ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಿನಿಮಾಗಳು ರಿಲೀಸ್ ಆದರು ಕೂಡ ಯಾರಿಗೂ ಸರಿಯಾಗಿ ಥಿಯೇಟರ್ ಗೆ ಹೋಗಿ ಸಿನಿಮಾನ ನೋಡಲು ಸಮಯವಿರದ ಕಾರಣ, ಒಟಿಟಿ ಫ್ಲ್ಯಾಟ್ ಫಾರ್ಮ್ ಎನ್ನುವುದು ಒಂದು ಒಳ್ಳೆಯ ವೇದಿಕೆಯಾಗಿದ್ದು, ಇಂಗ್ಲಿಷ್, ಹಿಂದಿ, ತೆಲುಗು, ಕನ್ನಡ ಸೇರಿದಂತೆ ಎಲ್ಲಾ ಭಾಷೆಯ ಸಿನಿಮಾಗಳು ಇದೀಗ ಓಟಿಪಿ ಮೊರೆ ಹೋಗಿವೆ.
ಹೌದು, ಒಟಿಟಿ ಫ್ಲ್ಯಾಟ್ ಫಾರ್ಮ್ ಎನ್ನುವುದು ಇದೀಗ ಎಲ್ಲ ಸಿನಿಮಾಗಳಿಗೆ ಒಂದು ಅತ್ಯುತ್ತಮ ವೇದಿಕೆಯಾಗಿದ್ದು ಎಲ್ಲಾ ಭಾಷೆಯ ಸಿನಿಮಾಗಳನ್ನು ಒಟಿಪಿಯಲ್ಲಿ ರಿಲೀಸ್ ಮಾಡಿ, ಸಿನಿಮಾಗಳು ಎಲ್ಲರು ನೋಡುವಂತೆ ಮಾಡುತ್ತಿದೆ.
ಇನ್ನು ಡಾಲಿ ಧನಂಜಯ್ ನಿರ್ಮಿಸಿರುವ ‘ವಿದ್ಯಾಪತಿ’ ಸಿನಿಮಾ ಏ. 10ರಂದು ತೆರೆಗೆ ಬಂದಿತ್ತು. ಈ ಚಿತ್ರದಲ್ಲಿ ಡಾಲಿ ಅವರ ಗೆಳೆಯ ನಾಗಭೂಷಣ್ ಹೀರೋ ಆಗಿ ನಟಿಸಿದ್ದರು. ಉಪಾಧ್ಯಕ್ಷ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದ ಮಲೈಕಾ ವಸುಪಾಲ್ ನಾಯಕಿ ನಟಿಸಿದ್ದರು. ಡಾಲಿ ಧನಂಜಯ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಈ ಚಿತ್ರ ಒಟಿಟಿಗೆ ಎಂಟ್ರಿ ಕೊಟ್ಟಿದೆ. ಇದನ್ನೂ ಓದಿ: ದೊಡ್ಮನೆ ಕುಡಿಗೆ ಕರಿ ಚಿರತೆ ಮಗಳು ನಾಯಕಿ
ಇಶಾಂ ಹಾಗೂ ಹಸೀಂ ಖಾನ್ ಅವರು ನಿರ್ದೇಶನದಲ್ಲಿ ಮೂಡಿಬಂದಿದ್ದ ವಿದ್ಯಾಪತಿ ಸಿನಿಮಾ ಅಮೇಜಾನ್ ಪ್ರೈಮ್ ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಥಿಯೇಟರ್ ನಲ್ಲಿ ಮಿಸ್ ಮಾಡಿಕೊಂಡವರು ಮನೆ ಮಂದಿ ಕುಳಿತು ಫ್ಯಾಮಿಲಿ ಎಂಟರ್ ಟೈನರ್ ವಿದ್ಯಾಪತಿ ಚಿತ್ರ ನೋಡಬಹುದು. ಧನಂಜಯ್ ಒಡೆತನದ ‘ಡಾಲಿ ಪಿಕ್ಚರ್ಸ್’ ಮೂಲಕ ನಿರ್ಮಾಣ ಮಾಡಿರುವ 4ನೇ ಚಿತ್ರ ಇದಾಗಿದೆ.
