ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಲಲ್ಲಿ ರೈತರು ವೈಜ್ಞಾನಿಕ ಕೃಷಿ ಪದ್ದತಿಗಳನ್ನು ಅಳವಡಿಸಿಕೊಳ್ಳುವ ಆಲೋಚನೆಯಲ್ಲಿ ಮಣ್ಣಿನ ಆರೋಗ್ಯ ಮತ್ತು ಫಲವತ್ತತೆಯ ಪ್ರಾಮುಖ್ಯತೆ ಮರೆತಂತಿದೆ. ರೈತರು ತಮ್ಮ ಜಮೀನಿನಲ್ಲಿ ಪ್ರತಿ ಹಂಗಾಮಿನಲ್ಲೂ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದು ಮಾರು ಕಟ್ಟೆಯಲ್ಲಿ ದೊರೆಯುವ ನೀರಿನಲ್ಲಿ ಕರುಗುವ ರಸಗೊಬ್ಬರಗಳನ್ನು ಹನಿ ನೀರಾವರಿ ಪದ್ದತಿಯಲ್ಲಿ ಬಳುಸುತ್ತಿದ್ದಾರೆ. ವಿವಿಧ ಬೆಳೆಗಳನ್ನು ಬೆಳೆಯುವ ಗೋಜಿನಲ್ಲಿ ಬೆಳೆ ಪರಿವರ್ತನೆ ಹಾಗೂ ಹಸಿರೆಲೆಗೊಬ್ಬರ ಬಳಸುವುದನ್ನು ಮರೆತಂತಿದೆ. ಈಗಾಗಲೇ ರಾಷ್ಟ್ರೀಯ ಮಣ್ಣು ಆರೋಗ್ಯ ಅಭಿಯಾನ ಯೋಜನೆಯಡಿ ಪ್ರತಿ ವರ್ಷವೂ ನಿಗದಿತ ಗುರಿಗಳಂತೆ ರೈತರ ಜಮೀನುಗಳಲ್ಲಿ ಮಣ್ಣು ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಿದ್ದು ಎಲ್ಲಾ ಮಣ್ಣು ಮಾದರಿಗಳಲ್ಲಿ ಸಾವಯವ ಅಂಶ (ಸಾವಯವ ಇಂಗಾಲ) ಕಡಿಮೆ ಎಂದು ವರದಿಯಾಗಿದೆ.
ಇತ್ತೀಚಿನ ದಿನಗಳಲ್ಲಿ ಕೊಟ್ಟಿಗೆಗೊಬ್ಬರ ಅಭಾವ ಹಾಗೂ ಹಸಿರೆಲೆಗೊಬ್ಬರ ಹಾಗೂ ಇತರೆ ಸಾವಯವ ಗೊಬ್ಬರ ಮಿತ ಬಳಕೆ ಪ್ರಭಾವದಿಂದ ಮಣ್ಣಿನಲ್ಲಿ ಸಾವಯವ ಇಂಗಾಲ ಕಡಿಮೆಯಾಗಿರುತ್ತದೆ. ಆದುದರಿಂದ ರೈತರು ಈಗಲಾದರೂ ಎತ್ತೆಚ್ಚಿಕೊಂಡು ತಮಗಿರುವ ಅನುಕೂಲತೆ ಆಧಾರದ ಮೇಲೆ ಹಂತ ಹಂತವಾಗಿ ಕೊಟ್ಟಿಗೆಗೊಬ್ಬರ, ಹಸಿರೆಲೆಗೊಬ್ಬರ ಹಾಗೂ ಇತರೆ ಸಾವಯವ ಗೊಬ್ಬರಗಳನ್ನು ಬಳಸಿ ಮಣ್ಣಿನ ಆರೋಗ್ಯ ಮತ್ತು ಫಲವತ್ತತೆಯಲ್ಲಿ ಸುಸ್ಥಿರತೆ ಕಾಪಾಡುವುದು ಈಗಿನ ಅವಶ್ಯವಾಗಿದೆ.
ಹಸಿರೆಲೆಗೊಬ್ಬರಗಳ ಬಳಕೆ ಹಿಂದಿನ ಕಾಲದಿಂದಲೂ ಮಾಡುತ್ತಾ ಬರುತ್ತಿದ್ದು ಮಣ್ಣಿನ ಫಲವತ್ತೆತೆ ಮತ್ತು ಭೌತಿಕ ಗುಣ ಧರ್ಮಗಳನ್ನು ಕಾಪಾಡುವಲ್ಲಿ ಮಹತ್ವ ಪಾತ್ರ ವಹಿಸುತ್ತದೆ.
ಹಸಿರೆಲೆಗೊಬ್ಬರದ ಸಸ್ಯಗಳನ್ನು ಹೊಲದಲ್ಲಿಯೇ ಬೆಳೆದು ಉಳುಮೆ ಮಾಡುವ ಮೂಲಕ ಮಣ್ಣಿನಲ್ಲಿ(ಬೆರೆಸಿ) ಕಳಿಸುವ ಮೂಲಕ ಸಾಕಷ್ಟು ಸಾವಯವ ಅಂಶವನ್ನು ಮಣ್ಣಿಗೆ ಸೇರಿಸಬಹುದಾಗಿದೆ. ಹಸಿರೆಲೆಗೊಬ್ಬರ ಬೀಜಗಳನ್ನು ಮುಖ್ಯ ಬೆಳೆಯನ್ನು ಬಿತ್ತುವ ಮೊಡಲು ಅಥವಾ ದೀರ್ಘಾವದಿ ಬೆಳೆಗಳಲ್ಲಿ ಅಂತರ ಬೆಳೆಯಾಗಿ ಬೆಳೆಯುತ್ತಾರೆ. ಸಾಮಾನ್ಯವಾಗಿ ಹಸಿರೆಲೆಗೊಬ್ಬರ ಬೆಳೆಯನ್ನು ಬಿತ್ನೆ ಮಾಡಿದ ೬ ವಾರಗಳ ನಂತರ ಮಣ್ಣಿನಲ್ಲಿ ಬೆರೆಸುವುದು ಸೂಕ್ತ ನಂತರ ಬೆರೆಸಿದರೆ ನಾರಿನಂಶ ಹೆಚ್ಚಾಗಿ ಬೇಗನೆ ಕೊಳೆಯುವುದಿಲ್ಲ.
ಪ್ರಮುಖ ಹಸಿರೆಲೆಗೊಬ್ಬರ ಬೀಜಗಳ ಸೆಣಬು ದಯಂಚಾ, ಅಲಸಂದೆ, ಹುರಳಿಬೇರೆ ಸ್ಥಳದಲ್ಲಿ ಲಭ್ಯವಿರುವ ಅರಣ್ಯಜಾತಿಯ ಬಹುವಾರ್ಷಿಕ ಮರಗಳ ಹಸಿರೆಲೆಗಳನ್ನು ಕಟಾವು ಮಾಡಿ ತಂದು ಮಣ್ಣಿನಲ್ಲಿ ಬೆರೆಸುವುದು ಅಥವಾ ಆ ಸಸಿಗಳನ್ನು ಹೊಲದ ಬದುಗಳಲ್ಲಿ ಅಥವಾ ಜಮೀನಿನ ಸುತ್ತಲೂ ಬೆಳೆಯಬಹುದಾಗಿದೆ.
ಹಸಿರೆಲೆಗೊಬ್ಬರದ ಲಾಭಗಳು
ಮಣ್ಣಿಗೆ ಅಧಿಕ ಪ್ರಮಾಣದ ಪೋಷಕಾಂಶಗಳು ದೊರೆಯುತ್ತದೆ ಮತ್ತು ಮಣ್ಣಿನ ಭೌತಿಕ ರಾಸಾಯನಿಕ ಹಾಗೂ ಜೈವಿಕ ಗುಣಧರ್ಮಗಳು ಸುಧಾರಿಸುತ್ತದೆ.
ವಾತಾವರಣದಲ್ಲಿರುವ ಸಾರಜನಕವನ್ನು ಸ್ವೀಕರಿಸಿ ಬೆಳೆಗಳು ಸಿಗುವ ಹಾಗೆ ಮಾಡುತ್ತದೆ
ಸಾವಯವ ಕೃಷಿಕರಿಗೆ ವರದಾನವಾಗಿದೆ.
ರಾಸಾಯನಿಕ ಗೊಬ್ಬರ ಬಳಕೆ ಪ್ರಮಾಣ ಕಡಿಮೆ ಮಾಡಿ ಬೇಸಾಯ ಖರ್ಚು ಕಡಿಮೆವಾಗುತ್ತದೆ
ಮಣ್ಣಿಗೆ ಹೆಚ್ಚು ಸಾವಯವ ಸೇರುವುದರಿಂದ ಮಣ್ಣಿನ ನೀರು ಹಿಡಿದುಕೊಳ್ಳುವ ಸಾಮರ್ಥ್ಯ ಹೆಚ್ಚಾಗುತ್ತದೆ.
ಮಣ್ಣಿನ ಆರೋಗ್ಯ ಹಾಗೂ ಫಲವತ್ತತೆಯಲ್ಲಿ ಸುಸ್ಥಿರತೆಯನ್ನು ಕಾಪಾಡಿಕೊಳ್ಳಬಹುದು.
ಎಲ್ಲಾ ಹೋಬಳಿಯ ರೈತ ಸಂಪರ್ಕ ಕೆಂದ್ರದಲ್ಲಿ ಹಸಿರೆಲೆಗೊಬ್ಬರ ಬೀಜ ಸೆಣಬು ಬೀಜಗಳು ಶೇ.75 ರ ಸಹಾಯಧನದಲ್ಲಿ ಲಭ್ಯವಿದ್ದು ರೈತರು ಪಡೆದುಕೊಳ್ಳಬಹುದಾಗಿದೆ.
ಪ್ರತಿ ಎಕರೆಗೆ 20-25 ಕೆ ಜಿ ಹಸಿರೆಲೆ ಬಿತ್ತನೆ ಬೀಜ ಅವಶ್ಯವಿದ್ದು ಅಲಸಂದೆ ಅಥವಾ ಹುರುಳಿ ಮಿಶ್ರಣ ಮಾಡಿ ಬಳಸಿದರೆ 10 ಕೆ.ಜಿ ಸಾಕಾಗುತ್ತದೆ ಎಂದು ಚಿಕ್ಕಬಳ್ಳಾಪುರ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರಾದ ಶ್ರೀ.ಮುನಿರಾಜ.ಸಿ, ತಿಳಿಸಿದ್ದಾರೆ.
