ಬೆಂಗಳೂರು: ಕನ್ನಡದ ರಿಯಾಲಿಟಿ ಶೋಗಳಲ್ಲಿ ಒಂದಾದ ಕಾಮಿಡಿ ಕಿಲಾಡಿ ಶೋ ಮೂಲಕ ಹೆಸರು ಗಳಿಸಿದ ನಟ ಮಡೆನೂರು ಮನು ಸಹಕಲಾವಿದೆಗೆ ಅತ್ಯಾಚಾರ ವಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿದ್ದಾರೆ.
ವಿಧಿ ಆಟ ಎಂದರೆ ಇದೇ ಅನಿಸುತ್ತದೆ, ಇಂದು (ಶುಕ್ರವಾರ ಮೇ 23) ರಂದು ಅವರ ನಟನೆ ಮಾಡಿರುವ ʼಕುಲದಲ್ಲಿ ಕೀಳ್ಯಾವುದೋʼ ಸಿನಿಮಾ ರಿಲೀಸ್ ಆಗಿದ್ದು ಅಭಿಮಾನಿಗಳ ಜೊತೆ ಕುಳಿತು ಸಿನಿಮಾ ನೋಡಬೇಕಿತ ನಟ ಇಂದು ಕಂಬಿಗಳ ಹಿಂದೆ ಕೂರುವಂತಹ ಪರಿಸ್ಥಿತಿ ಬಂದಿದೆ.
ಇನ್ನು ಪತಿ ಪರವಾಗಿ ಪತ್ನಿ ನಿಂತಿದ್ದು, ನನ್ನ ಪತಿ ಯಾವುದೇ ತಪ್ಪು ಮಾಡಿಲ್ಲ ಇದೆಲ್ಲದು ಉದ್ದೇಶಪೂರ್ವಕವಾಗಿ ನಡೆದಿದೆ. ಕೆಲವು ಕಿವಿಗೇಡಿಗಳು ಅವರು ಬೆಳೆಯುವುದನ್ನು ಕಂಡು ಸಹಿಸಿಕೊಳ್ಳಲಾಗುತ್ತಿಲ್ಲ ಹಾಗಾಗಿ ಸಿನಿಮಾ ರಿಲೀಸ್ ಮುಂಚೇನೆ ಫ್ರೀ ಪ್ಲಾನ್ ಮಾಡಿ ಈ ದೂರು ನೀಡಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಜಕಾರಣಿಗಳೇ ಸ್ವಲ್ಪ ಈ ಕಡೆ ಗಮನಹರಿಸಿ…!
3 ವರ್ಷಗಳಿಂದ ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ಇಂದು ನನ್ನ ಗಂಡ ಥಿಯೇಟರ್ನಲ್ಲಿ ಇಲ್ಲ. ನನಗೆ ಈ ವಿಷಯ ತುಂಬ ಬೇಸರ ಆಗಿದೆ. ನಿರ್ಮಾಪಕರು, ನಿರ್ದೇಶಕರು, ತಾರಾ ಬಳಗದವರು ತುಂಬ ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ಹೀಗಾಗಿ ಯಾರಿಗೂ ಮೋಸ ಆಗಬಾರದು, ಎಲ್ಲರೂ ಸಿನಿಮಾ ನೋಡಿ ಎಂದು ಮನು ಪತ್ನಿ ಹೇಳಿದ್ದಾರೆ.
ನನ್ನ ಗಂಡ ಈ ರೀತಿ ಮಾಡ್ತಿದ್ರೆ ನಾನು ಸುಮ್ಮನೆ ಇರುತ್ತಿರಲಿಲ್ಲ. ರಿಯಾಲಿಟಿ ಶೋನಲ್ಲಿ ಸ್ಕ್ರಿಪ್ಟ್ ರಿಹರ್ಸಲ್ ಹೇಗಿರತ್ತೋ ಹಾಗೆ ಇಲ್ಲಿಯೂ ಏನೋ ಆಗಿರತ್ತೆ. ಎಲ್ಲದಕ್ಕೂ ತನಿಖೆ ಆಗಬೇಕು, ಸತ್ಯ ಹೊರಗಡೆ ಬರಬೇಕು ಎಂದು ಹೇಳಿದ್ದಾರೆ.
