ಬೆಂಗಳೂರು: ಶ್ರೀ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠ ವತಿಯಿಂದ ಮಹಾಲಕ್ಷ್ಮಿಪುರಂ ಬಿ ಜಿ ಎಸ್ ಶಾಲಾ ಆವರಣದಲ್ಲಿ ಆಯೋಜಿಸದ್ದ ಮೂರನೇ ದಿನದ ಭಕ್ತಸಮಾಗಮ ಕಾರ್ಯಕ್ರಮ, ಸ್ವಸ್ಥಿ ವಿದ್ಯಾರ್ಥಿ ನಿಲಯದ ಉದ್ಘಾಟನೆ ಮತ್ತು ಶ್ರೀ ಅಭಯ ಆಂಜನೇಯ ಸ್ವಾಮಿ ಶ್ರೀ ಪ್ರಸನ್ನ ಗಣಪತಿ ಮತ್ತು ಲಲಿತಾಂಬಿಕಾ ನೂತನ ದೇವಾಲಯದ ಕುಂಭಾಭಿಷೇಕ ಮಹೋತ್ಸವ ಹಾಗೂ ಲೋಕಾರ್ಪಣೆ ಸಮಾರಂಭವನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ನಿರ್ಮಲಾನಂದ ಸ್ವಾಮೀಜಿ ಗಳ ಸಾನಿಧ್ಯದಲ್ಲಿ ಮಾಜಿ ಪ್ರಧಾನ ಮಂತ್ರಿಗಳು ಹಾಗು ರಾಜ್ಯ ಸಭಾ ಸದಸ್ಯರಾದ ಶ್ರೀ ಹೆಚ್ ಡಿ ದೇವೇಗೌಡರು ಉದ್ಘಾಟಿಸಿದರು. ಇದನ್ನೂ ಓದಿ: ಬಿಜೆಪಿಯವರು ಕಣ್ಣು ತೆರೆದು ನೋಡಿದರೆ ಅಭಿವೃದ್ಧಿಯ ಮಹಾಪೂರ ಕಾಣಿಸುತ್ತದೆ: ಸಿಎಂ
ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶ್ರೀ ಡಾ, ನಂಜಾವಧೂತ ಸ್ವಾಮೀಜಿ , ಶ್ರೀ ಶ್ರೀ ಶ್ರೀ ಶಿವರುದ್ರ ಮಹಾ ಸ್ವಾಮೀಜಿ, ಶ್ರೀ ಶ್ರೀ ಶ್ರೀ ಮಾದಿಗ ಚನ್ನಯ್ಯ ಸ್ವಾಮಿಜೀ .ಕೇಂದ್ರ ರಾಜ್ಯ ಸರ್ಕಾರದ ಸಚಿವರಾದ ಶೋಭ ಕರಂದ್ಲಾಜೆ , ಸಂಸದ ಡಾ ಕೆ ಸುಧಾಕರ್ ,ಶಾಸಕರುಗಳಾ ಕೆ ಗೋಪಾಲಯ್ಯ, ಅಶ್ವತ್ ನಾರಾಯಣ್, ವಿಶ್ವನಾಥ್, ಮಾಜಿ ಶಾಸಕ ನೆ ಲ ನರೇಂದ್ರಬಾಬು ಪಾಲಿಕೆ ಮಾಜಿ ಉಪ ಮೇಯರ್ ಗಳಾ ಹೇಮಲತಾ ಕೆ ಗೋಪಾಲಯ್ಯ ಎಸ್ ಹರೀಶ್ ಹಿರಿಯರಾದ ರಾಮೇಗೌಡ ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
