ಶಹಾಪುರ: ಜಿಲ್ಲೇಯಾದ್ಯಂತ ಅನಧೀಕೃತ ಶಾಲೆಗಳ ಹಾವಳಿ ಹೆಚ್ಚಿದ್ದು ಎಲ್ಲೇಡೆ ದಾಮ್ ಧೂಮ್ ಎನ್ನುವಂತೆ ಅನಧೀಕೃತ ಶಾಲೆ, ಕೋಚಿಂಗ್ಗಳಲ್ಲಿ ವಾರ್ಷಿಕೋತ್ಸವ ನೆಪದಲ್ಲಿ ಪ್ರಭಾವಿ ವ್ಯಕ್ತಿಗಳು, ರಾಜಕೀಯ ನಾಯಕರನ್ನು ಕರೆಯಿಸಿ ಕಾರ್ಯಕ್ರಮಗಳು ಮಾಡುತ್ತಿದ್ದು ಇದಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಸಹ ಸಾಕ್ಷಿಯಾಗುತ್ತಿದ್ದಾರೆ.
ಅನಧೀಕೃತ ಶಾಲೆ, ಕೋಚಿಂಗ್ಗಳನ್ನು ಮುಚ್ಚಿಸಲು ವಿವಿಧ ಸಂಘಟನೆಗಳು ಸಾಕಷ್ಟು ಹೋರಾಟ ಮಾಡಿ ವರ್ಷ ಕಳೆಯುತ್ತಿದೆ ಆದರೆ ಇದಾವುದಕ್ಕೂ ಕ್ಯಾರೆ ಎನ್ನದ ಶಾಲೆಗಳ ಮುಖ್ಯಸ್ಥರು ಪ್ರಭಾವಿಗಳನ್ನು ಕರೆಯಿಸಿ ತಮ್ಮ ಪ್ರಬಲತೆಯನ್ನು ತೋರಿಸಿ ಪಾಲಕರನ್ನು ವಂಚಿಸುವ ಕೆಲಸ ಬಹಳ ಸಲಿಸಾಗಿ ನಡೆಯುತ್ತಿದೆ. ಇದನ್ನು ಪ್ರಜ್ಞಾವಂತ ನಾಗರಿಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಅನಧೀಕೃತ ಶಾಲಾ, ಕೋಚಿಂಗ್ಗಳ ಕುರಿತು ಮೇಲಾಧಿಕಾರಿಗಳಿಗೆ ವರದಿಯನ್ನು ಸಲ್ಲಿಸಿವೆ ಆದರೆ ಆ ವರದಿಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಶಿಕ್ಷಣ ಇಲಾಖೆಯಲ್ಲಿರುವ ಅನೇಕ ಅಧಿಕಾರಿಗಳು, ಸಿಬ್ಬಂದಿಗಳ ಮಕ್ಕಳು ಇದೇ ಅನಧಿಕೃತ ಶಾಲೆಗಳಲ್ಲಿ ಇದ್ದು ಅವರೇ ಅತಿಥಿಗಳಾಗಿ ಪಾಲ್ಗೊಳ್ಳುತ್ತಿರುವುದು ಸಂಶಯಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಡಿಸಿಎಂ ಭೇಟಿ ಮಾಡಿದ ರೆಡ್ಡಿ ಸಂಘದ ಅಧ್ಯಕ್ಷರು
ಸುಮಾರು ವರ್ಷಗಳಿಂದ ಕೇಲ ಶಾಲೆಗಳು ಬಹಿರಂಗವಾಗಿ ಪೋಷಕರು, ಮಕ್ಕಳಿಗೆ ವಂಚಿಸುತ್ತಿದೆ. ಇದಕ್ಕೆ ಅಧಿಕಾರಿಗಳೇ ಹೊಣೆ ಹೊರಬೇಕು. ಆದರೆ ಅಧಿಕಾರಿಗಳನ್ನೇ ಶಾಲಾ ವಾರ್ಷಿಕೋತ್ಸವದ ನೆಪಸಲ್ಲಿ ಕರೆಯಿಸಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಇದಕ್ಕೆ ಇಲಾಖೆ ಅಧಿಕಾರಿಗಳು ಸೊಪ್ಪಾಕುತ್ತಿದ್ದಾರೆ. ಇನ್ನೂ ಕೇಲ ಶಾಲೆಗಳು ಪ್ರಭಾವಿಗಳ ಒಡೆತನದಲ್ಲಿ ಇವೆ ಎನ್ನುವ ಆರೋಪಗಳು ಸಹ ಕೇಳಿಬರುತ್ತಿದೆ.
ಮಕ್ಕಳನ್ನೂ ಚೆನ್ನಾಗಿ ಓದಿಸಬೇಕು ಒಳ್ಳೆ ಶಿಕ್ಷಣ ನೀಡಿ ಐಎಎಸ್, ಐಪಿಎಸ್ ಹುದ್ದೆಗೇರಿಸಬೇಕು ಅಂತ ಅದೆಷ್ಟೋ ಪೋಷಕರು ಹಗಲಿರುಳು ಕಷ್ಟಪಟ್ಟು ದುಡಿದು ಲಕ್ಷ ಲಕ್ಷ ಶುಲ್ಕ ಕಟ್ಟಿರುತ್ತಾರೆ. ಮಕ್ಕಳನ್ನು ಹೈಟೆಕ್ ಶಾಲೆಗಳೆಂದು ಹಿಂದು ಮುಂದು ನೋಡದೆ ಮಕ್ಕಳನ್ನು ದಾಖಲಿಸುತ್ತಾರೆ. ಆದರೆ ಲಕ್ಷ ಶುಲ್ಕ ಕಟ್ಟಿಸಿಕೊಂಡ ಶಾಲೆಗಳು ಪೋಷಕರ ಕನಸು ಆಸೆಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ. ಕಾರ್ಯಕ್ರಮಗಳ ಮೂಲಕ ತಮ್ಮ ಪ್ರಬಲತೆಯನ್ನು ತೋರಿಸಿ ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.
ಇದರಿಂದ ಕಾನೂನು ಕ್ರಮವಹಿಸಿ ಕಡಿವಾಣ ಹಾಕಬೇಕಿರುವ ಶಿಕ್ಷಣ ಇಲಾಖೆ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದು ಅಧಿಕಾರಿಗಳಿಗೆ ಕಾರ್ಯಕ್ರಮಕ್ಕೆ ಹೋಗಿ ಹಾರ ತುರಾಯಿ ಹಾಕಿಸಿಕೊಂಡು ಮಿಂಚುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಜ್ಞಾವಂತ ನಾಗರಿಕರು ಪ್ರಶ್ನಿಸುತ್ತಿದ್ದಾರೆ.
ಇದರ ವಿರುದ್ಧ ಸುಮಾರು ಒಂದು ವರ್ಷದಿಂದ ಹೋರಾಟ ನಡೆಯುತ್ತಿದೆ. ಆದರೆ ಅಧಿಕಾರಿಗಳೆ ಹೋಗಿ ಕಾರ್ಯಕ್ರಮದಲ್ಲಿ ಕುಳಿತು ಬಾಷಣ ಹೊಡೆಯುತ್ತಿದ್ದು, ಇದೂ ನಿಜಕ್ಕೂ ನಾಚಿಕೆಗೇಡಿನ ಸಂಗತಿ, ಇನ್ನೇನು ಬೇಸಿಗೆ ತರಬೇತಿಗಳು ಸಹ ಪ್ರಾರಂಭಗೊಳ್ಳಲಿದ್ದು ಇಂತಹ ಕಾರ್ಯಕ್ರಮಗಳ ಮೂಲಕ ಪಾಲಕರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಮೇಲಾಧಿಕಾರಿಗಳು ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧವೇ ಕ್ರಮಕ್ಕೆ ಮುಂದಾಗಬೇಕೆಂದು ನಮ್ಮ ಕರ್ನಾಟಕ ಸೇನೆಯ ರಾಜ್ಯ ಪ್ರಧಾನ ಸಂಚಾಲಕ ಭೀಮಣ್ಣ ಶಖಾಪುರ ಹೇಳಿದರು.
