Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಸಿದ್ದರಾಮಯ್ಯನವರು ಆಡಳಿತದ ಮೇಲಿನ ನಿಯಂತ್ರಣ ಕಳೆದು ಕೊಂಡಿದ್ದಾರೆ: ಟಿ.ಎ. ಶರವಣ
  • Bangalore
  • Politics
  • State

ಸಿದ್ದರಾಮಯ್ಯನವರು ಆಡಳಿತದ ಮೇಲಿನ ನಿಯಂತ್ರಣ ಕಳೆದು ಕೊಂಡಿದ್ದಾರೆ: ಟಿ.ಎ. ಶರವಣ

admin June 9, 2025 1 minute read
Spread the love

ಬೆಂಗಳೂರು: ರಾಜ್ಯದ ಆಡಳಿತ ವ್ಯವಸ್ಥೆ ಕುಸಿದು ಬಿದ್ದಿದ್ದು ಅರಾಜಕತೆ, ಅವ್ಯವಸ್ಥೆ, ಆಡಳಿತ ಬಿಕ್ಕಟ್ಟು ಉಂಟಾಗಿದೆ ಎನ್ನುವುದಕ್ಕೆ ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಘಟನೆ ಸಾಕ್ಷಿ. ಖುದ್ದು ಸಿಎಂ ಸಿದ್ದರಾಮಯ್ಯ ಪೊಲೀಸ್ ಅಧಿಕಾರಿಗಳು ಯಾವುದನ್ನು ತಮಗೆ ತಿಳಿಸಿರಲಿಲ್ಲ ಎಂದು ಟಿ.ಎ. ಶರವಣ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿಸಿಎಂ ಅವರು ವಿಧಾನಸೌಧದ ಮುಂದಿನ ಕಾರ್ಯಕ್ರಮದ ಬಗ್ಗೆ ಅಸಹಾಯಕತೆ ವ್ಯಕ್ತ ಪಡಿಸಿ ಬರೆದ ಪತ್ರವೇ ನನಗೆ ಗೊತ್ತಿಲ್ಲ ಎಂದು ಸಿಎಂ ಹೇಳಿದ್ದಾರೆ

ಖುದ್ದು ಮುಖ್ಯಮಂತ್ರಿಗಳೇ ತಮ್ಮ ನಾಯಕತ್ವದ ರಾಜ್ಯದಲ್ಲಿ ಮುಖ್ಯ ಸಂಗತಿಗಳೇ ತಮ್ಮ ಗಮನಕ್ಕೆ ಬಂದಿಲ್ಲ ಎಂದು ಹೇಳಿರುವುದು ಆಡಳಿತ ವ್ಯವಸ್ಥೆಯ ಮೇಲೆ ಅವರ ಹಿಡಿತ ಇಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದರು.

2ನೇ ಬಾರಿಗೆ ಸಿಎಂ ಆಗಿರುವ ಸಿದ್ದರಾಮಯ್ಯ ಆಡಳಿತದ ಮೇಲಿನ ನಿಯಂತ್ರಣ ಕಳೆದು ಕೊಂಡಿದ್ದಾರೆ. ಇಡೀ ಕಾರ್ಯಕ್ರಮಗಳ ಬಗ್ಗೆ ಗೃಹ ಮಂತ್ರಿಗೆ ಗೊತ್ತೇ ಇಲ್ಲ ಎನ್ನುವುದು ಇನ್ನಷ್ಟು ನಾಚಿಕೆಗೇಡಿನ ಸಂಗತಿ. ಒಬ್ಬ ಗೃಹ ಸಚಿವರಾಗಲು ಅರ್ಹತೆ ಕೆಳೆದುಕೊಂಡಿರುವ ಡಾ.ಪರಮೇಶ್ವರ್ ಯಾವ ಅರ್ಹತೆಯ ಮೇಲೆ ಅಧಿಕಾರದಲ್ಲಿ ಮುಂದುವರೆಯುತ್ತಾರೆಯೋ ಅವರೇ ಹೇಳಬೇಕು. ಇದನ್ನೂ ಓದಿ:  ಬಿಜೆಪಿ, ದಳ ಯೂಟರ್ನ್ ಹೊಡೆಯೋದೇನು ಹೊಸದಲ್ಲ: ಡಿಕೆ.ಸುರೇಶ್

ಇನ್ನು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ವರ್ತನೆ ಹಾಸ್ಯಾಸ್ಪದ. ಆರ್.ಸಿ.ಬಿ ತಂಡವನ್ನು ಸ್ವಾಗತಿಸಲು ಅವರೇ ವಿಮಾನ ನಿಲ್ದಾಣಕ್ಕೆ ಹೋಗಿ, ಅವರ ದ್ವಜ ಕೈಯಲ್ಲಿ ಹಿಡಿದು ಕೊಂಡು ಬಂದ ರೀತಿ ನೋಡಿದ್ರೆ..ತಾವು ಹೊಂದಿರುವ ಸ್ಥಾನದ ಘನತೆಯನ್ನು ಅವರು ಮರೆತಿರುವಂತಿದೆ. ಅವರ ವರ್ತನೆ ಕನ್ನಡಿಗರು ನಾಚಿ ತಲೆತಗ್ಗಿಸುವ ರೀತಿಯಲ್ಲಿ ಇದೆ.

ಚಿನ್ನಸ್ವಾಮಿ ಕ್ರೀಡಾಂಗಣದ ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟಿಲ್ಲ. ಅದಕ್ಕೂ ಸರಕಾರಕ್ಕೂ ಸಂಬಂಧ ಇಲ್ಲ ಎಂದು ಸಿಎಂ ಹೇಳಿದ್ದಾರೆ. ಹಾಗಾದ್ರೆ ಡಿಸಿಎಂ ಈ ಕಾರ್ಯಕ್ರಮಕ್ಕೆ ಯಾಕೆ ಹೋದರು? ಡಿಸಿಎಂ ಅವರನ್ನು ಸಂಪುಟದಿಂದ ಸಿಎಂ ವಜಾ ಮಾಡುತ್ತಾರ? ಎಂದು ಪ್ರಶ್ನಿಸಿದರು.

 

About the Author

admin

Administrator

Visit Website View All Posts

Spread the love

Post navigation

Previous:   ಬಿಜೆಪಿ, ದಳ ಯೂಟರ್ನ್ ಹೊಡೆಯೋದೇನು ಹೊಸದಲ್ಲ: ಡಿಕೆ.ಸುರೇಶ್
Next: ಬಾಯ್ ಫ್ರೆಂಡ್ ಅವೈಡ್ ಮಾಡಿದ್ದೇ ಕೊ*ಲೆಗೆ ಕಾರಣವಾಯ್ತಾ?

Views:

18

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.