ಬೆಂಗಳೂರು: ಚುನಾವಣಾ ಪ್ರಕ್ರಿಯೆಗಳನ್ನು ಮತ್ತಷ್ಟು ಬಲಪಡಿಸಲು ಕಾನೂನಿನ ಚೌಕಟ್ಟಿನೊಳಗೆ ಸಂವಹನ ನಡೆಸುವ ಉದ್ದೇಶದೊಂದಿಗೆ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳÀ ಅಧ್ಯಕ್ಷರು ಹಾಗೂ ನಾಯಕರೊಂದಿಗೆ ಸಭೆಗಳನ್ನು ಹಮ್ಮಿಕೊಳ್ಳಲು ಎಲ್ಲಾ ಚುನಾವಣಾಧಿಕಾರಿಗಳಿಗೆ ಸೂಚಿಸಿದೆ.
ಚುನಾವಣೆಗಳಿಗೆ ಸಂಬಂಧಿಸಿದಂತೆ ತಾಲೂಕು ಮಟ್ಟದಲ್ಲಿ ಚುನಾವಣಾ ನೊಂದಣಾಧಿಕಾರಿಗಳು (ERO), ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳು (DEO) ಅಥವಾ ರಾಜ್ಯ ಮಟ್ಟದಲ್ಲಿ ಮುಖ್ಯ ಚುನಾವಣಾಧಿಕಾರಿಗಳು (CEO) ಬಗೆಹರಿಸಲಾಗದ ಯಾವುದೇ ಸಮಸ್ಯೆಗಳಿಗೆ ಸಂಬಂಧಿಸಿದಂತೆ, ಎಲ್ಲಾ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಸಲಹೆಗಳನ್ನು ಕ್ರೂಢೀಕರಿಸಿ 2025 ರ ಏಪ್ರಿಲ್ 30 ರೊಳಗೆ ಭಾರತದ ಚುನಾವಣಾ ಆಯೋಗಕ್ಕೆ ಸಲ್ಲಿಸಲು ಸೂಚಿಸಲಾಗಿದೆ.
ಈ ಕುರಿತು ಆಯೋಗದಿಂದ (ಮಂಗಳವಾರ ಮಾ. 11) ರಂದು ರಾಜಕೀಯ ಪಕ್ಷಗಳಿಗೆ ಕಳುಹಿಸಲಾಗಿರುವ ವೈಯಕ್ತಿಕ ಪತ್ರದಲ್ಲಿ, ಆಯೋಗವು ರಾಜಕೀಯ ಪಕ್ಷಗಳ ಅಧ್ಯಕ್ಷರು ಮತ್ತು ಪಕ್ಷದ ಹಿರಿಯ ಸದಸ್ಯರೊಂದಿಗೆ ಪರಸ್ಪರ ಅನುಕೂಲಕರ ಸಮಯದಲ್ಲಿ, ಸ್ಥಾಪಿತ ಕಾನೂನಿಗೆ ಅನುಗುಣವಾಗಿ ಚುನಾವಣಾ ಪ್ರಕ್ರಿಯೆಗಳನ್ನು ಮತ್ತಷ್ಟು ಬಲಪಡಿಸಲು ಸಂವಾದವನ್ನು ರೂಪಿಸಲು ವೇದಿಕೆಯನ್ನು ಸೃಜಿಸಲಾಗಿದೆ. ಇದನ್ನೂ ಓದಿ: ಏ.14 ರಂದು ಡಾ.ಬಾಬಾ ಸಾಹೇಬರ ಪುತ್ಥಳಿ ಅನಾವರಣಕ್ಕೆ ಭರವಸೆ
ಇದಕ್ಕೂ ಮೊದಲು, ಕಳೆದ ವಾರ ನಡೆದ ಭಾರತ ಚುನಾವಣಾ ಆಯೋಗದ ಎಲ್ಲಾ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳ ಸಮ್ಮೇಳನದಲ್ಲಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಮುಖ್ಯ ಚುನಾವಣಾಧಿಕಾರಿಗಳು, ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಎಲ್ಲಾ ರಾಜ್ಯಗಳ / ಕೇಂದ್ರಾಡಳಿತ ಪ್ರದೇಶಗಳ ಚುನಾವಣಾ ನೋಂದಣಾದಿಕಾರಿಗಳು, ರಾಜಕೀಯ ಪಕ್ಷಗಳೊಂದಿಗೆ ನಿಯಮಿತವಾಗಿ ಸಂವಹನ ನಡೆಸಲು ಸೂಚನೆ ನೀಡಿದ್ದರು. ಇಂತಹ ಸಭೆಗಳಲ್ಲಿ ಪಡೆದ ಯಾವುದೇ ಸಲಹೆಗಳನ್ನು ಈಗಾಗಲೇ ಕಾನೂನು ಚೌಕಟ್ಟಿನೊಳಗೆ ಕಟ್ಟುನಿಟ್ಟಾಗಿ ಪರಿಹರಿಸಿ, 2025ನೇ ಮಾರ್ಚ್ 31, ರೊಳಗೆ ತೆಗೆದುಕೊಂಡ ವರದಿಯನ್ನು ಆಯೋಗಕ್ಕೆ ಸಲ್ಲಿಸಲು ತಿಳಿಸಲಾಗಿತ್ತು. ಅಲ್ಲದೆ, ಚುನಾವಣಾ ಆಯೋಗದ ಈ ವಿನೂತನ ಕಾರ್ಯಕ್ಕೆ ರಾಜಕೀಯ ಪಕ್ಷಗಳೂ ಸಹ ಕೈಜೋಡಿಸುವ ಮೂಲಕ ಪ್ರಜಾಪ್ರಭುತ್ವವನ್ನು ಬಲಿಷ್ಠಗೊಳಿಸಲು ಒತ್ತಾಯಿಸಲಾಗಿತ್ತು.
