ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿ ಫೈನಲ್ ಗೆ ತಲುಪಿ ಇಂದು (ಮಂಗಳವಾರ ಜೂನ್ 03) ರಂದು ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಹೈ ವೋಲ್ಟೇಜ್ ಪಂದ್ಯದಲ್ಲಿ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದು,ಈ ಅಖಾಡದಲ್ಲಿ ಗೆದ್ದು ಬರಬೇಕೆಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಆರ್ಸಿಬಿ ತಂಡಕ್ಕೆ ಶುಭ ಕೋರಿದ್ದಾರೆ.
ಆರ್ಸಿಬಿ ತಂಡದ ಜೆರ್ಸಿ ತೊಟ್ಟು, ಆರ್ಸಿಬಿ ಹುಡುಗರೇ ಈ ಬಾರಿ ಕಪ್ ನಮ್ದೇ ಹಾಗಾಗಿ ಗೆದ್ದು ಬನ್ನಿ ಎಂದು ಆರ್ಸಿಬಿ ತಂಡಕ್ಕೆ ವಿಶ್ ಮಾಡಿದ್ದಾರೆ.
ಕೇವಲ ಕರ್ನಾಟಕ ಮಾತ್ರವಲ್ಲದೆ ಇಡೀ ದೇಶ ನಿಮ್ಮ ಗೆಲುವಿನ ಸಂಭ್ರಮಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಕರ್ನಾಟಕ ಸರ್ಕಾರ ನಿಮ್ಮ ಬೆಂಬಲಕ್ಕಿದೆ. ಈ ಬಾರಿ ಕಪ್ ಗೆದ್ದೇ ಗೆಲ್ಲುತ್ತದೆ ಎಂದು ಕೋಟ್ಯಾಂತರ ಅಭಿಮಾನಿಗಳು ಕನಸು ಕಟ್ಟಿ ಕಾಯುತ್ತಿದ್ದಾರೆ ಆ ಕನಸನ್ನು ನನಸು ಮಾಡುವ ಭರವಸೆ ನಿಮ್ಮದು ಎಂದು ಹಾರೈಸಿದ್ದಾರೆ.
ಯೆಸ್..ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಆರ್ಸಿಬಿ ತಂಡದ ಜೆರ್ಸಿ ಧರಿಸಿ ಮಾತನಾಡಿದ್ದು, ಇಂತಹ ಅದ್ಭುತ ದಿನಕ್ಕಾಗಿ ಕಳೆದ 18 ವರ್ಷಗಳಿಂದ ಕಾತುರದಿಂದ ಕಾಯುತ್ತಿದ್ದೇವೆ. ಟ್ರೋಫಿಗಾಗಿ ಸಾಕಷ್ಟು ಶ್ರಮ ಪಟ್ಟು ಆರ್ಸಿಬಿ ಕೊನೆಗೆ ಐಪಿಎಲ್ನಲ್ಲಿ ಫೈನಲ್ ತಲುಪಿದೆ. ಇಂದು ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಖಾಡಕ್ಕೆ ಇಳಿಯುತ್ತಿದೆ. ಇಡೀ ರಾಜ್ಯವೆಲ್ಲಾ ಟ್ರೋಫಿ ಗೆದ್ದು ಬರಲಿ ಎಂದು ಆರ್ಸಿಬಿ ತಂಡದ ಹಿಂದೆ ನಿಂತಿದೆ. ಆ ಅದ್ಭುತ ಕ್ಷಣವನ್ನು ಸಾಧಿಸಿ ತೋರಿಸಿ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಇದನ್ನೂ ಓದಿ: ಐಪಿಎಲ್ ಕಾದಾಟದಲ್ಲಿ ಕಪ್ ಗೆಲ್ಲೋರು ಯಾರು?
ಆರ್ಸಿಬಿ ಕೇವಲ ಜೆರ್ಸಿ ಅಲ್ಲ, ಅದರ ಮೇಲೆ ಮಿಲಿಯನ್, ಮಿಲಿಯನ್ ಡ್ರೀಮ್ಗಳು ಇವೆ. ನಾವು ನಿಮ್ಮೊಂದಿಗೆ ಇದ್ದೇವೆ. ಕರ್ನಾಟಕ ಹಾಗೂ ಇಲ್ಲಿನ ಸರ್ಕಾರವೆಲ್ಲಾ ನಿಮ್ಮೊಂದಿಗೆ ನಿಂತಿದೆ. ಆರ್ಸಿಬಿ ಹುಡುಗರೇ ತವರಿಗೆ ಕಪ್ ಗೆದ್ದುಕೊಂಡು ಬನ್ನಿ. ಟ್ರೋಫಿಗಾಗಿ ಕರ್ನಾಟಕದ ಕೋಟಿ ಕೋಟಿ ಜನರು ಹಾಗೂ ನಾನು ಕಾಯುತ್ತಿದ್ದೇನೆ. ಎಲ್ಲರಿಗೂ ಆಲ್ ದೀ ಬೆಸ್ಟ್ ಎಂದು ಡಿ.ಕೆ ಶಿವಕುಮಾರ್ ಅವರು ಶುಭ ಹಾರೈಸಿದ್ದಾರೆ.
