ಬೆಂಗಳೂರು: ಬಿಬಿಎಂಪಿಯ ಚುನಾವಣೆ ಯಾವಾಗ ಎಂಬ ಪ್ರಶ್ನೆ ಇಡೀ ನಗರದ ಜನತೆಯಲ್ಲಿ ಕಾಡುತ್ತಿದ್ದು ಇದೀಗ ಇದಕ್ಕೆ ಸ್ಪಷ್ಟ ಮಾಹಿತಿಯೊಂದು ಸಿಕ್ಕಿದೆ.
ಈ ಕುರಿತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ಈ ವರ್ಷ ಮುಗಿಯೊದರ ಒಳಗಾಗಿ ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ವರ್ಷದ ಅಂತ್ಯದೊಳಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ನಡೆಯಲಿದ್ದು ಇದಕ್ಕೆ ಸರ್ವ ಪಕ್ಷ ಸಭೆ ಕರೆದು ಒಪ್ಪಿಗೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಡಿಕೆಶಿ ಜನ್ಮದಿನ; ಆಫ್ರಿಕನ್ ಸಿಂಹ ದತ್ತು ಪಡೆದ ರಾಜ್ಯ ಯುವ ಕಾಂಗ್ರೆಸ್
ಚುನಾವಣೆ ಮುಂದೂಡುವುದರಲ್ಲಿ ಅರ್ಥವಿಲ್ಲ, ಇನ್ನು 4 ತಿಂಗಳೊಳಗೆ ಒಟ್ಟಿನಲ್ಲಿ ಈ ವರ್ಷ ಮುಗಿಯುವುದರೊಳಗೆ ನಡೆಸುತ್ತೇವೆ ಹೇಳಿದ್ದಾರೆ. ಸದ್ಯದಲ್ಲೇ ಮಿಸಲಾತಿ ಮತ್ತು ವಿಭಾಗಗಳ ಘೋಷಣೆ ಮಾಡಲಾಗುವುದು, ಮತ್ತು ಸರ್ವಪಕ್ಷಗಳ ಸಭೆ ಕರೆಯಲಾಗುವುದು ಎಂದು ಹೇಳಿದ ಶಿವಕುಮಾರ್, ಈ ಬಗ್ಗೆ ವಿಧಾನ ಸಭೆಯಲ್ಲೂ ಚರ್ಚೆಯಾಗಿದೆ, ವಿರೋಧ ಪಕ್ಷಗಳ ಶೇಕಡ 90ರಷ್ಟು ಅಭಿಪ್ರಾಯಗಳನ್ನು ಅಂಗೀಕರಿಸಿದ್ದೇವೆ ಎಂದರು.
