ಬೆಂಗಳೂರು: ಮುಸ್ಲಿಂ ಬಾಂಧವರಿಗೆ ಅತಿ ದೊಡ್ಡ ಹಬ್ಬ ಎಂದರೆ ಅದು ಪವಿತ್ರವಾದ ರಂಜಾನ್ ಹಬ್ಬ.
ಹೌದು, ಮುಸ್ಲಿಮರ ಪವಿತ್ರ ರಂಜಾನ್ ಹಬ್ಬ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಈ ಹಬ್ಬದಲ್ಲಿ ಒಂದು ತಿಂಗಳು ಉಪವಾಸ ಮಾಡುತ್ತಾರೆ. ತಮ್ಮ ಕಷ್ಟ ನಷ್ಟಗಳನ್ನೆಲ್ಲ ದೂರ ಮಾಡಲೆಂದು ಪವಿತ್ರವಾದ ರಂಜಾನ್ ಹಬ್ಬದಲ್ಲಿ ಮುಸ್ಲಿಂ ಬಾಂಧವರು ಒಂದು ತಿಂಗಳು ಉಪವಾಸ ಇರುವ ಮೂಲಕ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ.
ಇನ್ನು ಉಪವಾಸ ಇರುವುದರಿಂದ ಸಂಜೆ ಹೊತ್ತಿನಲ್ಲಿ ಉಪವಾಸ ಬಿಡಲು ಕೆಲಸ ನಿರ್ವಹಿಸುತ್ತಿರುವ ಸರ್ಕಾರಿ ನೌಕರರಿಗೆ ತೊಂದರೆಯಾಗುತ್ತದೆ ಹಾಗಾಗಿ ಸಂಜೆ 4:00 ಮೇಲೆ ಸರ್ಕಾರಿ ನೌಕರಿಗಳು ತಮ್ಮ ಮನೆಗೆ ಹೋಗಿ ಉಪವಾಸ ಬಿಡಲು ಅನುಮತಿ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೆಪಿಸಿಸಿ ಅಧ್ಯಕ್ಷರಾದ ಸೈಯದ್ ಅಹ್ಮದ್ ಮತ್ತು ನಜೀರ್ ಅಹ್ಮದ್ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಬಾಬಾ ಸಾಹೇಬರ ಪ್ರತಿಮೆ ಸ್ಥಾಪನೆಗೆ ಸಚಿವ ಸಂಪುಟ ಒಪ್ಪಿಗೆ
ಇನ್ನು ಬೇರೆ ರಾಜ್ಯಗಳಾದ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ರಂಜಾನ್ ಹಬ್ಬದ ಉಪವಾಸ ಬಿಡಲು ಅನುಕೂಲವಾಗುವಂತೆ ಮುಸ್ಲಿಂ ಸರ್ಕಾರಿ ನೌಕರರಿಗೆ ಕೆಲಸದ ಅವಧಿಯಲ್ಲಿ ವಿನಾಯಿತಿ ನೀಡಲಾಗಿದೆ. ಅದರಂತೆ ಕರ್ನಾಟಕ ರಾಜ್ಯದಲ್ಲೂ ಕೂಡ ರಂಜಾನ್ ತಿಂಗಳಲ್ಲಿ ಮುಸ್ಲಿಂ ಬಾಂಧವರಿಗೆ ಉಪವಾಸ ಬಿಡಲು ಸಂಜೆ 4:00 ಮೇಲೆ ಅವರುಗಳ ನಿವಾಸಗಳಲ್ಲಿ ಉಪವಾಸ ಬಿಡಲು ಅನುಮತಿ ನೀಡಬೇಕೆಂದು ಪತ್ರದಲ್ಲಿ ಬರೆಯಲಾಗಿದೆ.
