ಬೆಂಗಳೂರು: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಆಯೋಜಿಸಿದ ಉದ್ಯೋಗ ಉತ್ಸವ 2025 ಅನ್ನು ಡಾ ಶರಣ ಪ್ರಕಾಶ್ ಪಾಟೀಲ್, ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಭಿವೃದ್ಧಿ ಸಚಿವರು ಉದ್ಘಾಟಿಸಿದರು.
ಉದ್ಯೋಗ ಉತ್ಸವ ಉದ್ಘಾಟನೆ ಮಾಡಿ ಮಾತನಾಡಿದ ಅವರು, FKCCI ಸಂಸ್ಥೆಯನ್ನು ಸ್ಕಿಲ್ ಕನೆಕ್ಟ್ ಪೋರ್ಟಲ್ ಗೆ ನೋಂದಾಯಿಸಿ/ಪಾಲುದಾರರನ್ನಾಗಿಸಬೇಕು ಎಂದು ತಿಳಿಸಿದರು.
ರಾಜ್ಯ ಸರ್ಕಾರದ ಕೌಶಲ್ಯಭಿವೃದ್ಧಿ ಇಲಾಖೆಯಲ್ಲಿ ಲಭ್ಯವಿರುವ ಉದ್ಯೋಗಕಾಂಕ್ಷಿಗಳನ್ನು ಹೆಕ್ಕಿ ಅವರಿಗೆ ಕೆಲಸ ಕೊಡುವ ಕೆಲಸ ಮಾಡಬೇಕಿದೆ. ಹಾಗೆ FKCCI ನಿಂದ ಉದ್ಯೋಗ ಅವಕಾಶದ ವಿಶ್ಲೇಷಣೆ ಮಾಡಬೇಕಿದೆ ಮತ್ತು ಕೌಶಲ್ಯ ತರಬೇತಿ ನೀಡಬೇಕು ಎಂದರು.
ಉತ್ತರ ಕರ್ನಾಟಕದ ಹಲವಾರು ಮಂದಿ ಇಲ್ಲಿ ಉದ್ಯೋಗಕ್ಕೆ ಬರಲು ಇಚೂಸುತ್ತಾರೆ. ಆದರೆ ಅವರಿಗೆ ಅಗತ್ಯ ವೇತನ ಕೊಡಬೇಕಿದೆ.ಅವರು ಬೆಂಗಳೂರಿಗೆ ಬರಲು ಸಾಧ್ಯವಿಲ್ಲ ನೀವು ಇತರೆ ಜಿಲ್ಲೆಗಳಿಗೆ ಹೋಗುತ್ತಿಲ್ಲ. ಈ ಪರಿಸ್ಥಿತಿ ನಿವಾರಣೆಯಾಗಬೇಕಿದೆ, ಎಂದರು ಸಚಿವರು. ಇದನ್ನೂ ಓದಿ: ಹಾಯ್ ಎಂದರೆ ಪ್ರತಿಯಾಗಿ ಹಾಯ್ ಎನ್ನಬಾರದು, ಬಾಯ್ ಹೇಳಬೇಕು: ಸತೀಶ್ ಜಾರಕಿಹೊಳಿ!
120 ಕಂಪನಿಗಳು ನೋಂದಣಿಯಗಿವೆ ಅದರಲ್ಲಿ ಅರ್ಧದಷ್ಟು ಕಂಪನಿಗಳು ಮಹಾಸಂಸ್ಥೆಯ ಸದಸ್ಯರಾಗಿರುವುದರಿಂದ ಉದ್ಯೋಗ ಅವಕಾಶಗಳು ಹೇರಳವಾಗಿವೆ ಎಂದರು. ಸುಮಾರು 5000 ಉದ್ಯೋಗ ಆಕಾಂಕ್ಷಿಗಳು ನೋಂದಾಯಿಸಿಕೊಂ ಡಿದ್ದಾರೆ.
ಇದೇ ಸಂದರ್ಭದಲ್ಲಿಎಂಜಿ ಬಾಲಕೃಷ್ಣ, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಅಧ್ಯಕ್ಷರು, ಅಭಿಷೇಕ್ ಬಿ ಎ, ಸಾಯಿರಾಂ ಪ್ರಸಾದ್, ಅಧ್ಯಕ್ಷರು, ಕೌಶಲ್ಯ ಅಭಿವೃದ್ಧಿ ಸಮಿತಿ, ಶುಭ ಮಹತ, ಉಪಾಧ್ಯಕ್ಷರು, KDEM, ಡಾ ಈ ವಿ ರಾಮಣ ರೆಡ್ಡಿ, ಅಧ್ಯಕ್ಷರು, ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಧಿಕಾರ, ಉಮಾ ರೆಡ್ಡಿ, ಹಿರಿಯ ಉಪಾಧ್ಯಕ್ಷರು, FKCCI, ಹಾಜರಿದ್ದರು.
