ಬೆಂಗಳೂರು: ಭರತನಾಟ್ಯ ಎಂಬುವುದು ತನ್ನ ವೈಶಿಷ್ಟ್ಯಪೂರ್ಣ ಶೈಲಿ, ಭಾವಭರಿತ ಅಭಿವ್ಯಕ್ತಿ ಮತ್ತು ಸಂಪ್ರದಾಯದೊಂದಿಗೆ ಪ್ರಪಂಚಾದ್ಯಾಂತ ಗಮನ ಸೆಳೆಯುತ್ತಿರುವ ಕಲೆಯಾಗಿದ್ದು, ಈ ಭರತನಾಟ್ಯಕ್ಕೆ ಮನಸೋಲದವರೇ ಇಲ್ಲ.
ಹೌದು, ಭರತನಾಟ್ಯ ನೃತ್ಯ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿರುವುದರಿಂದ ಇದನ್ನು ಕಲಿಯಬೇಕಾದರೆ ಬಹಳ ಶ್ರದ್ದೆ ಭಕ್ತಿಯಿಂದ ಕಲಿಯಬೇಕಾಗುತ್ತದೆ.
ಇನ್ನು ಬೆಂಗಳೂರು ನಗರದಲ್ಲಿರುವ ಎಡಿಎ ರಂಗಮಂದಿರದಲ್ಲಿ (ಭಾನುವಾರ ಮೇ 25) ರಂದು ಸಂಜೆ ಸೂರ್ಯ ಪ್ರೆಸೆಂಟ್ಸ್ ಸಹನಾ ಕೌಶಿಕ್ ಅವರ ರಂಗೇತ್ರಂ-2025 ಕಾರ್ಯಕ್ರಮ ನೆರವೇರಿದ್ದು, ಕುಮಾರಿ ಸಹನಾ ಕೌಶಿಕ್ ನೃತ್ಯ ಪ್ರದರ್ಶಿಸಿದ್ದಾರೆ.
ಪ್ರತಿಯೊಬ್ಬ ಮಕ್ಕಳಿಗೂ ತಾಯಿಯೇ ಮೊದಲ ಗುರು ಎನ್ನುವ ಹಾಗೆ ಇವರ ನೃತ್ಯ ಜೀವನದಲ್ಲಿಯೂ ಕೂಡ ತಾಯಿಯೇ ಗುರು ಆಗಿ ಜೀವನಕ್ಕೆ ದಾರಿದೀಪವಾಗಿದ್ದಾರೆ. ಸೂರ್ಯ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ನಲ್ಲಿ ತಾಯಿ ಪೂರ್ಣಿಮಾ ಶಂಕರ್ ಕೌಶಿಕ್ ಅವರ ಮಾರ್ಗದರ್ಶನದಲ್ಲಿ ತಮ್ಮ ನೃತ್ಯ ಜೀವನವನ್ನು ಆರಂಭಿಸಿರುವ ಸಹನಾ ಕೌಶಿಕ್ ಅವರು ಈಗಾಗಲೇ ಹಲವಾರು ಪ್ರದರ್ಶನಗಳನ್ನು ನೀಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ದಾವಣಗೆರೆಯ ಕಾಂಗ್ರೆಸ್ ನ ಸಂಸದರಾದ ಪ್ರಭಾ ಮಲ್ಲಿಕಾರ್ಜುನ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
