ಬೆಂಗಳೂರು: ʼಕಣ್ಣಪ್ಪʼ ಚಿತ್ರ ಈಗಾಗಲೇ ತನ್ನ ಎಲ್ಲಾ ಚಿತ್ರೀಕರಣವನ್ನು ಮುಗಿಸಿ ಇನ್ನೇನು ತೆರೆ ಮೇಲೆ ಅಪ್ಪಳಿಸಲು ಸಜ್ಜಾಗಿರುವ ಕಣ್ಣಪ್ಪ ಚಿತ್ರ ಇದೇ ಜೂನ್ 27ರಂದು ಬಹು ಭಾಷೆಯಲ್ಲಿ ತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದ್ದು ಈ ಚಿತ್ರದ ಪ್ರಚಾರಕ್ಕಾಗಿ ಮೋಹನ್ ಬಾಬು, ವಿಷ್ಣು ಮಿಂಚು ಬೆಂಗಳೂರಿಗೆ ಆಗಮಿಸಿದ್ದಾರೆ.
ಇನ್ನು ಕನ್ನಡ ಚಿತ್ರರಂಗದ ಖ್ಯಾತ ನಟ ಡಾ. ಶಿವರಾಜ್ ಕುಮಾರ್ ಅವರು ಕೂಡ ಕಣ್ಣಪ್ಪ ಚಿತ್ರದ ಪ್ರಚಾರದಲ್ಲಿ ತೊಡಗಿದ್ದಾರೆ. ಇಂದು (ಶನಿವಾರ ಮೇ 31) ರಂದು ಬೆಂಗಳೂರಿನಲ್ಲಿ ಕಣ್ಣಪ್ಪ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ನಟ ಶಿವರಾಜ್ ಕುಮಾರ್ ಅವರು ಭಾಗಿಯಾಗಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವರಾಜ್ ಕುಮಾರ್ ಅವರು, ‘ಕಣ್ಣಪ್ಪ’ ಚಿತ್ರ ಮಾಡಲು ಧೈರ್ಯ ಬೇಕು. ವಿಷ್ಣು ಮಂಚು ಅವರು ಭಕ್ತಿಯಿಂದ ಚಿತ್ರ ಮಾಡಿದ್ದಾರೆ. ಚಿತ್ರದ ಲುಕ್ ಅದ್ಭುತವಾಗಿ ಮೂಡಿ ಬಂದಿದೆ. ವಿಷ್ಣು ಈ ರೀತಿಯ ಸಿನಿಮಾ ಮಾಡಿದ್ದಕ್ಕೆ ಅವರ ಮೇಲಿನ ಗೌರವ ಹೆಚ್ಚಾಯ್ತು ಎಂದರು. ಇದನ್ನೂ ಓದಿ: ವಿದೇಶಕ್ಕೆ ಹಾರಲು ʼಡೆವಿಲ್ʼ ರೆಡಿ..!
ಮೋಹನ್ ಬಾಬು ಈ ತರ ಸಿನಿಮಾ ಒಪ್ಪಿ ಮಾಡಿದ್ದು ಗ್ರೇಟ್. ಜನ ಈ ತರ ಸಿನಿಮಾ ನೋಡಬೇಕು. ಕಾಳಹಸ್ತಿ ಅಂದರೆ ಏನು ತಿಳಿದುಕೊಳ್ಳಬೇಕು. ನ್ಯೂಜಿಲ್ಯಾಂಡ್ಗೆ ತೆರಳಿ ಶೂಟಿಂಗ್ ಮಾಡಿದ್ದಾರೆ. ನಿರ್ದೇಶಕರು ಆಸಕ್ತಿಯಿಂದ ಸಿನಿಮಾ ಮಾಡಿದ್ದಾರೆ. 100% ಈ ಚಿತ್ರ ಸೂಪರ್ ಡೂಪರ್ ಹಿಟ್ ಆಗುತ್ತದೆ ಎಂದಿದ್ದಾರೆ. ಶಿವನ ಲೀಲೆ ಯಾವಾಗಲೂ ಕಾಪಾಡುತ್ತದೆ ಎಂದು ಚಿತ್ರತಂಡಕ್ಕೆ ನಟ ಭರವಸೆ ತುಂಬಿದರು.
