ಬೆಂಗಳೂರು: ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಖುದ್ದಾಗಿ ನಾನೇ ಭೇಟಿ ಮಾಡಿದ್ದೇನೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಎಲೆಕ್ಟ್ರಿಕ್ ಬಸ್ ನೀಡಿರುವುದಕ್ಕೆ ಸರ್ಕಾರದಿಂದ ಯಾವುದೇ ಅಭಿನಂದನೆ ಸಲ್ಲಿಸಿಲ್ಲ ಎಂಬ ಟೀಕೆಗೆ ಪ್ರತಿಕ್ರಿಯಿಸಿದ ಸಾರಿಗೆ ಸಚಿವರು, ಖುದ್ದು ಹೆಚ್ ಡಿ ಕುಮಾರಸ್ವಾಮಿ ಅವರನ್ನು ನಾನೇ ಭೇಟಿಯಾಗಿದ್ದೇನೆ ಎಂದು ಹೇಳಿದ್ದಾರೆ.
ಗ್ರಾಸ್ ಕಾಸ್ಟ್ ಕಂಟ್ರ್ಯಾಕ್ಟ್ ಸ್ಕೀಮಿನಡಿ ರಾಜ್ಯಕ್ಕೆ 4,500 ಎಲೆಕ್ಟ್ರಿಕ್ ಬಸ್ ಸಿಕ್ಕಿರೋದು ಸತ್ಯ, ರಾಜ್ಯ ಸರ್ಕಾರ 10,000 ಬಸ್ಗಳಿಗೆ ಬೇಡಿಕೆಯಿಟ್ಟಿತ್ತು, ಕೇಂದ್ರವು 7,500 ಬಸ್ಗಳನ್ನು ನೀಡುವ ಭರವಸೆ ನೀಡಿತ್ತು, ಅದರೆ 4,500 ಬಸ್ಗಳನ್ನು ಮಾತ್ರ ನೀಡಿದೆ, ಅವರು ನೀಡಿರುವ ಬಸ್ಗಳನ್ನು ಖಾಸಗಿ ಸಂಸ್ಥೆಗಳು ಆಪರೇಟ್ ಮಾಡುತ್ತವೆ ಎಂದು ರಾಮಲಿಂಗಾರೆಡ್ಡಿ ಹೇಳಿದರು. ಇದನ್ನೂ ಓದಿ: ಡಿಡಿಪಿಐಗಳಿಗೆ ಸಿಎಂ ಬಿಗ್ ಶಾಕ್
ಮೂರು ಪ್ರವೇಟ್ ಕಂಪನಿಗಳು ಕೇಂದ್ರ ಸರ್ಕಾರದ ನೀತಿಯಂತೆ ಎಲೆಕ್ಟ್ರಿಕ್ ಬಸ್ ಗಳನ್ನು ಬಳಸಿಕೊಳ್ಳಲು ಮುಂದಾಗಿದ್ದಾರೆ ಎಂದಿದ್ದಾರೆ.
