ದುಬೈ: ಕನ್ನಡ ಹಬ್ಬವೆಂದರೆ ನಮ್ಮ ಹೃದಯದಿಂದ ಆಚರಿಸುವುದು. ಬೆಳೆದವರನ್ನು, ಬೆಳೆಯುತ್ತಿರುವವರನ್ನು ಬೆಳೆಯುವವರನ್ನೂ ಗುರ್ತಿಸುವ ಕೆಲಸವನ್ನು ಕರ್ನಾಟಕ ಮೀಡಿಯಾ ಜರ್ನಲಿಸ್ಟ್ ಸಂಘದವರು ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾವ್ಯವೆಂದು ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠದ ಶ್ರೀ ಶ್ರೀ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳು ನುಡಿದರು.
ದುಬೈನ ಮ್ಯೂಸಿಯಂ ಆಫ್ ದಿ ಫ್ಯೂಚರ್ ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಕರ್ನಾಟಕ ಮೀಡಿಯಾ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ “ಕನ್ನಡ ಹಬ್ಬ” ಹಾಗೂ “ಗ್ಲೋಬಲ್ ಐಕಾನ್ ಮೀಡಿಯಾ ಅವಾರ್ಡ್ -2025” ಪ್ರಶಸ್ತಿ ಪ್ರದಾನ ಸಮಾರಂಭವನ್ನು ಗಿಡಕ್ಕೆ ನೀರೆರೆಯುವ ಮೂಲಕ ಮಾತನಾಡಿದರು. ಈ ವೇಳೆ ಅವರೊಂದಿಗೆ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಂ. ಸತೀಶ್ ರೆಡ್ಡಿ, ಬೂ ಅಬ್ದುಲ್ಲಾ ಗ್ರೂಪ್ಸ್ ಛೇರೈನ್ ಡಾ. ಬೂ ಅಬ್ದುಲ್ಲಾ, ಕಾನ್ಸಿಡೆಂಟ್ ಗ್ರೂಪ್ ಛೇರೈನ್ ಡಾ. ರಾಯ್ ಸಿಜಿ, ಮೊಹಮ್ಮದ್ ಅಲಿ ರವರು ಉಪಸ್ಥಿತರಿದ್ದರು.
ದುಬೈನ ಪ್ರತಿಷ್ಠಿತ ಮ್ಯೂಸಿಯಂ ಆಫ್ ದಿ ಫ್ಯೂಚರ್ ನಲ್ಲಿ ಈ ಸಮಾರಂಭ ನಡೆಸುತ್ತಿರುವುದು ಪತ್ರಕರ್ತರ ಮೊದಲ ಹೆಜ್ಜೆಯಾಗಿದ್ದು ಶ್ರೀಗಳು ಶುಭ ಕೋರಿದರು. ಕನ್ನಡ ಹಬ್ಬವೆಂದರೆ ಕೇವಲ ರಾಜ್ಯೋತ್ಸವ ಆಚರಣೆಯಲ್ಲ. ಪ್ರತಿದಿನ ನಮ್ಮ ಜೀವನದ ಉಸಿರಾಗಿಸಿಕೊಳ್ಳಬೇಕು. ಎಲ್ಲೇ ಇರಲಿ. ಹೇಗೆ ಇರಲಿ ಕನ್ನಡ ನಮ್ಮ ಉಸಿರಾಗಿರಲಿ ಎಂದರು.
ವಚನ ಸಾಹಿತ್ಯದ ಕಾಯಕವನ್ನು ನಂಬಿ ದುಬೈಗೆ ಬಂದಂತಹ ಎಷ್ಟೋ ಮಂದಿಗೆ ಕನ್ನಡ ಭವನವನ್ನು ನೀಲೇಶ್ರವರು ಮಾಡಿದ್ದು, ಅವರ ಕಾರ್ಯ ಸದಾ ಹೀಗೆ ಮುಂದುವರೆಯಲಿ ಎಂದು ಹಾರೈಸಿದರು.
ಡಾ. ರಾಯ್ ಸಿಜೆರವರು ಮುಂದಿನ ದಿನಗಳಲ್ಲಿ ಎನ್ಜಿಒ ಸ್ಥಾಪಿಸಿ, ಆ ಮೂಲಕ ಬೆಳೆಯುತ್ತಿರುವ ಎಷ್ಟೋ ಕಲಾವಿದರಿಗೆ ನೀರೆರೆಯುವ ಕೆಲಸ ಮಾಡುವಂತೆ ನುಡಿದರು.
ಕಾರ್ಯಕ್ರಮಕ್ಕೂ ಮುನ್ನ ದುಬೈನ ರಾಷ್ಟ್ರಗೀತೆಗೆ ಗೌರವ ಸಲ್ಲಿಸಲಾಯಿತು ನಂತರ ಜಯ ಭಾರತ ಜನನಿಯ ತನುಜಾತೆ, ಜಯಹೇ ಕನಾಟಕ ಮಾತೆ ನಾಡಗೀತೆಯನ್ನು ನೆರೆದ ಪ್ರಶಸ್ತಿ ಪುರಸ್ಕೃತರು, ನೆರೆದವರು ಹಾಡಿದರು. ದುಬೈನ ಮ್ಯೂಸಿಯಂ ಆಫ್ ಪ್ಯೂಚರ್ನಲ್ಲಿ ಕಲರವವನ್ನುಂಟು ಮಾಡಿತು.
“ಬ್ಯೂಸ್ನೆಸ್ ಐಕಾನ್ ಅವಾರ್ಡ್-2025 “ಗೆ ಭಾಜನರಾದ ಡಾ. ರಾಯ್ ಸಿಜೆ “ಬ್ಯೂಸ್ನೆಸ್ ಐಕಾನ್ ಅವಾರ್ಡ್-2025” ಪ್ರಶಸ್ತಿಗೆ ಈ ಭಾರಿ ಕಾನ್ಸಿಟೆಂಡ್ ಗ್ರೂಪ್ ಛೇರೈನ್ ಡಾ. ರಾಯ್ ಸಿ.ಜೆ.ರವರು ಭಾಜನರಾಗಿದ್ದು, ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಗಳು ಪುರಸ್ಕರಿಸಿ ಶುಭ ಹಾರೈಸಿದರು. ಈ ವೇಳೆ ಮಾತನಾಡಿದ ಡಾ. ರಾಯ್ ರವರು, ಈ ಪ್ರಶಸ್ತಿಗೆ ನಾನು ಅರ್ಹತೆ ಹೊಂದಿದ್ದೇನೋ ಇಲ್ಲವೋ ಗೊತ್ತಿಲ್ಲ, ಆದರೆ, ಕನ್ನಡಿಗರ ಆಶೀರ್ವಾದ. ಸ್ವಾಮೀಜಿಗಳ ಆಶೀರ್ವಾದದಿಂದ ಇಂದು ಈ ಪ್ರಶಸ್ತಿ ನನಗೆ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ನಟಿ ಪ್ರೇಮಾ ಕಾಲೆಳೆದ ಡಾ. ರಾಯ್
ನಿಮ್ಮ ಸಿನಿಮಾಗಳನ್ನು ನೋಡಿ ಬೆಳೆದಿದ್ದೇನೆ ಎಂದು ಖ್ಯಾತ ಚತುರ್ಭಾಷಾ ತಾರೆ ಪ್ರೇಮಾರವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಕಾಲೆಳೆದರು.
ಮಕ್ಕಳಿಗೆ 1 ಕೋಟಿ ವೆಚ್ಚದಲ್ಲಿ ಸ್ಕಾಲರ್ ಪಿಪ್
ಬಿಗ್ಬಾಸ್ನ ವಿಜೇತ ಹನುಮಂತನಿಗೆ ಈ ಭಾರಿ 50 ಲಕ್ಷ ಕಾನ್ಸಿಡೆಂಟ್ ಗ್ರೂಪ್ನಿಂದ ಬಹುಮಾನ ನೀಡಲಾಯಿತು. ಆದರೆ, ಈ ಭಾರಿ ಪ್ರತಿಭಾವಂತ ಮಕ್ಕಳಿಗೆ 1 ಕೋಟಿ ವೆಚ್ಚದಲ್ಲಿ ಸ್ಟಾಲರ್ಷಿಪ್ ನೀಡುವ ಗುರಿಯನ್ನಿಟ್ಟುಕೊಂಡಿರುವುದಾಗಿ ಹೇಳಿದರು.
ಜನತೆಯ “ಕನಸಿನ ಮನೆ” ನಿರ್ಮಾಣ
ದುಬೈನಲ್ಲೂ ಕಾನ್ಸಿಡೆಂಟ್ ಗ್ರೂಪ್ನಿಂದ ಮನೆಗಳನ್ನು ನಿರ್ಮಿಸುತ್ತಿದ್ದು, ಜನರ ಕನಸಿನ ಮನೆ ನಿರ್ಮಿಸಲು ನಮ್ಮ ಸಂಸ್ಥೆವತಿಯಿಂದ ನಾವು 16 ಗಂಟೆಗಳ ಕಾಲ ಶ್ರಮಿಸುತ್ತಿದ್ದೇವೆಂದರು.
ಪರಿಸರ ಪ್ರೇಮಿ ಡಾ. ರಾಯ್
ಇಂದು ನಾವು ತಿನ್ನುತ್ತಿರುವುದು ನಮ್ಮ ತಾತ-ಮುತ್ತಾತ ನೆಟ್ಟ ಗಿಡ-ಮರಗಳಿಂದ ಎಂಬುದನ್ನು ಮರೆಯಬಾರದು. ಇಂದು ನಾನು 1 ಲಕ್ಷ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದೇನೆ. ದುಬೈನ ಅವರ ನಿವಾಸದಲ್ಲಿಯೂ ಕಬ್ಬು, ಮಾವು. ಸಪೋಟ, ನುಗ್ಗೆಕಾಯಿ ಬೆಳೆಯುತ್ತಿದ್ದೇನೆ. ಮುಂದಿನ ಪೀಳಿಗೆಯೂ ಸಹ ಗಿಡ ನೆಟ್ಟು ಪೋಷಿಸಿ ಎಂಬ ಸಂದೇಶ ರವಾನಿಸಿದರು.
ದುಬೈ ಚಿಕ್ಕ ಭಾರತದಂತಿದೆ ಶಾಸಕ ಎಂ. ಸತೀಶ್ ರೆಡ್ಡಿ
ದುಬೈ ಅತ್ಯಂತ ಮುಂದುವರಿದೆ ರಾಷ್ಟ್ರವಾಗಿದೆ. ನಮ್ಮ ಕನ್ನಡಿಗರು ಅದರಲ್ಲೂ ಮಂಗಳೂರಿನವರು, ಕೇರಳದವರು ಅತೀ ಹೆಚ್ಚಾಗಿ ದುಬೈಗೆ ಬಂದು ನೆಲೆಸಿದ್ದಾರೆ. ಸುಮಾರು 40 ಲಕ್ಷಕ್ಕೂ ಅಧಿಕ ಕನ್ನಡಿಗರು ದುಬೈನಲ್ಲಿ ಇದ್ದಾರೆಂಬ ಮಾಹಿತಿ ಇದ್ದು, ದುಬೈ ಮಿನಿ ಭಾರತದಂತಿದೆ ಎಂದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ. ಸತೀಶ್ ರೆಡ್ಡಿ ನುಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಮೀಡಿಯಾ ಜರ್ನಲಿಸ್ಟ್ ಯೂನಿಯನ್ ವತಿಯಿಂದ ದುಬೈನಲ್ಲಿ ಹಮ್ಮಿಕೊಂಡಿರುವ ಗ್ಲೋಬಲ್ ಐಕಾನ್ ಮೀಡಿಯಾ ಅವಾರ್ಡ್ ಕಾರ್ಯಕ್ರಮ ಸಾಧಕರಿಗೆ ಮತ್ತಷ್ಟು ಜವಾಬ್ದಾರಿಯನ್ನು ಹೆಚ್ಚಿಸುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸಿದ ಎಷ್ಟೋ ಜನರು, ಕಲಾ ಸೇವಕರು, ಹೀಗೆ ಹಲವು ರಂಗಗಳಲ್ಲಿ ಶ್ರಮಿಸಿದವರನ್ನು ಗುರುತಿಸಿ ಅವರ ಸಾಧನೆಗೆ ಪ್ರಶಸ್ತಿ ಕೊಡುವ ಮೂಲಕ ಗೌರವ ಕೊಡುತ್ತಿರುವುದು ಶ್ಲಾಘನೀಯ. ಮುಖ್ಯ ಅತಿಥಿಗಳಾಗಿ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳು ಆಗಮಿಸಿರುವುದು ಸಂತಸ ತಂದಿದೆ ಎಂದರು.
ಜೀವಮಾನ ಸಾಧನೆ ಪ್ರಶಸ್ತಿಗೆ ಭಾಜನರಾದ ಕೆ. ರತ್ನಪ್ರಭಾ
ಕರ್ನಾಟಕ ಸಕಾರದ ಮುಖ್ಯ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಐಎಎಸ್ ಅಧಿಕಾರಿ ಕೆ. ರತ್ನಪ್ರಭಾರವರು ಸಲ್ಲಿಸಿದ ಸೇವೆಗಾಗಿ ಈ ಭಾರಿ ಗ್ಲೋಬಲ್ ಐಕಾನ್ ಮೀಡಿಯಾ ಅವಾರ್ಡ್ನ್ನು ಜೀವಮಾನ ಸಾಧನೆಗಾಗಿ ನೀಡಿ ಅಭಿನಂದಿಸಲಾಯಿತು.
ಈ ವೇಳೆ ಮಾತನಾಡಿದ ಅವರು, ನನಗೆ ಈ ಪ್ರಶಸ್ತಿ ನೀಡಿರುವ ಅತೀವ ಸಂತೋಷ ತಂದಿದೆ. ನಾನು ನಿವೃತ್ತಿ ಹೊಂದಿದ್ದರೂ ನನಗೆ ಇನ್ನೂ ಸುಸ್ತಾಗಿಲ್ಲ. ನನ್ನ ಸಾಮಾಜಿಕ ಕಾರ್ಯ ಹೀಗೆ ಮುಮದುವರೆಯಲಿದೆ ಎಂದರು.
ವರ್ಣರಂಜಿತ ಈ ಕಾರ್ಯಕ್ರಮದಲ್ಲಿ ಹಲವು ನಟ, ನಟಿಯರು, ಸಮಾಜ ಸೇವಕರು, ಉದ್ಯಮಿಗಳು, ಕನ್ನಡ ಸಂಘ, ದುಬೈನಲ್ಲಿ ನೆಲೆಸಿರುವ ಕನ್ನಡಿಗರನ್ನು ಗುರ್ತಿಸಿ ಗ್ಲೋಬಲ್ ಐಕಾನ್ ಮೀಡಿಯಾ ಅವಾರ್ಡ್-2025ನ್ನು ನೀಡಿ ಗೌರವಿಸಲಾಯಿತು.

