ಇತ್ತೀಚಿನ ದಿನಮಾನಗಳಲ್ಲಿ ಪ್ರತಿಯೊಬ್ಬರ ಜೀವನ ಶೈಲಿಯೂ ಕೂಡ ಬದಲಾಗಿದ್ದು ಒತ್ತಡದ ಜೀವನದಲ್ಲಿ ತಮ್ಮ ಆರೋಗ್ಯದ ಕಡೆ ಗಮನಹರಿಸದೆ ಹಲವಾರು ಸಮಸ್ಯೆಗಳ ಅನುಭವಿಸುವುದು ಸರ್ವೇಸಾಮಾನ್ಯವಾಗಿದೆ ಅದರಲ್ಲೂ ಕೂಡ ಎಲ್ಲರಿಗೂ ಕಾಡುವುದು ಒಂದೇ ಒಂದು ಅದು ವಿದ್ರಾಹೀನತೆ.
ಹೌದು, ಈಗಿನ ಒತ್ತಡದ ಜಗತ್ತಿನಲ್ಲಿ ನಿದ್ರಾಹೀನತೆ ಎಲ್ಲಾ ಮನುಷ್ಯರಿಗೂ ಕಾಡೋದು ಸರ್ವೇಸಾಮಾನ್ಯವಾಗಿದೆ. ಎಷ್ಟೇ ಪ್ರಯತ್ನ ಪಟ್ಟರು ಕೂಡ ನಿದ್ದೆ ಬರದೆ ಪರಿತಪಿಸುವಂಥವರು ಹಲವರಿದ್ದಾರೆ.
ನಿದ್ರಾಹೀನತೆ ಕಾಡುವವರು ಏನೆಲ್ಲಾ ಪ್ರಯತ್ನ ಮಾಡಿದರು ಕೂಡ ನಿದ್ರೆ ಬರುವುದಿಲ್ಲ ಅಂತವರು ಇದೀಗ ಒಂದು ಹಣ್ಣನ್ನು ಸೇವಿಸಿದರೆ ರಾತ್ರಿ ಇಡಿ ಆರಾಮದಾಯಕವಾಗಿ ಸುಖನಿದ್ರೆ ಮಾಡಬಹುದು ಎಂದು ತಿಳಿದುಬಂದಿದೆ.
ನಿದ್ರಾಹೀನತೆ ಬೊಜ್ಜು, ಕೊಲೆಸ್ಟ್ರಾಲ್ ಮತ್ತು ಹೃದಯ ಸಂಬಂಧಿ ಸಮಸ್ಯೆಗೆ ಕಾರಣ ಆಗುತ್ತದೆ. ನಿದ್ದೆ ಮಾಡದೇ ಹೋದರೆ ದಿನವಿಡೀ ಆಲಸ್ಯ ಮತ್ತು ಆಯಾಸ ಪಡಬೇಕಾಗುತ್ತದೆ. ಇದು ನೇರವಾಗಿ ಆರೋಗ್ಯದ ಮೇಲೆ ಪರಿಣಾಮ ಬೀಡುತ್ತದೆ. ನಿದ್ರೆಯ ಕೊರತೆ ಚಯಾಪಚಯವನ್ನು ಕೆಡಿಸುತ್ತದೆ. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಸಾಕಷ್ಟು ನಿದ್ರೆ ಮಾಡದ ಕಾರಣ ರಕ್ತದೊತ್ತಡ ಅನಿಯಂತ್ರಿತ ಆಗಿರುತ್ತದೆ.
ಉತ್ತಮ ನಿದ್ದೆಗಾಗಿ ಬಾಳೆ ಹಣ್ಣು ಸೇವನೆ ಮಾಡಿ
ಮಾನಸಿಕ ಸಮಸ್ಯೆ ಹೊಂದಿದ್ದರೆ ನಿದ್ರಾಹೀನತೆ ಉಂಟಾಗುತ್ತದೆ. ಅಂತಹ ಸ್ಥಿತಿಯಲ್ಲಿ ಉತ್ತಮ ನಿದ್ರೆಗಾಗಿ ಬಾಳೆಹಣ್ಣು ಸೇವನೆ ಮಾಡಬಹುದು. ಪ್ರಪಂಚದಾದ್ಯಂತ ನಡೆದ ಅನೇಕ ಸಂಶೋಧನೆಗಳು ಬಾಳೆಹಣ್ಣಿನಲ್ಲಿ ಇರುವ ವಿಶೇಷ ಪೋಷಕಾಂಶಗಳ ಬಗ್ಗೆ ಹೇಳುತ್ತವೆ. ಬಾಳೆ ಹಣ್ಣು ಉತ್ತಮ ನಿದ್ರೆ ಹೊಂದಲು ಸಹಾಯ ಮಾಡುತ್ತದೆ.
ಬಾಳೆ ಹಣ್ಣಿನಲ್ಲಿ ಮೆಗ್ನೀಸಿಯಮ್ ಸಮೃದ್ಧವಾಗಿದೆ
ಬಾಳೆಹಣ್ಣು ಸೇವನೆ ನಿದ್ರೆಗೆ ಪ್ರಯೋಜನಕಾರಿ ಆಗಿದೆ. ಇದು ನಿದ್ರೆಯನ್ನು ಉತ್ತೇಜಿಸುವ ಮೆಗ್ನೀಸಿಯಮ್ ಅನ್ನು ಹೊಂದಿದೆ. 126 ಗ್ರಾಂ ಬಾಳೆಹಣ್ಣಿನಲ್ಲಿ 34 ಮಿಗ್ರಾಂ ಮೆಗ್ನೀಸಿಯಮ್ ಇರುತ್ತದೆ. ಇದನ್ನು ಸೇವನೆ ಮಾಡಿದರೆ ದೇಹದಲ್ಲಿ ಮೆಲಟೋನಿನ್ ಉತ್ಪಾದನೆ ಹೆಚ್ಚುತ್ತದೆ. ಇದನ್ನೂ ಓದಿ: ದಿನನಿತ್ಯ 1 ಲೋಟ ಸೋಂಪು ನೀರನ್ನು ಕುಡಿದ್ರೆ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ?
ಬಾಳೆ ಹಣ್ಣಿನಲ್ಲಿ ಟ್ರಿಪ್ಟೊಫಾನ್ ಇದೆ
ಬಾಳೆಹಣ್ಣುಗಳಲ್ಲಿ ಟ್ರಿಪ್ಟೊಫಾನ್ ಕಂಡು ಬರುತ್ತದೆ. ಇದು ಅತ್ಯಗತ್ಯ ಅಮೈನೋ ಆಮ್ಲವಾಗಿದೆ. ಇದು ನಿದ್ರೆಯನ್ನು ಸುಧಾರಿಸುವಲ್ಲಿ ಬಹಳ ಪರಿಣಾಮಕಾರಿ ಆಗಿದೆ. ಈ ಆಮ್ಲವು ಮೆದುಳಿಗೆ ನೇರವಾಗಿ ಪ್ರವೇಶಿಸಿ, ಹಾರ್ಮೋನ್ ಸಿರೊಟೋನಿನ್ ಆಗಿ ಪರಿವರ್ತನೆ ಆಗುತ್ತದೆ. ಈ ಹಾರ್ಮೋನ್ ಮೆಲಟೋನಿನ್ ಮಟ್ಟ ಹೆಚ್ಚಳ ಮಾಡುತ್ತದೆ. ಚೆನ್ನಾಗಿ ನಿದ್ರೆ ಮಾಡಲು ಸಹಕಾರಿ ಆಗಿದೆ.
