ಕನ್ನಡದ ʼಕಿಸ್ʼ ಚಿತ್ರದ ಮೂಲಕ ಹೆಸರು ಗಳಿಸಿದ ನಟಿ ಶ್ರೀಲೀಲಾ ಅವರಿಗೆ ಹೆಚ್ಚು ಅವಕಾಶಗಳು ಹುಡುಕಿಕೊಂಡು ಬಂದವು. ಕನ್ನಡದ ಕಿಸ್ ಸಿನಿಮಾದ ನಂತರ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟು, ತೆಲುಗು ಚಿತ್ರರಂಗದಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿದ ಅವರು, ಬಾಲಿವುಡ್ನಲ್ಲೂ ಕೂಡ ಅವಕಾಶಗಳು ಶ್ರೀಲೀಲಾ ಅವರನ್ನು ಹುಡುಕಿಕೊಂಡು ಬಂದಿದ್ದು, ಈಗಾಗಲೇ ಮೂರು ಚಿತ್ರದಲ್ಲಿ ನಟಿ ಶ್ರೀಲೀಲಾ ಅವರು ನಟಿಸುತ್ತಿದ್ದಾರೆ.
ಆದರೆ ಬಾಲಿವುಡ್ ನಲ್ಲಿ ನಟಿಸುತ್ತಿರುವ ಶ್ರೀಲೀಲಾ ಅವರನ್ನು ಬಾಲಿವುಡ್ ನ ಸಿನಿಮಾ ಒಂದರಲ್ಲಿ ಹೊರಕ್ಕೆ ಹಾಕಲಾಗಿದೆ ಎಂಬ ಸುದ್ದಿ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಮತ್ತೆ ಮಾಸ್ ಲುಕ್ನಲ್ಲಿ ರಾಮ್ ಚರಣ್
ಹೌದು, ಇತ್ತೀಚೆಗಷ್ಟೆ ಬಾಲಿವುಡ್ಗೂ ಕಾಲಿಟ್ಟ ನಟಿಗೆ ಅವಕಾಶಗಳ ಮೇಲೆ ಅವಕಾಶಗಳು ಸಿಗುತ್ತಿರುವುದು ಗೊತ್ತಿರುವ ಸಂಗತಿಯೇ. ಬಾಲಿವುಡ್ ನ ಸಿನಿಮಾ ಒಂದರಿಂದ ತೆಗೆದು ಹಾಕಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಅಸಲಿಗೆ ಶ್ರೀಲೀಲಾ, ಬಾಲಿವುಡ್ಗೆ ಕಾಲಿಡುತ್ತಿದ್ದಂತೆ ಅವರಿಗೆ 3 ಸಿನಿಮಾಗಳ ಆಫರ್ ದೊರೆತಿತ್ತು. ಮೂರೂ ಸಿನಿಮಾಗಳು ದೊಡ್ಡ ಬಜೆಟ್ನ, ದೊಡ್ಡ ನಿರ್ಮಾಣ ಸಂಸ್ಥೆಯ ಸಿನಿಮಾಗಳೇ ಆಗಿದ್ದವು. ಅವುಗಳಲ್ಲಿ 2 ಸಿನಿಮಾಗಳಿಗೆ ಕಾರ್ತಿಕ್ ಆರ್ಯನ್ ನಾಯಕರಾಗಿದ್ದರು. ಅನುರಾಗ್ ಬಸು ನಿರ್ದೇಶನದ ‘ಆಶಿಖಿ 3’ ಮತ್ತು ‘ಪತಿ-ಪತ್ನಿ ಔರ್ ಓ’ ಸರಣಿಯ ಹೊಸ ಸಿನಿಮಾಕ್ಕೆ ಶ್ರೀಲೀಲಾ ಆಯ್ಕೆ ಆಗಿದ್ದರು. ಎರಡೂ ಸಿನಿಮಾಗಳಿಗೆ ಕಾರ್ತಿಕ್ ಆರ್ಯನ್ ಅವರೇ ನಾಯಕ. ಆದರೆ ಇದೀಗ ಹೊರಬಿದ್ದಿರುವ ಸುದ್ದಿಯಂತೆ ಶ್ರೀಲೀಲಾ ಅವರನ್ನು ‘ಪತಿ-ಪತ್ನಿ ಔರ್ ಓ’ ಸಿನಿಮಾದಿಂದ ಕೈಬಿಡಲಾಗಿದೆಯಂತೆ.
ಶ್ರೀಲೀಲಾ ಅವರ ಬದಲಿಗೆ ‘ಪತಿ-ಪತ್ನಿ ಔರ್ ಓ’ ಸಿನಿಮಾದಲ್ಲಿ ರಾಶಾ ತಂಡಾನಿಯನ್ನು ತೆಗೆದುಕೊಳ್ಳಲಾಗುತ್ತಿದೆ ಎಂಬ ಸುದ್ದಿ ಬಾಲಿವುಡ್ ಗಲ್ಲಿಗಳಲ್ಲಿ ಹರಿದಾಡುತ್ತಿದೆ.
