ಬೆಂಗಳೂರು: ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಸಕ್ಕತ್ ಗ್ಲಾಮರಸ್ ಫೋಟೋ ಶೂಟ್ ಮಾಡಿಸುವ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.
ಹೌದು, ನಟಿ ರಶ್ಮಿಕ ಮಂದಣ್ಣ ಅವರು ಬಹು ಭಾಷೆಯಲ್ಲಿ ನಟನೆ ಮಾಡುತ್ತಿರುವುದರಿಂದ ಅವರಿಗೆ ಅಭಿಮಾನಿಗಳ ಬಳಗ ಹೆಚ್ಚಿರುವುದರಿಂದ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಅವರು ಅಭಿಮಾನಿಗಳ ಜೊತೆ ಹೆಚ್ಚು ಕನೆಕ್ಟಿವ್ ಆಗಿರುತ್ತಾರೆ.
ಯೆಸ್…ರಶ್ಮಿಕಾ ಮಂದಣ್ಣ ಅವರು ಇತ್ತೀಚಿಗೆ ಬ್ಲಾಕ್ ಕಲರ್ ಡ್ರೆಸ್ಸಿನಲ್ಲಿ ಬಡ್ಡೆ ಹುಡುಗರ ಕಣ್ಣು ಕುಕ್ಕುವಂತೆ ಫೋಟೋಶೂಟ್ ಮಾಡಿಸಿ ತಮ್ಮ instagram ಖಾತೆಯಲ್ಲಿ ಹಾಕಿರುವುದನ್ನು ನೋಡಿ ಬಡ್ಡೆ ಹುಡುಗರು ವಿಧ ವಿಧ ಕಮೆಂಟ್ಸ್ ಗಳ ಸುರಿಮಳೆ ಸುರಿದಿದ್ದಾರೆ.
ಇನ್ನು ಈ ಪೋಸ್ಟ್ನಲ್ಲಿ ಅವರು ತಮ್ಮ ತಂಡಕ್ಕೆ ಧನ್ಯವಾದ ಹೇಳಿದ್ದಾರೆ. ರಶ್ಮಿಕಾ ತಂಡ ತುಂಬಾನೇ ದೊಡ್ಡದಾಗಿದೆ. ಅವರಿಗಾಗಿ ಡ್ರೆಸ್ ತಯಾರಿಸುವವರು, ಮೇಕಪ್ ಮಾಡಿಕೊಡುವರು ಹೀಗೆ ಅವರು ವೇದಿಕೆ ಮೇಲೆ ಬರುವಾಗ ಅನೇಕರ ಶ್ರಮ ಇರುತ್ತದೆ.
ಇವರೆಲ್ಲರಿಗೂ ರಶ್ಮಿಕಾ ಮಂದಣ್ಣ ಅವರು ಧನ್ಯವಾದ ಹೇಳಿದ್ದಾರೆ. ಅವರಿಲ್ಲದೆ ನಾನು ಇಲ್ಲ ಎಂಬರ್ಥದಲ್ಲಿ ಅವರು ಪೋಸ್ಟ್ ಹಾಕಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಿದೆ. ಇದಕ್ಕೆ ಅವರ ತಂಡ ಕೂಡ ಕಾರಣ ಎಂದು ಅವರು ಬಲವಾಗಿ ನಂಬಿದ್ದಾರೆ.ರಶ್ಮಿಕಾ ಮಂದಣ್ಣ ಅವರು ಬ್ಯಾಕ್ ಟು ಬ್ಯಾಕ್ ಹಿಟ್ ಕಾಣುತ್ತಿದ್ದಾರೆ. ಇದರಿಂದ ಅವರಿಗೆ ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್ಗಳಿಂದ ಆಫರ್ಗಳು ಬರುತ್ತಿವೆ. ಇದನ್ನೂ ಓದಿ: ಜೂನಿಯರ್ ಎನ್ಟಿಆರ್ ಗೆ ರಶ್ಮಿಕಾ ಮಂದಣ್ಣ ನಾಯಕಿ!
ಒಟ್ಟಿನಲ್ಲಿ ಅದೇನೇ ಆಗಲಿ ರಶ್ಮಿಕಾ ಮಂದಣ್ಣ ಅವರ ಫೋಟೋಸ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.
