ಶಹಾಪುರು: ಸತತ 14 ತಿಂಗಳ ಹೋರಾಟದ ಫಲವಾಗಿ ಸರ್ಕಾರಿ ಸ್ಥಳದಲ್ಲಿ ಡಾ.ಬಾಬಾ ಸಾಹೇಬರ ಪತ್ಥಳಿ ಸ್ಥಾಪನೆಗೆ ಅವಕಾಶ ಸಿಕ್ಕಿದ್ದು, ಸಾಧ್ಯವಾದರೆ ಏ.14 ರಂದು ಪುತ್ಥಳಿ ಅನಾವರಣಗೊಳ್ಳಲಿದೆ ಎಂದು ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ನಗರದ ಹಳೇ ಬಸ್ ನಿಲ್ದಾಣದ ಎದುರು ಡಾ.ಬಿ.ಆರ್ ಅಂಬೇಡ್ಕರ್‌ರವರ ನೂತನ ಪುತ್ಥಳಿ ನಿರ್ಮಾಣಕ್ಕೆ ಭೂಮಿಪೂಜೆ ನೇರವೆರಿಸಿ ಮಾತನಾಡಿದ ಅವರು, ಸಾರ್ವಜನಿಕ ಸ್ಥಳದಲ್ಲಿ ಸುಪ್ರಿಂಕೋರ್ಟ್ ಆಧೇಶ ಅನ್ವಯ ಮೂರ್ತಿ ಸ್ಥಾಪನೆಗೆ ಅವಕಾಶ ಇಲ್ಲ ಎಂದು ರದ್ದು ಮಾಡಲಾಗಿತ್ತು. ಗೃಹ ಸಚಿವ ಜಿ.ಪರಮೇಶ್ವರ ಹಾಗೂ ಸಮಾಜ ಕಲ್ಯಾಣ ಸಚಿವ ಎಚ್.ಸಿ ಮಹಾದೇವಪ್ಪ ಅವರ ಪ್ರಯತ್ನದಿಂದ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಇದಕ್ಕೆ ಒಪ್ಪಿಗೆ ನೀಡಿದ ನಂತರ ಸಚಿವ ಸಂಪುಟದಲ್ಲಿ ಮಹತ್ವದ ನಿರ್ಣಯ ತೆಗೆದುಕೊಂಡು ಒಪ್ಪಿಗೆ ಪಡೆದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಬಗ್ಗೆ ಎಲ್ಲಾ ರೀತಿಯಿಂದ ಮನವರಿಕೆ ಮಾಡಿದ ಫಲವಾಗಿ ಇಂದು ಮೂರ್ತಿ ಸ್ಥಾಪನೆಗೆ ಅವಕಾಶ ಸಿಕ್ಕೀದೆ. ಇದಕ್ಕೆ ಸಾಕಷ್ಟು ಜನ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಇಂದು 198.35 ಚ.ಮೀ ಜಾಗವನ್ನು ಉದ್ಯಾನ ಮತ್ತು ಪ್ರತಿಮೆ ಸ್ಥಾಪನೆಗೆ ಅವಕಾಶ ಸಿಕ್ಕಿದೆ. ಮತ್ತು ಏಪ್ರೀಲ್ 14 ರಂದು ಬಾಬಾ ಸಾಹೇಬರ ಜಯಂತಿ ದಿನದಂದು ಪ್ರತಿಮೆ ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಆರಬೋಳ ಮಾತನಾಡಿ, ಸಚಿವರು ತಮ್ಮ ಅವಧಿಯಲ್ಲಿ ಸಾಕಷ್ಟು ಐತಿಹಾಸಿಕ ಕಾರ್ಯಕ್ರಮಗಳನ್ನು ಮಾಡಿದ್ದು ಎಲ್ಲಾ ಮಾಹನ್ ನಾಯಕರು ಪ್ರತಿಮೆಗಳು ನಮ್ಮ ತಾಲೂಕಿನಲ್ಲಿ ಅಷ್ಟೇ ಕಾಣಬಹುದು, ಎಲ್ಲ ಸಮುದಾಯವನ್ನು ಸಮನಾಗಿ ಕಾಣುವ ಮನೋಭಾವವನ್ನು ಹೊಂದಿದ್ದು ಪ್ರತಿ ಸಮುದಾಯ ಜನತೆಗೆ ಭವನಗಳು ಒದಗಿಸುವ ಕೆಲಸ ಮಾಡಿದ್ದು ಇತರರಿಗೂ ಮಾದರಿಯ ನಾಯಕರಾಗಿದ್ದಾರೆ ಎಂದರು. ಇದನ್ನೂ ಓದಿ: ಜೀವಮಾನ ಸಾಧನೆ ಪ್ರಶಸ್ತಿ ಪಡೆದ ಶಬಾನಾ ಆಜ್ಮಿ
ದಲಿತ ಮುಖಂಡ ಮಲ್ಲಿಕಾರ್ಜುನ ಪೂಜಾರಿ ಮಾತನಾಡಿ, ಸಮಾಜದ ಹೋರಾಟ ಫಲಿಸಿದೆ. ಸುಲಭವಾಗಿ ಕೇಳಿದರೆ ಸ್ಥಲವಕಾಶ ಸಿಗುತ್ತಿರಲಿಲ್ಲಾ ಅದೇ ಬಾಬಾ ಸಾಹೇಬರ ವಿಚಾರಧಾರೆಯಂತೆ ನಮ್ಮ ಹಕ್ಕನ್ನು ಕಸಿದುಕೊಳ್ಳಬೇಕಾಗುತ್ತದೆ. ಇದಕ್ಕೆ ಎಲ್ಲಾ ಸಮಾಜದ ಪ್ರತಿಯೊಬ್ಬರು ಬೆನ್ನಲುಬಾಗಿ ನಿಂತು ಹೋರಾಡಿದ್ದಾರೆ. ಸಚಿವರು ಸಹ ಮುತುವರ್ಜಿ ವಹಿಸಿ ಪುತ್ಥಳಿ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟಿದ್ದು ಧನ್ಯವಾದ ತಿಳಿಸಿದರು. ಕಾರ್ಯಕ್ರಮದಲ್ಲಿ ಮೆತ್ತೆಪಾಲ ಭಂತೇಜಿ ಸಾನಿಧ್ಯ ವಹಿಸಿದ್ದರು.
ನಗರದ ಹಳೇ ಬಸ್ ನಿಲ್ದಾಣ ಮುಂಭಾಗದಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಬಾಬಾ ಸಾಹಬೇರ ಪ್ರತಿಮೆ ಸ್ಥಾಪನೆಗೆ ಆಗ್ರಹಿಸಿ ರಾತ್ರೋರಾತ್ರಿ ನಾಮಫಲಕವನ್ನು ಹಾಕಲಾಗಿತ್ತು, ಇದರ ಭೇನ್ನಲ್ಲೇ ಪೊಲೀಸರು 9 ಜನರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಂಡಿದ್ದರು. ಪ್ರಕರಣ ನ್ಯಾಯಲಯದಲ್ಲಿದ್ದು ಅದು ಸಹ ವಾಪಸ್ ಪಡೆಯಲಾಗುವುದು ಎಂದು ಸಚಿವ ದರ್ಶನಾಪುರ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಶರಣು ಗದ್ದುಗೆ, ಸಿದ್ದಲಿಂಗಪ್ಪ ಆನೇಗುಂದಿ, ಶರಣಪ್ಪ ಸಲಾದಪುರ, ಬಸವರಾಜಪ್ಪಗೌಡ ತಂಗಡಗಿ, ಆರ್. ಚೆನ್ನಬಸ್ಸು, ಭೀಮಣ್ಣ ಮೇಟಿ, ನೀಲಕಂಠ ಬಡಿಗೇರ, ಇಬ್ರಾಹಿಂ ಶಿರವಾಳ, ದೇವಿಂದ್ರಪ್ಪಗೌಡ ಗೌಡಗೇರ, ಗೌಡಪ್ಪಗೌಡ ಆಲ್ದಾಳ, ಗಿರೆಪ್ಪಗೌಡ ಬಾಣತಿಹಾಳ, ಗುಂಡಪ್ಪ ತುಂಬಗಿ, ಶಿವಪುತ್ರ ಜವಳಿ, ಶ್ರೀಶೈಲ ಹೊಸ್ಮನಿ, ನಾಗಣ್ಣ ಬಡಿಗೇರ, ಮುಸ್ತಫ ದರ್ಬಾನ್, ಮರೆಪ್ಪ ಪ್ಯಾಟಿ, ಸಣ್ಣ ನಿಂಗಣ್ಣ ನಾಯ್ಕೊಡಿ, ಮಾನಸಿಂಗ್ ಚವ್ಹಾಣ, ಈರಣ್ಣಗೌಡ ಮಲ್ಲಬಾದಿ, ಶಾಂತಪ್ಪ ಗುತ್ತೇದಾರ, ಶಂಕರ್ ಸಿಂಗೆ, ಸೈಯದ್ದುದ್ದೀನ್ ಖಾದ್ರಿ, ಅಪ್ಪಣ್ಣ ದಶವಂತ, ಸುಭಾಷ ತಳವಾರ, ಶಿವಕುಮಾರ ತಳವಾರ, ಭೀಮರಾಯ ಜುನ್ನಾ, ಡಿಪೋ ವ್ಯವಸ್ಥಾಪಕ ಎಸ್.ಪಿ ರಾಠೋಡ, ಭೀಮರಾಯ ಕಾಂಗ್ರೆಸ್, ಶರಣು ದೋರನಹಳ್ಳಿ ಇದ್ದರು.
