ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಅಂತರಾಷ್ಟ್ರೀಯ ಭೂಕರ್ ಪ್ರಶಸ್ತಿ ಪುರಸ್ಕಾರರಾದ ಶ್ರೀಮತಿ ಭಾನು ಮುಸ್ತಾಕ್ ಹಾಗೂ ಶ್ರೀಮತಿ ದೀಪಾ ಭಾಸ್ತಿ ಅವರಿಗೆ ಕರ್ನಾಟಕ ಸರ್ಕಾರದ ವತಿಯಿಂದ ಅಭಿನಂದನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ವಿಧಾನಸೌಧದ ಬ್ಯಾರಿಕೆಟ್ ಹಾಲಿನಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಭೂಕರ್ ಪ್ರಶಸ್ತಿ ಪಡೆದವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕನ್ನಡ ಮತ್ತು ಸಾಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ್ ತಂಗಡಗಿಯವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಶಿವರಾಜ್ ತಂಗಡಗಿಯವರು, ಭೂಕರ್ ಪ್ರಶಸ್ತಿಯನ್ನು ಭಾನು ಮುಸ್ತಾಕ್ ಹಾಗೂ ಶ್ರೀಮತಿ ದೀಪಾ ಭಾಸ್ತಿ ಪಡೆದಿರುವುದು ನಮ್ಮ ಕರ್ನಾಟಕ ರಾಜ್ಯಕ್ಕೆ ಹೆಮ್ಮೆಯ ಸಂಗತಿ ಹಾಗಾಗಿ ಸರ್ಕಾರದ ವತಿಯಿಂದ ನಾವು ಇವರನ್ನು ಸನ್ಮಾನಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಅದರಂತೆ ಇಂದು (ಸೋಮವಾರ ಜೂನ್ 02) ರಂದು ಇಬ್ಬರನ್ನು ನಾವು ಸನ್ಮಾನಿಸುತ್ತಿರುವುದು ನಮ್ಮ ಹೆಮ್ಮೆಯ ಸಂಗತಿ ಎಂದರು. ನಮ್ಮ ಕನ್ನಡ ಭಾಷೆ, ನಾಡು ನುಡಿ, ಸಂಸ್ಕೃತಿ ಇವೆಲ್ಲವೂ ಅತ್ಯಂತ ಪ್ರಾಚೀನವೂ ವೈವಪೂರ್ಣವಾಗಿವೆ. ಅತ್ಯಂತ ಶ್ರೀಮಂತ ಉಳ್ಳ ನಮ್ಮ ಭಾಷೆ ನಿತ್ಯ ನೂತನ ವಿನೂತನ ನಿರಂತರವಾಗಿದೆ ಎಂದರು. ಇದನ್ನೂ ಓದಿ: ಹೇಮಾವತಿ ಲಿಂಕ್ ಕೆನಾಲ್ ಹೋರಾಟಗಾರರ ಮಹತ್ವದ ಸಭೆ
ಈ ಸಂದರ್ಭದಲ್ಲಿ ಸಚಿವ ಜಮೀರ್ ಅಹಮದ್ ಖಾನ್, ಬಸವರಾಜ್ ಹೊರಟ್ಟಿ, ಶಾಸಕ ರಿಜ್ವಾನ್ ಹರ್ಷದ್ ಸೇರಿದಂತೆ ಇನ್ನೂ ಹಲವರು ಭಾಗಿಯಾಗಿದ್ದರು.
