ಕಲಬುರಗಿ: ರಾಜ್ಯದ 7 ಜಿಲ್ಲೆಗಳಲ್ಲಿ ಭ್ರಷ್ಟ ಅಧಿಕಾರಿಗಳ ಮೇಲೆ ಏಕಾಏಕಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಕಲಬುರ್ಗಿಯ ಪಿಡಬ್ಲ್ಯೂಡಿ ಸೂಪರಿಂಟೆಂಡೆಂಟ್ ಇಂಜಿನಿಯರ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ
ಇನ್ನು ಲೋಕಾಯುಕ್ತ ಎಸ್.ಪಿ – ಬಿಕೆ. ಉಮೇಶ್ ನೇತೃತ್ವದಲ್ಲಿ ಬಳ್ಳಾರಿ ಪಿಡಬ್ಲ್ಯೂಡಿ ವೃತ್ತ ದ ಸೂಪರಡೆಂಟ್ ಇಂಜಿನಿಯರ್ ಅಮೀನಾ ಮುಖ್ತಾರ ಅವರ ಕಲಬುರಗಿ ಹಾಗೂ ಬಳ್ಳಾರಿಯಲ್ಲಿರುವ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳು ಇಂದು (ಶನಿವಾರ ಮೇ 31) ರಂದು ಬೆಳಗ್ಗೆಯಿಂದಲೇ ಆದಾಯಕ್ಕಿಂತ ಹೆಚ್ಚು ಆಸ್ತಿಗಳಿಕೆ ಆರೋಪದ ಮೇಲೆ ದಾಳಿ ನಡೆದಿದೆ. ಇದನ್ನೂ ಓದಿ: ರಾಜ್ಯದ 7 ಜಿಲ್ಲೆಗಳಲ್ಲಿ ಲೋಕಾ ರೇಡ್
ಕಲಬುರಗಿ ನಗರದ ಮನೆ, ಬಳ್ಳಾರಿ ಮನೆ, ಕಲಬುರಗಿ ನಗರದ ಅಪಾರ್ಟ್ಮೆಂಟ್ ಏಷಿಯನ್ ಲೈಫ್ ಸ್ಟೈಲ್ ಮನೆ ಮತ್ತು ಕಚೇರಿಯಲ್ಲಿ ಶೋಧ ಮುಂದುವರಿಸಿದ್ದಾರೆ.
ಲೋಕಾಯುಕ್ತ ಎಸ್ ಪಿ ಉಮೇಶ್, ಬಳ್ಳಾರಿ ಲೋಕಾಯುಕ್ತ ಎಸ್ ಪಿ ತಂಡ, ಡಿವೈಎಸ್ಪಿ. -ಗೀತಾ ಬೆನಾಳ, ಅರುಣ್ ಕುಮಾರ್ ಇನ್ಸ್ಪೆಕ್ಟರ್, ಪೊಲೀಸ್ ಸಿಬ್ಬಂದಿಗಳು ಈ ಸಂದರ್ಭದಲ್ಲಿದ್ದರು.
