Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಬಾಯ್ ಫ್ರೆಂಡ್ ಅವೈಡ್ ಮಾಡಿದ್ದೇ ಕೊ*ಲೆಗೆ ಕಾರಣವಾಯ್ತಾ?
  • Bangalore
  • Crime
  • State

ಬಾಯ್ ಫ್ರೆಂಡ್ ಅವೈಡ್ ಮಾಡಿದ್ದೇ ಕೊ*ಲೆಗೆ ಕಾರಣವಾಯ್ತಾ?

admin June 9, 2025 1 minute read
Spread the love

ಬೆಂಗಳೂರು: ಪ್ರೀತಿಗೆ ಕಣ್ಣಿಲ್ಲ ಅಂತ ಕೆಲವರು ಹೇಳ್ತಾರೆ. ಆದರೆ ಮೋಹ ದಾಹಕ್ಕೆ ಬಲಿಯಾಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿರುವ ಎಷ್ಟೋ ಉದಾಹರಣೆಗಳಾಗಿವೆ. ಅದರಂತೆ ಇಂದು ಬೆಂಗಳೂರು ನಗರದಲ್ಲಿ ದುರ್ಘಟನೆ ಒಂದು ನಡೆದು ಹೋಗಿದೆ.

ಹೌದು, 36 ವರ್ಷದ ವಿವಾಹಿತ ಮಹಿಳೆ ಜೊತೆ 24 ವರ್ಷದ ಯುವಕ ಅಕ್ರಮ ಸಂಬಂಧ ಬೆಳೆಸಿದ್ದು, ಗಂಡನಿಗೆ ಅಕ್ರಮ ಸಂಬಂಧ ಗೊತ್ತಾಗುತ್ತಿದ್ದಂತೆ ಬಾಯ್ ಫ್ರೆಂಡ್ ಅನ್ನು ಅವೈಡ್ ಮಾಡಿದ್ದಕ್ಕೆ ಓಯೋ ರೂಮಿಗೆ ಕರೆದುಕೊಂಡು ಹೋಗಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

36 ವರ್ಷದ ಹರಿಣಿಯ ಪತಿ ದಾಸೇಗೌಡ. ಈ ದಂಪತಿ ಕೆಂಗೇರಿಯಲ್ಲಿ ವಾಸವಿದ್ದರು. ಕೆಲ ತಿಂಗಳ ಹಿಂದೆ ಕೆಂಗೇರಿ ಏರಿಯಾದಲ್ಲಿ ಜಾತ್ರೆ ಇತ್ತು. ಈ ಜಾತ್ರೆಗೆ ಟೆಕ್ಕಿ ಯಶಸ್ ಹೋಗಿದ್ದು, ಗೃಹಿಣಿ ಹರಿಣಿಗೆ ಪರಿಚಯವಾಗಿದ್ದ. ಜಾತ್ರೆಯಲ್ಲೇ ಹರಿಣಿ, ಯಶಸ್‌ ಇಬ್ಬರ ಫೋನ್ ನಂಬರ್ ಕೂಡ ಎಕ್ಸ್‌ಚೇಂಜ್ ಆಗಿತ್ತು.

ಜಾತ್ರೆಯಲ್ಲಿ ಪರಿಚಯವಾದ ಬಳಿಕ ವಿವಾಹಿತ ಮಹಿಳೆ ಹರಿಣಿ ಹಾಗೂ ಟೆಕ್ಕಿ ಯಶಸ್ ಮಧ್ಯೆ ಸ್ನೇಹ ಬೆಳೆದು, ಚಾಟಿಂಗ್, ಡೇಟಿಂಗ್ ಕೂಡ ಮಾಡಿದ್ರು. ಹಲವು ಬಾರಿ ಇದೇ ರೀತಿ ಭೇಟಿ ಮಾಡೋದು ಫೋನ್‌ನಲ್ಲಿ ಮಾತಾಡೋದು ನಡೆಯುತ್ತಿತ್ತು.

ಹಲವು ದಿನಗಳ ಬಳಿಕ ಹರಿಣಿ ಗಂಡ ದಾಸೇಗೌಡನಿಗೆ ಇವರಿಬ್ಬರ ಅನೈತಿಕ ಸಂಬಂಧ ಗೊತ್ತಾಗಿತ್ತು. ಹರಿಣಿ ಫೋನ್‌ ಕಿತ್ತುಕೊಂಡಿದ್ದ ದಾಸೇಗೌಡ ಹೆಂಡತಿಯನ್ನು ಮನೆಯಲ್ಲೇ ಕೂಡಿ ಹಾಕಿದ್ದ.

ಕೆಲವು ತಿಂಗಳ ನಂತರ ಹೊರ ಬಂದಿದ್ದ ಹರಿಣಿ, ಮತ್ತೆ ತನ್ನ ಬಾಯ್ ಫ್ರೆಂಡ್ ಯಶಸ್ ಅನ್ನು ಸಂಪರ್ಕಿಸಿದ್ದಳು. ತಿಂಗಳುಗಳ ಕಾಲ ಪ್ರಿಯತಮೆ ಹರಿಣಿ ಸಂಪರ್ಕಕ್ಕೆ ಸಿಗದೆ ಯಶಸ್‌ ಹುಚ್ಚನಾಗಿದ್ದ.

ಹರಿಣಿ ದೂರಾಗಿದ್ದಕ್ಕೆ ಸಾಯಿಸಲು ನಿರ್ಧರಿಸಿದ್ದ ಯಶಸ್‌, ಮೊದಲೇ ಚಾಕು ಕೂಡ ಖರೀದಿಸಿ ಇಟ್ಟಿದ್ದ. ಯಾವಾಗ ಮತ್ತೆ ಹರಿಣಿ, ಯಶಸ್‌ ಅನ್ನು ಭೇಟಿ ಮಾಡ್ತಾಳೋ ಆಗ ಇಬ್ಬರು ಮಾತುಕತೆ ಮಾಡಿಕೊಂಡು ಓಯೋ ರೂಮ್‌ಗೆ ಹೋಗುತ್ತಾರೆ.

ಮತ್ತೆ ಹರಿಣಿ ಸಿಗುತ್ತಿದ್ದಂತೆ ಯಶಸ್ ರಾಯಲ್ಸ್ ಹೊಟೇಲ್‌ನಲ್ಲಿ ರೂಮ್ ಬುಕ್ ಮಾಡಿದ್ದ. ಓಯೋ ರೂಂನಲ್ಲಿ ಹರಿಣಿ ಹಾಗೂ ಯಶಸ್ ದೈಹಿಕ ಸಂಪರ್ಕ ಬೆಳೆಸಿದ್ದಾರೆ. ಬಳಿಕ ನನಗೆ ಸಿಕ್ಕವಳು ಬೇರೆ ಯಾರಿಗೂ ಸಿಗಬಾರದು ಅಂತ ನಿರ್ಧಾರ ಮಾಡಿದ್ದ ಯಶಸ್, ಮೊದಲೇ ಪ್ಲಾನ್ ಮಾಡಿದಂತೆ ಚಾಕುನಿಂದ ಬರ್ಬರವಾಗಿ ಇರಿದಿದ್ದಾನೆ. ಚಾಕುವಿನಿಂದ ಸುಮಾರು 17 ಬಾರಿ ಇರೆದು ಕೊ*ಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಜೂ. 6ರಂದು ರೂಮ್‌ನಲ್ಲಿ ಕೊ*ಲೆ ಮಾಡಿ ಯಶಸ್ ಪರಾರಿಯಾಗಿದ್ದ. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಸುಬ್ರಮಣ್ಯಪುರ ಇನ್ಸ್‌ಪೆಕ್ಟರ್ ರಾಜು FSL ತಂಡವನ್ನು ಕರೆಸಿ ಎಲ್ಲಾ ಸಾಕ್ಷ್ಯ ಸಂಗ್ರಹ ಮಾಡಿದ್ದರು.

ಜೂನ್ 8ರಂದು ಸುಬ್ರಮಣ್ಯಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಯಶಸ್ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿ ಯಶಸ್‌ ತಪ್ಪೊಪ್ಪಿಕೊಂಡಿದ್ದಾನೆ.

About the Author

admin

Administrator

Visit Website View All Posts

Spread the love

Post navigation

Previous: ಸಿದ್ದರಾಮಯ್ಯನವರು ಆಡಳಿತದ ಮೇಲಿನ ನಿಯಂತ್ರಣ ಕಳೆದು ಕೊಂಡಿದ್ದಾರೆ: ಟಿ.ಎ. ಶರವಣ
Next: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಥಗ್‌ ಲೈಫ್ ಸಿನಿಮಾ ತಂಡಕ್ಕೆ ನಿರಾಸೆ

Views:

25

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.