ಬೆಂಗಳೂರು: ಕನ್ನಡ ಭಾಷೆ ತಮಿಳಿನಿಂದ ಹುಟ್ಟಿಕೊಂಡಿದೆ ಎಂದು ಖ್ಯಾತ ನಟ ಕಮಲ್ ಹಾಸನ್ ಮಾತನಾಡಿ ಕನ್ನಡಿಗರ ಕಂಗೆಣ್ಣಿಗೆ ಗುರಿಯಾಗಿದ್ದ ಅವರಿಗೆ ಕನ್ನಡದ ನಟಿ ಕನ್ನಡ ಪುಸ್ತಕ ನೀಡಿದ್ದಾರೆ.
ಹೌದು, ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ತಮಿಳಿನ ಖ್ಯಾತ ನಟ ಕಮನ್ ಹಾಸನ್ ಅವರು ಕನ್ನಡಿಗರ ಕಿಚ್ಚಿಗೆ ಗುರಿಯಾಗಿದ್ದಾರೆ.
ಇನ್ನು ನಾನು ಕನ್ನಡದ ಬಗ್ಗೆ ಯಾವುದೇ ರೀತಿ ತಪ್ಪಾಗಿ ಮಾತನಾಡಿಲ್ಲ ನಾನು ಕ್ಷಮೆ ಕೇಳುವುದಿಲ್ಲ ಎಂದು ಹೇಳುವ ಮೂಲಕ ಮತ್ತಷ್ಟು ಕನ್ನಡಿಗರನ್ನು ಕೆರಳಿಸುವಂತೆ ಕಮಲ್ ಹಾಸನ್ ಮಾಡಿದ್ದಾರೆ.
ಇದರ ಬೆನ್ನಲ್ಲೇ ಇದೀಗ ಕನ್ನಡತಿ ಸೀರಿಯಲ್ ನ ಖ್ಯಾತ ನಟಿ ರಜನಿ ರಾಘವನ್ ಕಮಲ್ ಹಾಸನ್ ಅವರಿಗೆ ಕನ್ನಡ ಪುಸ್ತಕ ಕೊಟ್ಟಿದ್ದಾರೆ. ಇದನ್ನೂ ಓದಿ: ಸೋನಾಲ್ ತರುಣ್ ಬಗ್ಗೆ ಶೃತಿ ಹೇಳಿದ್ದೇನು?
ಕನ್ನಡತಿ ಸೀರಿಯಲ್ ಖ್ಯಾತಿಯ ರಂಜನಿ ರಾಘವನ್ ಕಮಲ್ ಹಾಸನ್ ಗೆ ಕನ್ನಡ ಪುಸ್ತಕ ಕೊಟ್ಟಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ರಂಜನಿ ರಾಘವನ್ ನಟಿ ಮಾತ್ರ ಅಲ್ಲ, ಒಳ್ಳೆಯ ಬರಹಗಾರ್ತಿ ಕೂಡ ಹೌದು. ‘ಕತೆ ಡಬ್ಬಿ’ ಎಂಬ ಕಥಾಸಂಕಲನದ ಜೊತೆಗೆ ‘ಸ್ವೈಪ್ ರೈಟ್’ ರಂಜನಿ ರಾಘವನ್ ಹೊಸ ಪುಸ್ತಕ ಬರೆದಿದ್ದಾರೆ. ಈ ಪುಸ್ತಕವನ್ನು ಕಮಲ್ ಹಾಸನ್ ಗೆ ಕೊಟ್ಟಿದ್ದಾರೆ.
