ಬೆಂಗಳೂರು: ಆರ್ಸಿಬಿ ಫೈನಲ್ ಪಂದ್ಯಾವಳಿಗೆ ಕ್ಷಣಕಣನೆ ಪ್ರಾರಂಭವಾಗಿದ್ದು ಇಡೀ ದೇಶದಾದ್ಯಂತ ಐಪಿಎಲ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಇಂದು ನಡೆಯಲಿರುವ ಐಪಿಎಲ್ ಪಂದ್ಯಾವಳಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವರ್ಸಸ್ ಪಂಜಾಬ್ ಕಿಂಗ್ಸ್ ನಡುವೆ ಮುಖಾಮುಖಿ ಆಗಲಿದ್ದು, ಆರ್ಸಿಬಿಯು ಈ ಬಾರಿ ಗೆದ್ದೇ ಗೆಲ್ಲುತ್ತದೆ ಎಂದು ಬೆಂಗಳೂರು ಸೇರಿದಂತೆ ಇಡೀ ಕರ್ನಾಟಕ ರಾಜ್ಯದಾದ್ಯಂತ ಆರ್ಸಿಬಿ ಅಭಿಮಾನಿಗಳು ಸಂಭ್ರಮಿಸುತಿದ್ದಾರೆ.
ಇನ್ನು ನಟ ರಮೇಶ್ ಅರವಿಂದ್ ಅವರು ಆರ್ಸಿಬಿ ಜರ್ಸಿ ತೊಟ್ಟು ಆರ್ಸಿಬಿ ತಂಡಕ್ಕೆ ಆಲ್ ದ ಬೆಸ್ಟ್ ಹೇಳಿದ್ದಾರೆ.
ಯೆಸ್…ದೈಜಿ ಸಿನೆಮಾ ತಂಡವು ನಗರದ ನ್ಯೂ ಬಿ.ಇ.ಎಲ್ ರಸ್ತೆಯಲ್ಲಿರುವ ಮಸಾಲ ಮಾರ್ಟಿನಿ ಪಬ್ ನಲ್ಲಿ ಚಿತ್ರದ ಶೂಟಿಂಗ್ ವೇಳೆ ಸಂಭ್ರಮಿಸಿ ಆರ್ಸಿಬಿ ತಂಡಕ್ಕೆ ಬೆಂಬಲ ವ್ಯಕ್ತಪಡಿಸಿತು. ಇದನ್ನೂ ಓದಿ: ಆರ್ಸಿಬಿ ಟ್ರೋಫಿ ಗೆಲ್ಲುವ ಅದ್ಭುತ ಕ್ಷಣಕ್ಕಾಗಿ ಇಡೀ ಕರ್ನಾಟಕವೇ ಕಾಯುತ್ತಿದೆ: ಡಿಕೆಶಿ
ದೈಜಿ ಸಿನೆಮಾದ ಮುಖ್ಯ ತಾರಾಗಣದಲ್ಲಿರುವ ರಮೇಶ್ ಅರವಿಂದ್, ರಾಧಿಕಾ ನಾರಾಯಣ್, ದಿಗಂತ್, ನಿಧಿ ಹೆಗ್ಡೆ ಹಾಗೂ ನಿರ್ದೇಶಕರಾದ ಆಕಾಶ್ ಶ್ರೀವತ್ಸ ಮತ್ತು ನಿರ್ಮಾಪಕರಾದ ರವಿ ಕಶ್ಯಪ್ ಇವರೆಲ್ಲರೂ ತಂಡದ ಇನ್ನಿತರ ಸದಸ್ಯರೊಂದಿಗೆ ಆರ್ಸಿಬಿ ತಂಡದ ಜೆರ್ಸಿ ಧರಿಸಿ, ಹರ್ಷೋದ್ಗಾರದೊಂದಿಗೆ ಸಂಭ್ರಮಿಸಿ ಹಾರೈಸಿದರು.
