ಬೆಂಗಳೂರು: ಮುಡಾ ಹಗರಣ ಇಡೀ ರಾಜ್ಯ ಮಾತ್ರವಲ್ಲದೆ ಇಡೀ ದೇಶದಲ್ಲೇ ಸಂಚಲನ ಸೃಷ್ಟಿಸಿತ್ತು. ಇಡಿ ಅಧಿಕಾರಿಗಳು ಕಳೆದ ಕೆಲವು ದಿನಗಳ ಹಿಂದೆ 162 ಸೈಟುಗಳನ್ನು ವಶಪಡಿಸಿಕೊಂಡಿದ್ದರು. ಮತ್ತೆ ಇದೀಗ 92 ಸೈಟುಗಳನ್ನು ವಶಪಡಿಸಿಕೊಂಡಿದ್ದು ಇದರ ಮೊತ್ತ ಬರೋಬ್ಬರಿ 100 ಕೋಟಿ ಯಾಗುತ್ತದೆ ಎಂದು ಇಡಿ (ಜಾರಿ ನಿರ್ದೇಶನಲಯ) ಈ ಕುರಿತು ಟ್ವಿಟ್ ಮೂಲಕ ಮಾಹಿತಿ ಹಂಚಿಕೊಂಡಿದೆ.
ಮುಡಾ ಹಗರಣದಲ್ಲಿ ಮೊದಲಿನಿಂದಲೂ ಹಿರಿದು ಇಲ್ಲಿಯವರೆಗೆ ಒಟ್ಟು 400 ಕೋಟಿ ವೆಚ್ಚದ ಸೈಟ್ಗಳನ್ನು ವಶಪಡಿಸಿಕೊಂಡಿದೆ ಎಂದು ಮಾಹಿತಿ ಹಂಚ್ಕೊಂಡಿದೆ.
PMLA (ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ, 2002) ಕಾಯಿದೆಯಡಿ ಸಿಎಂ ಸಿದ್ದರಾಮಯ್ಯ ಹಾಗೂ ಇತರರಿಗೆ ಸೇರಿದ 92 ಸೈಟ್ಗಳನ್ನು ಜಪ್ತಿ ಮಾಡಲಾಗಿದೆ. ಇದನ್ನೂ ಓದಿ: ಚಿನ್ನಸ್ವಾಮಿ ಕ್ರೀಡಾಂಗಣ ಶಿಫ್ಟ್ ಮಾಡುವ ಬಗ್ಗೆ ಸಿಎಂ ಏನಂದ್ರು?
ಈ ಮೊದಲು ಮುಡಾ ಹಗರಣದಲ್ಲಿ ಇ.ಡಿ 162 ಸೈಟ್ಗಲನ್ನು ಜಪ್ತಿ ಮಾಡಿತ್ತು. 162 ಸೈಟ್ಗಳ ಮಾರುಕಟ್ಟೆ ಮೌಲ್ಯ 300 ಕೋಟಿ ರೂಪಾಯಿ. ಈಗ 92 ಸೈಟ್ಗಳ ಮಾರುಕಟ್ಟೆ ಮೌಲ್ಯ 100 ಕೋಟಿ ರೂಪಾಯಿ. ಇದುವರೆಗೂ ಒಟ್ಟು 400 ಕೋಟಿ ರೂಪಾಯಿ ಆಸ್ತಿಪಾಸ್ತಿಯನ್ನು ಜಪ್ತಿ ಮಾಡಿದ್ದೇವೆ ಎಂದ ಇ.ಡಿ ಮಾಹಿತಿ ನೀಡಿದೆ.
