅವರಿಗೆ ಮನವಿ ಮಾಡಿದ್ದು, ರಜೆಯಲ್ಲಿದ್ದ ಪಿಡಿಓ ಹಣಮಪ್ಪ ದೇವರಮನಿ ಅವರ ಜಾಗಕ್ಕೆ ತಾ.ಪಂ ಇಓ ಅವರು ಮೇ.22 ರಂದು ನೂತನ ಪಿಡಿಓ ಅಕ್ಕನಾಗಮ್ಮ ಅವರಿಗೆ ಕನ್ಯಾಕೊಳ್ಳೂರ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಾಗಿ ನೇಮಕ ಮಾಡಿ ಆದೇಶಿಸಿದ್ದಾರೆ.
ಆಶ್ಚರ್ಯ ಎಂದರೆ ರಜೆಯಲ್ಲಿದ್ದ ಪಿಡಿಓ ಹಣಮಪ್ಪ ದೇವರಮನಿ ಮೇ.26 ರಂದು ಸರ್ಕಾರದ ಅನುದಾನವನ್ನು ತಮನೆ ಪರಿಚಯ ವಿರುವ ಏಜೆನ್ಸಿಗಳಿಗೆ 4,09,513 ರೂ. ಹಣವನ್ನು ಎಲೆಕ್ಟ್ರಿಕ್ ಮತ್ತು ವಾಟರ್ ಸಪ್ಲೈ ಹೆಸರಿನಲ್ಲಿ ವೋಚರ್ ನೀಡಿ ಅನುದಾನದ ಖರ್ಚು ಹಾಕಿದ್ದು, ಇದೇ ರೀತಿ ಲಕ್ಷಾನುಗಟ್ಟಲೆ ಹಣವನ್ನು ಖರ್ಚು ಹಾಕಿದ್ದಾರೆ. ಈಗೀರುವ ಅಕ್ಕನಾಗಮ್ಮ ಅವರಿಗೆ ಕೇಳಿದರೆ ಅನುದಾನ ಖರ್ಚು ನಾನು ಹಾಕಿಲ್ಲಾ ಎಂದು ಹೇಳುತ್ತಿದ್ದಾರೆ. ಹಿಂದೆ ಇದ್ದ ಪಿಡಿಓ ಹಣಮಪ್ಪ ದೇವರಮನಿ ಅನುದಾನ ಖರ್ಚು ಹಾಕಿ ಅನುದಾನ ದುರ್ಭಳಕೆ ಮಾಡಿಕೊಂಡಿದ್ದು. ಈ ಬಗ್ಗೆ ಇಡೀ ಗ್ರಾ.ಪಂನ್ನು ಸೂಕ್ತ ತನಿಖೆಗೆ ಒಳಪಡಿಸಬೇಕು ಎಂದು ಮಾಜಿ ಗ್ರಾ.ಪಂ ಅಧ್ಯಕ್ಷೆ ಯಲ್ಲಮ್ಮ ರಾಮಸ್ವಾಮಿ ಮತ್ತು ಸದಸ್ಯರು ಆಗ್ರಹಿಸಿ ಸಿಇಓ ಮತ್ತು ಇಓ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಮೇ. 22 ರಂದು ನಾನು ಕರ್ತವ್ಯಕ್ಕೆ ಸೇರಿದ್ದು, ಅನುದಾನ ಖರ್ಚಿನ ಬಗ್ಗೆ ನನಗೆ ಗೊತ್ತಿಲ್ಲಾ. ಆದರೆ ಸೋಮವಾರ ಕನ್ಯಾಕೊಳ್ಳುರ ಗ್ರಾ.ಪಂ ಅಧ್ಯಕ್ಷರು ಮತ್ತು ಸದಸ್ಯರ ಸಾಮಾನ್ಯ ಸಭೆ ಕರೆಯಲಾಗಿತ್ತು ಮತ್ತು ವಾರದ ಹಿಂದೆ ಸಭೆಯ ಕುರಿತು ಸದಸ್ಯರಿಗೆ ಪತ್ರದ ಮೂಲಕ ತಿಳಿಸಲಾಗಿತ್ತು. 19 ಜನ ಗ್ರಾ.ಪಂ ಸದಸ್ಯರಲ್ಲಿ 5 ಮಂದಿ ಹಾಜರಾಗಿದ್ದು, ಉಳಿದ ಸದಸ್ಯರೆಲ್ಲರೂ ಗೈರಾಗಿದ್ದಾರೆ ಎಂದು ಪಿಡಿಓ ಅಕ್ಕನಾಗಮ್ಮ ಹೇಳಿದರು.

ಗ್ರಾ.ಪಂಗೆ ಬಂದ ಅನುದಾನ ಬಗ್ಗೆ ಪ್ರಶ್ನಿಸುವ ಸದಸ್ಯರಿಗೆ ಪಿಡಿಓ ಮತ್ತು ಅಧ್ಯಕ್ಷರು ಸೇರಿ ಸರಿಯಾದ ಮಾಹಿತಿ ನೀಡುವುದಿಲ್ಲಾ. ಸದಸ್ಯರಿಗೂ ಸಹ ಆಮಿಷ್ಯ ತೋರಿಸಿ ಅನುದಾನವನ್ನು ಲೂಟಿ ಮಾಡಿದ್ದಾರೆ. ಈ ಬಗ್ಗೆ ತಾ.ಪಂ ಇಓ ಅವರ ಗಮನಕ್ಕೂ ಸಹ ತರಲಾಗಿದೆ. ಆದರೆ ಮೌನವಾಗಿದ್ದು ಇದು ಅನುಮಾನಕ್ಕೀಡು ಮಾಡಿದ್ದು, ಇಡೀ ಪಂಚಾಯತ್ ಕುರಿತು ಸಿಇಓ ಅವರು ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡಬೇಕೆಂದು ಕನ್ಯಾಕೊಳ್ಳುರ ಗ್ರಾ.ಪಂ ಸದಸ್ಯರು ಗೇನುಸಿಂಗ್  (ಜಾಪಾ ನಾಯಕ ತಾಂಡಾ ವಾರ್ಡ್.4) ಹೇಳಿದರು.
ನೇಪ ಹೇಳಿ ಜಾರಿಕೊಳ್ಳುವ ಇಓ
ಕನ್ಯಾಕೊಳ್ಳೂರ ಗ್ರಾ.ಪಂನಲ್ಲಿ ನಡೆಯಲಾದ ಅನುದಾನ ದುರ್ಭಳಕೆಯ ಆರೋಪದ ಕುರಿತು ಕೇಳಲು ತಾ.ಪಂ ಇಓ ಬಸವರಾಜ ಶರಬೈ ಅವರಿಗೆ ಕರೆ ಮಾಡಿದರೆ ಮಿಟಿಂಗ್‌ನಲ್ಲಿ ಇದ್ದೀನಿ ಎಂದು ನೇಪ ಹೇಳಿ ಜಾರಿಕೊಳ್ಳುತ್ತಾರೆ. ತಾಲೂಕಿನ ಹಲವು ಗ್ರಾಮ ಪಂಚಾಯಿತಿಯಲ್ಲಿ ಸಾಕಷ್ಟು ಭ್ರಷ್ಟಚಾರ ತಾಂಡವವಾಡುತ್ತಿದ್ದು, ಇದರ ಬಗ್ಗೆ ಪರಿಶೀಲನೆ ನಡೆಸುವ ಗೋಜಿಗೆ ಇಓ ಅವರು ಹೋಗಲ್ಲಾ. ಯಾಕೆ ಮೀನಾಮೇಶ ಏಣಿಸುತ್ತಿದ್ದಾರೆ ಎನ್ನುವುದು ಸಾರ್ವಜನಿಕರ ಪ್ರಶ್ನೇಯಾಗಿದೆ. ಇದೇ ರೀತಿ ಮುಂದುವರೆದರೆ ಸರ್ಕಾರದ ಅನುದಾನ ಭ್ರಷ್ಟ ಅಧಿಕಾರಿಗಳ ಪಾಲಾಗುವುದು ಗ್ಯಾರಂಟಿ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ.

About the Author

admin

Administrator

Visit Website View All Posts

Spread the love

Post navigation

Previous: ರೈತರು ವೈಜ್ಞಾನಿಕ ಕೃಷಿ ಮಾಡಿ ಲಾಭ ಪಡೆಯಿರಿ: ಶಿವಾನಂದ ಪಾಟೀಲ್
Next: ಕೌಶಲ್ ಮಂಥನ ಕಾರ್ಯಕ್ರಮ

Views:

38

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.