ನಟ ರಾಮ್ ಚರಣ್ ಅವರು ಇಂದು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದು, ಅವರ ಹುಟ್ಟು ಹಬ್ಬದ ಸಂಭ್ರಮಕ್ಕೆಂದು ಅಭಿಮಾನಿಗಳ ಮುಂದೆ ಮಾಸ್ ಲುಕ್ಕಿನಲ್ಲಿ ಎಂಟ್ರಿ ಕೊಟ್ಟಿದ್ದಾರೆ.
ಹೌದು, ಪೆದ್ದಿ ಸಿನಿಮಾದ ಟೈಟಲ್ ಫೈನಲ್ ಆಗಿದ್ದು, ಇಂದು ರಾಮ್ ಚರಣ್ ರವರ ಹುಟ್ಟು ಹಬ್ಬದ ಪ್ರಯುಕ್ತ ಚಿತ್ರತಂಡವು ಟೈಟಲ್ ರಿವಿಲ್ ಮಾಡಿದೆ. ಇದನ್ನೂ ಓದಿ: ಹಳ್ಳಿ ಹುಡುಗಿ ಪಾತ್ರದಲ್ಲಿ ಮಿಂಚುತ್ತಿರುವ ಸಪ್ತಮಿ ಗೌಡ
ಇನ್ನು ಸಾಮಾನ್ಯವಾಗಿ ಯಾವುದೇ ಹೀರೋ ಅಥವಾ ಹೀರೋಯಿನ್ ಹುಟ್ಟುಹಬ್ಬ ಪ್ರಯುಕ್ತ ಚಿತ್ರತಂಡವು ಟೈಟಲ್ ಅಥವಾ ಟ್ರೈಲರ್ ರಿಲೀಸ್ ಮಾಡುವುದು ಸರ್ವೇಸಾಮಾನ್ಯ ಅದರಂತೆ ಇದೀಗ ಪೆದ್ದಿ ಸಿನಿಮಾದ ಟೈಟಲ್ ರಿಲೀಸ್ ಮಾಡಿ ರಾಮ್ ಚರಣ್ ಅಭಿಮಾನಿಗಳಿಗೆ ಹುಟ್ಟು ಹಬ್ಬದ ದಿನದಂದು ಚಿತ್ರತಂಡವು ಭರ್ಜರಿ ಗಿಫ್ಟ್ ನೀಡಿದೆ.
