ಕನ್ನಡ ಚಿತ್ರರಂಗದಲ್ಲಿ ಎಂಗೆಸ್ಟ್ ಅಂಡ್ ಎನರ್ಜಿಟಿಕ್ ಹೀರೋ ಎಂದರೆ ಅದು ನಟ ಸೆಂಚುರಿಸ್ ಸ್ಟಾರ್ ಶಿವರಾಜ್ ಕುಮಾರ್ ಅವರು.
ಹೌದು, ನಟ ಶಿವರಾಜ್ ಕುಮಾರ್ ಅವರಿಗೆ 60 ವರ್ಷ ಆದರೂ ಕೂಡ 20 ವರ್ಷದ ಹುಡುಗನಂತೆ ಕಾಣುವ ಅವರು ಇದೀಗ ಪತ್ನಿ ಗೀತಾ ಅವರ ಜೊತೆ ಚೆನ್ನೈನಲ್ಲಿ ಜಾಲಿ ಮೂಡ್ ನಲ್ಲಿ ಸಮಯ ಕಳೆಯುತ್ತಿದ್ದಾರೆ.
ನಟ ಶಿವರಾಜ್ ಕುಮಾರ್ ಅವರು ಕ್ಯಾನ್ಸರ್ ಚಿಕಿತ್ಸೆ ಪಡೆದ ನಂತರ ಸದ್ಯ ಹಲವಾರು ಸಿನಿಮಾಗಳಲ್ಲಿ ನಟಿಸುತ್ತಿರುವ ಅವರು ಇದೀಗ ಚೆನ್ನೈನಲ್ಲಿ ಅವರ ಪತ್ನಿ ಗೀತಾ ಅವರ ಜೊತೆ ಜಾಲಿ ಮೋಡ್ ನಲ್ಲಿ ಕಾಲ ಕಳೆಯುತ್ತಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಅವರ ಫೋಟೋಗಳನ್ನು ನೋಡಿ ಅಭಿಮಾನಿಗಳು ವಿಧವಿಧ ಕಮೆಂಟ್ಸ್ ಗಳನ್ನು ಮಾಡುತ್ತಿದ್ದಾರೆ. ಇನ್ನು ಶಿವಣ್ಣನ ಹೊಸ ಲುಕ್ ನೋಡಿದ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಇದನ್ನೂ ಓದಿ: ರಿಯಲ್ ಸ್ಟಾರ್ ಆರೋಗ್ಯದಲ್ಲಿ ಏರುಪೇರು..!
ಶಿವಣ್ಣ ಸದ್ಯ 131 ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರೀಕರಣಕ್ಕೆ ಕೊಂಚ ವಿರಾಮ ಕೊಟ್ಟು ಪತ್ನಿ ಗೀತಾ ಶಿವರಾಜ್ ಕುಮಾರ್ ಚೆನ್ನೈಗೆ ಹಾರಿದ್ದಾರೆ. ಚೆನ್ನೈನಲ್ಲಿ ಶಿವ ಗೀತಾ ದಂಪತಿ ಒಟ್ಟಿಗೆ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
ಶಿವಣ್ಣನ ಹೊಸ ಲುಕ್ ನೋಡಿ ಶಿವಪಡೆ ನಮ್ ಬಾಸ್ ಯಾವಾಗಲೂ ಸೂಪರ್ ಅಂತಿದ್ದಾರೆ. ಸದ್ಯ ಶಿವಣ್ಣ ಜೈಲರ್ 2, ರಾಮ್ ಚರಣ್ ನಟಿಸುತ್ತಿರುವ ಪೆದ್ದಿ, 131 ಚಿತ್ರದ ಶೂಟಿಂಗ್ ಜೊತೆಗೆ 45 ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.
