ಬೆಂಗಳೂರು: ಸ್ಯಾಂಡಲ್ ವುಡ್ ನಟಿ ರನ್ಯಾ ಅಕ್ರಮ ಚಿನ್ನ ಸಾಗಟನೆ ಪ್ರಕರಣದಲ್ಲಿ ಇದೀಗ ಜೈಲು ಅತಿಥಿಯಾಗಿದ್ದು, ಜೈಲಿನಲ್ಲಿ ವಿಚಾರಣೆ ವೇಳೆ ನಟಿ ಕೆಲವು ಮಹತ್ವದ ಅಂಶಗಳನ್ನು ಹೊರಹಾಕಿದ್ದಾರೆ ಎಂಬ ಮಾಹಿತಿ ಇದೀಗ ತಿಳಿದು ಬಂದಿದೆ.
ಹೌದು, ಸ್ಯಾಂಡಲ್ ವುಡ್ ನಟಿ ರನ್ಯಾ ಅವರು ದುಬೈ ನಿಂದ ಬೆಂಗಳೂರಿಗೆ ಅಕ್ರಮವಾಗಿ ಚಿನ್ನ ಸಾಗಟನೆ ಮಾಡುತ್ತಿರುವ ಸಂದರ್ಭದಲ್ಲಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ನಟಿ ರನ್ಯಾರನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಅನಧೀಕೃತ ಶಾಲೆ, ಕೋಚಿಂಗ್ಗಳಲ್ಲಿ ದಾಮ್ ಧೂಮ್ ಕಾರ್ಯಕ್ರಮ
ತಾನು ಇದೇ ಮೊದಲ ಬಾರಿಗೆ ಚಿನ್ನ ತಂದಿರುವುದಾಗಿ ನಟಿ ಹೇಳಿಕೊಂಡಿದ್ದಾರೆ. ಅಲ್ಲದೆ ಚಿನ್ನವನ್ನು ಕಳ್ಳಸಾಗಣೆ ಮಾಡುವಂತೆ ನನಗೆ ಬೆದರಿಕೆ ಹಾಕಲಾಗಿತ್ತು ಎಂದು ಸಹ ರನ್ಯಾ ಹೇಳಿದ್ದಾರೆ.
ಒಂದಷ್ಟು ಜನ ಸೇರಿ ನನ್ನನ್ನ ಟ್ರ್ಯಾಫ್ ಮಾಡಿದ್ದಾರೆ. ಹಾಗಾಗಿಯೇ ನಾನು ಈ ಕೆಲಸ ಮಾಡಿದ್ದೀನಿ ಅಂತ ರನ್ಯಾ ಹೇಳಿಕೊಂಡಿದ್ದಾಳೆ. ಹಾಗಾದರೆ, ನಟಿ ಯಾವ ಟ್ರ್ಯಾಪ್ಗೆ ಒಳಗಾದರು? ಟ್ರ್ಯಾಪ್ ಮಾಡಿದ್ದು ಯಾರು? ಯಾಕಾಗಿ ಟ್ರ್ಯಾಫ್ ಮಾಡಿದ್ರು ಎಂಬ ಪ್ರಶ್ನೆಗಳನ್ನು ಡಿಆರ್ಐ ಅಧಿಕಾರಿಗಳು ನಟಿ ಮುಂದಿಟ್ಟಿದ್ದಾರೆ. ಆದರೆ, ಉತ್ತರ ನೀಡಲು ನಟಿ ನಕಾರ ಮಾಡಿದ್ದಾರೆ.
