ಬೆಂಗಳೂರು: ಪ್ರತಿನಿತ್ಯ ಬಳಸುವ ವಸ್ತು, ತರಕಾರಿ ಹಾಗೂ ಇನ್ನಿತರ ಬೆಲೆ ಏರಿಕೆ ಮಧ್ಯೆ ಇದೀಗ ಮತ್ತೊಂದು ಬೆಲೆ ಏರಿಕೆ ಬಿಸಿ ಜನಸಾಮಾನ್ಯರಿಗೆ ತಟ್ಟಲಿದೆ.
ಹೌದು, ಜನತೆಗೆ ಮತ್ತೊಂದು ಬೆಲೆ ಏರಿಕೆ ಬಿಸಿ ತಟ್ಟಿದ್ದು, ಅಡುಗೆ ಅನಿಲ ದರವನ್ನು ಸುಮಾರು 50 ರೂಪಾಯಿಗೆ ಏರಿಕೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಆದೇಶಿಸಿದೆ. ಇದನ್ನೂ ಓದಿ:
ಇಂದಿನಿಂದ (ಏಪ್ರಿಲ್ 8 ಮಂಗಳವಾರ) ದಿಂದ ದೇಶದಾದ್ಯಂತ ಪ್ರತಿ ಸಿಲೆಂಡರ್ ನ ಬೆಲೆ ರೂ.50 ಹೆಚ್ಚಿಸಲಾಗುತ್ತಿದೆ ಇದರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಮಧ್ಯೆ ಮತ್ತೊಂದು ಬೆಲೆ ಏರಿಕೆ ಬಿಸಿ ತಟ್ಟಿದಂತಾಗಿದೆ.
ಇನ್ನು ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 803 ರಿಂದ 853 ಕ್ಕೆ ಏರಿಕೆ ಆಗಲಿದೆ. ಅಲ್ಲದೇ ಉಜ್ವಲ ಯೋಜನೆಯ ಪ್ರತಿ ಸಿಲಿಂಡರ್ಗೆ 500 ರೂಪಾಯಿ ಇಂದ 550ಕ್ಕೆ ಏರಿಕೆ ಆಗಿದೆ ಎನ್ನಲಾಗಿದೆ.
ಗೃಹಿಣಿಯರಿಗೆ ಸಿಲಿಂಡರ್ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಗೃಹ ಬಳಕೆಯ 14.2 ಕೆಜಿ ಸಿಲಿಂಡರ್ ದರ 50 ರೂಪಾಯಿ ಏರಿಕೆ ಮಾಡಲಾಗಿದೆ.
