ಬೆಂಗಳೂರು: ಬಿಜೆಪಿ ಕಾರ್ಯಕರ್ತ ಬಿಜೆಪಿ ಕಚೇರಿಯಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಛಲವಾದಿ ನಾರಾಯಣ ಸ್ವಮಿಪ್ರ ತಿಕ್ರಿಯೆಸಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತಹ ಕಾಂಗ್ರೆಸ್ನ ಶಾಸಕರು ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಂದು ಬೆಳಿಗ್ಗೆ ನಮಗೆ ವಿಚಾರ ಗೊತ್ತಾಯ್ತು. ಘಟನೆ ಬಗ್ಗೆ ಪೊನ್ನಣ್ಣ ಮತ್ತು ಮಂತರ್ ಗೌಡ ಶಾಸಕರ ವಿರುದ್ಧ ಆರೋಪ ಇದೆ. ತೊಂದರೆ ಕೊಟ್ಟ ಕಾರಣದಿಂದ ಕೋರ್ಟ್ ಗೆ ಹೋಗಿದ್ದಾರೆ. ಇಷ್ಟು ಕಾಲ ತಾಯಿ ಮುಖ ನೋಡೋಕೆ ಆಗಿಲ್ಲ ಅಂತ ಹೇಳ್ಕೊಂಡಿದಾರೆ. ಟಾಯ್ಲಟ್ ನಲ್ಲಿ ಸ್ವಚ್ಚತೆ ಇಲ್ಲ ಅಂತ ವಿನಯ್ ಹೇಳ್ಕೊಂಡಿರೋದು ಸೋಷಿಯಲ್ ಮೀಡಿಯಾದಲ್ಲಿ ಅದು ವೈರಲ್ ಆಗಿದೆ.
ಅದು ಹಾಕಿರೋದು ವಿನಯ್ ಅಲ್ಲ ಬೇರೊಬ್ಬರು ಹಾಕಿರೋದು. ಆ ಗ್ರೂಪ್ ಅಲ್ಲಿ ನಾಲ್ಕೈದು ಜನ ಅಡ್ಮಿನ್ ಗಳಲ್ಲಿ ಇವರು ಒಬ್ಬರು. ಅರೆಸ್ಟ್ ಮಾಡಿ ವಿಚಾರಣೆ ಮಾಡಬಹುದಿತ್ತು ಆದರೆ ಹಾಗೆ ಮಾಡಿಲ್ಲ. ಇದರಿಂದ ಅವರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: BJP ಕಚೇರಿಯಲ್ಲೇ ನೇಣಿಗೆ ಶರಣಾದ ಕಾರ್ಯಕರ್ತ! ಕಾರಣವೇನು ಗೊತ್ತಾ?
ಪರಶುರಾಮ್ ಆತ್ಮಹತ್ಯೆಯಲ್ಲಿ ಇವರ ವಿರುದ್ಧ ಆರೋಪ ಕೇಳಿ ಬಂದಿತ್ತು. ಸಚಿನ್ ಪಾಂಚಾಲ್ ವಿಷಯಲದಲ್ಲಿ ಪ್ರಿಯಾಂಕ ಖರ್ಗೆ ಹೆಸರು ಬಂದಿತ್ತು. ಲಕ್ಷ್ಮೀ ಹೆಬ್ಬಾಳ್ಕರ್ ಹೆಸರಲ್ಲಿ ತಹಶೀಲ್ದಾರ್ ಕಚೇರಿಯಲ್ಲಿ ಒಬ್ಬರು ತೀರ್ಕೊಂರ್ಡು. ವಾಲ್ಮೀಕಿ ನಿಗಮದ ವಿಚಾರದಲ್ಲಿ ನಾಗೇಂದ್ರ ಹೆಸರಲ್ಲಿ ಚಂದ್ರಶೇಕರ್ ಆತ್ಮಹತ್ಯೆ ಮಾಡಿಕೊಂಡ್ರು. ಗುಲ್ಬರ್ಗಾದಲ್ಲಿ ಪ್ರಿಯಾಂಕ್ ಖರ್ಗೆ ಒಂದು ಮಾತನ್ನ ಹೇಳಿದ್ರು. ನಾವು ಬೀದಿಗಿಳಿದರೆ ನೀವು ಓಡಾಡೋದು ಕಷ್ಟ ಆಗುತ್ತೆ ಅಂತ ಹೇಳಿದ್ರು.
