ಬೆಂಗಳೂರು: ಕಾಶ್ಮೀರದಲ್ಲಿ ನಡೆದ ದಾಳಿಗೆ ಸಂಬಂಧಿಸಿದಂತೆ ಇದೀಗ ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ ಅವರು ಪ್ರತಿಕ್ರಿಯಿಸಿದ್ದು, ದಾಳಿ ಕೋರರಿಗೆ ನಮ್ಮ ಭಾರತೀಯ ಸೈನಿಕರು ಉತ್ತರ ಕೊಟ್ಟೆ ಕೊಡುತ್ತಾರೆ ಎಂದು ಹೇಳಿದ್ದಾರೆ.
ನಗರದಲ್ಲಿದ್ದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮ ಭಗವದ್ಗೀತೆಯಲ್ಲಿ ತಾಳ್ಮೆಯಿಂದ ಇರಬೇಕು ಎಂದಿದೆ. ಈಗಾಗಲೇ ಸಿಂಧೂ ನದಿ ನೀರು ಹರಿಯುವುದನ್ನು ಬಂದ್ ಮಾಡಿದ್ದಾರೆ. ಆದಷ್ಟು ಬೇಗ ಇದಕ್ಕೊಂದು ಉತ್ತರ ಸಿಗುತ್ತೆ. ದೇವರ ರೂಪದಲ್ಲಿ ಇಂಡಿಯನ್ ಆರ್ಮಿ ಶಿಕ್ಷೆ ಕೊಡುತ್ತಾರೆ.
ಮಾರ್ಟಿನ್ ಸಿನಿಮಾ ಶೂಟಿಂಗ್ ಸಮಯದಲ್ಲಿ ಆ ಸ್ಥಳದಲ್ಲೇ ಚಿತ್ರೀಕರಣ ಮಾಡಿದ್ವಿ. ಜಮ್ಮು ಕಾಶ್ಮೀರ ನಮ್ಮ ಕಿರೀಟ ಇದ್ದ ಹಾಗೆ. ಯಾವತ್ತಿದ್ರೂ ನಮ್ಮದೇ. ನಾವು ಯುದ್ಧ ಪ್ರಾರಂಭ ಮಾಡಿಲ್ಲ, ಮೊದಲು ಆರಂಭ ಮಾಡಿರೋದು ಅವರೆ ಎಂದಿದ್ದಾರೆ. ಇದನ್ನೂ ಓದಿ: ಖಾಸಗಿ ಕಾರ್ಯಕ್ರಮದಲ್ಲಿ ದಚ್ಚು-ವಿಜಿ ಜೊತೆ ಜೊತೆಯಲಿ
ನಾವು ಅವರ ಬಗ್ಗೆ ಮಾತಾಡೋದು ಬೇಡ. ಭಾರತೀಯ ಯೋಧರು ಅವ್ರಿಗೆ ತಕ್ಕ ಉತ್ತರ ಕೊಟ್ಟೇ ಕೊಡುತ್ತಾರೆ. ಪ್ರಧಾನಿ ಮೋದಿ ಅವರ ನಿರ್ಧಾರದ ಬಗ್ಗೆ ನನಗೇನು ಗೊತ್ತಿಲ್ಲ. ನಮ್ಮ ಸರ್ಕಾರ ಕೆಲವೇ ಗಂಟೆಗಳಲ್ಲಿ, ಕೆಲವೇ ದಿನಗಳಲ್ಲೇ ಉತ್ತರ ಕೊಡುತ್ತೆ ಎಂದು ಧ್ರುವ ಸರ್ಜಾ ತಿಳಿಸಿದ್ದಾರೆ.
