ಮೈಸೂರು: ಮೈಸೂರು ನಗರದಲ್ಲಿ ಅಪರಿಚಿತ ವ್ಯಕ್ತಿ ಒಬ್ಬರು ನಾಲ್ವಡಿ ಕೃಷ್ಣರಾಯ ಒಡೆಯ ಪ್ರತಿಮೆ ಮೇಲೆ ಕುಳಿತು ಹುಚ್ಚಾಟ ಮೆರೆಯುವದರ ಜೊತೆಗೆ ನಾಲ್ವಡಿ ಕೃಷ್ಣ ರಾಜ ಒಡೆಯರ ಪ್ರತಿಮೆಗೆ ಬೀಡಿ ಇಟ್ಟಿದ್ದಾನೆ.
ಅಷ್ಟೇ ಅಲ್ಲದೆ ನಾಲ್ವಡಿ ಕೃಷ್ಣರಾಯ ಒಡೆಯರ ಪ್ರತಿಮೆಯ ತಲೆ ಮೇಲೆ ಹತ್ತಿ ಕುಳಿತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲಾಗುತ್ತಿದೆ. ಅಲ್ಲಿದ್ದ ಸಾರ್ವಜನಿಕರು ಆ ವ್ಯಕ್ತಿಯನ್ನು ಹೇಗೋ ಮಾಡಿ ಪ್ರತಿಮೆ ಮೇಲಿಂದ ಕೆಳಗಿಳಿಸಿದ್ದಾರೆ.
ಈ ಘಟನೆ ನಗರದ ಕೆ.ಆರ್.ವೃತ್ತದಲ್ಲಿ ನಡೆದಿದೆ. ವ್ಯಕ್ತಿಯ ಹುಚ್ಚಾಟ ಕಂಡು ಕೆಲ ಕಾಲ ಜನರು ಗಾಬರಿಯಾಗಿದ್ದರು. ಸದ್ಯ ಪರಾರಿಯಾಗಿರುವ ವ್ಯಕ್ತಿಯ ಪತ್ತೆಗೆ ದೇವರಾಜ ಠಾಣೆ ಪೊಲೀಸರು ಮುಂದಾಗಿದ್ದಾರೆ. ಇದನ್ನೂ ಓದಿ: ರಾಜ್ಯದ 7 ಜಿಲ್ಲೆಗಳಲ್ಲಿ ಲೋಕಾ ರೇಡ್
