Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಚಿಲ್ಲರೆ ವಿಷಯಕ್ಕಾಗಿ ರಕ್ತ ಬರುವಂತೆ ಹೊಡೆದ ಕೆಎಸ್ಆರ್‌ಟಿಸಿ ಬಸ್ ಚಾಲಕ
  • Crime
  • State

ಚಿಲ್ಲರೆ ವಿಷಯಕ್ಕಾಗಿ ರಕ್ತ ಬರುವಂತೆ ಹೊಡೆದ ಕೆಎಸ್ಆರ್‌ಟಿಸಿ ಬಸ್ ಚಾಲಕ

admin March 24, 2025
Spread the love

ಶಹಾಪುರ: ನಗರದ ಹಳೇ ಬಸ್ ನಿಲ್ದಾಣದಲ್ಲಿ ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸಿ ಚಿಲ್ಲರೆ ಕೇಳಲು ಹೋದ ಪ್ರಯಾಣಿಕ ಯುವಕ ಸಲಾಹುದ್ದೀನ್‌ಗೆ ಬಸ್ ಚಾಲಕ ರಾಮಪ್ಪ ಗೋನಾಲ್ ಎನ್ನುವವರು ಬಡಿಗೆ(ಕಟ್ಟಿಗೆ)ಯಿಂದ ಬಲವಾಗಿ ಹೊಡೆದಿದ್ದು ಸ್ಥಳದಲ್ಲೇ ನೆಲಕ್ಕೇ ಬಿದ್ದ ಯುವಕ ತಲೆಯಿಂದ ತೀವ್ರ ರಕ್ತಸ್ರಾವವಾಗಿದ್ದರಿಂದ ಸ್ಥಳೀಯರು ಕೂಡಲೇ ಯುವಕನನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು.

ಘಟನೆ ಹಿನ್ನೆಲೆ

ಕಲಬುರಗಿ ಮೂಲದ ಯುವಕ ಸಲಾಹುದ್ದೀನ್ (23) ತನ್ನ ಕೆಲಸಕ್ಕೆ ಸುರಪುರಕ್ಕೆ ಬಂದಿದ್ದ, ಗೋನಾಲ್ ಮೂಲದ ಚಾಲಕ ರಾಮಪ್ಪನ ನಡುವೆ ಚಿಲ್ಲರೆ ಹಣಕ್ಕಾಗಿ ವಾಗ್ವಾದ ನಡೆದಿದೆ. ಕೇಲ ಹೊತ್ತು ನಿಲ್ದಾಣದ ಕಛೇರಿಯ ಒಳಗಡೆ ಮಾತಿಗೆ ಮಾತು ಬೆಳೆದಿದೆ. ನಂತರ ಮಾರಾಮಾರಿ ಉಂಟಾಗಿದೆ. ರೊಚ್ಚಿಗೆದ್ದ ಚಾಲಕ ರಾಮಪ್ಪನು ಪಕ್ಕದಲ್ಲಿದ್ದ ದೊಡ್ಡ ಬಡಿಗೆಯಿಂದ ಯುವಕನ ತಲೆಗೆ ಬಲವಾಗಿ ಹೊಡೆದಿದ್ದಾನೆ. ಸ್ಥಳದಲ್ಲೇ ತೀವ್ರ ರಕ್ತಸ್ರಾವದಿಂದ ಯುವಕ ನೆಲಕ್ಕೆ ಬಿದ್ದಿದ್ದು ಸ್ಥಳಿಯರೇ ಮುಂದಾಗ ಆಸ್ಪತ್ರೆ ಸೇರಿಸಿದ್ದಾರೆ. ಕೂಡಲೇ ಗಾಬಾರಿಗೊಂಡ ಕೇಲ ಚಾಲಕರು ಪೊಲೀಸರಿಗೆ ಕರೆ ಮಾಡಿದ್ದಾರೆ. ತಕ್ಷಣವೇ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಸೇಡಿಗೆ ಸೇಡು, ಖಾಕಿ ಬೇಟೆ, ನೆತ್ತರು ಹರಿಸಿದ ಹಂತಕರು ಜೈಲಿಗೆ

ಜಿಲ್ಲೆಗಳಲ್ಲಿ ಬಸ್ ಚಾಲಕರ ಮತ್ತು ಪ್ರಯಾಣಿಕರ ನಡುವೆ ಹೊಡೆದಾಟ, ಬಡಿದಾಟ ಸಹಜವಾಗಿದೆ. ಇದು ನಾಗರಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಬಸ್ ಚಾಲಕರು, ನಿರ್ವಾಹಕರು ಸ್ಥಳೀಯರು ಎನ್ನುವ ಕಾರಣಕ್ಕೆ ಪ್ರಯಾಣಿಕರಿಗೆ ದರ್ಪ ತೋರಿಸುತ್ತಿದ್ದಾರೆ. ಕೆಕೆಆರ್‌ಟಿಸಿ ಬಸ್‌ನಲ್ಲಿ ಮಹಿಳೆಯರಿಗೆ, ಮಕ್ಕಳಿಗೆ ಸುರಕ್ಷತೆ ಇಲ್ಲದಂತಾಗಿದೆ. ಭದ್ರತೆ ಇಲ್ಲದಂತಾಗಿದೆ. ಪೊಲೀಸ್ ಇಲಾಖೆಯವರು ಈ ಕುರಿತು ಎಚ್ಚೆತ್ತುಕೊಂಡು ಕ್ರಮ ವಹಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

About the Author

admin

Administrator

Visit Website View All Posts

Spread the love

Post navigation

Previous: ಸಂವಿಧಾನ ವಿರೋಧಿ ಇಡೀ ಸರ್ಕಾರವೇ ರಾಜೀನಾಮೆ ನೀಡಬೇಕು: ಬೊಮ್ಮಾಯಿ
Next: ಸಿಎಂ ನೇತೃತ್ವದಲ್ಲಿಂದು ಸಭೆ

Views:

28

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.