ಶಹಾಪುರ: ಬಹುದಿನಗಳ ಬೆಡಿಕೆಯಾಗಿದ್ದ ನಗರದ ಹಳೆ ಬಸ್ ನಿಲ್ದಾಣದ ಅವರಣದಲ್ಲಿ ಡಾ.ಬಿ,ಆರ್ ಅಂಬೇಡ್ಕರವರ ಪ್ರತಿಮೆ ಸ್ಥಾಪನೆ ಕುರಿತು ರಾಜ್ಯ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಿದ್ದು, ರಾಜ್ಯ ಸಚಿವ ಸಂಪುಟದ ಮಂತ್ರಿಗಳು, ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು, ಸಣ್ಣ ಕೈಗಾರಿಕಾ ಸಾರ್ವಜನಿಕ ಉಧ್ಯಮಗಳ ಮಂತ್ರಿಗಳಾದ ಶರಣಬಸಪ್ಪಗೌಡ ದರ್ಶನಾಪುರವರ ಸತತ ಪ್ರಯತ್ನಗಳಿಂದ ಇಂದು ಸಂಪುಟದಲ್ಲಿ ಪ್ರತಿಮೆ ಸ್ಥಾಪನೆಗೆ ಒಪ್ಪಿಗೆ ನೀಡಲಾಯಿತು, ಸಚಿವರು ಅವಿರತ ಪರಿಶ್ರಮ ಮತ್ತು ದಲಿಪ ,ಪ್ರಗತಿಪರ , ಜನಪರ ,ಕನ್ನಡಪರ, ಸಾಮಾಜಿಕ ಸಾಮೂಹಿಕ ಸಂಘಟನೆಗಳ ಸಹಕಾರಗಳಿಂದ ಸಂವಿಧಾನ ಶಿಲ್ಪಿ ಡಾ, ಬಾಬಾ ಸಾಹೇಬ್ ಅಂಬೇಡ್ಕರವರ ಪ್ರತಿಮೆ ಸ್ಥಾಪನೆಗೆ ಕಾರಣವಾಗಿ ಹಳೆ ಬಸ್ ನಿಲ್ದಾಣದ ಅವರಣದ ಡಾ, ಬಾಬಾಸಾಹೇಬರ ಮೈದಾನದಲ್ಲಿ ಸರ್ವರು ಸಂಭ್ರಮಾಚರಣೆ ಮಾಡಿದರು. ಇದನ್ನೂ ಓದಿ: ಗುತ್ತಿಗೆದಾರರ ಹೇಳಿಕೆ ಖಂಡನೀಯ
ಈ ಸಂದರ್ಭದಲ್ಲಿ ಡಾ,ಶರಣು ಗದ್ದುಗೆ , ಸಣ್ಣ ನಿಂಗಣ್ಣ ನಾಯ್ಕೊಡಿ, ಗೌಡಪ್ಪಗೌಡ ಆಲ್ದಾಳ, ನೀಲಕಂಠ ಬಡಿಗೇರ, ಮಲ್ಲಿಕಾರ್ಜುನ ಪೂಜಾರಿ, ಶಾಂತಪ್ಪ ಗುತ್ತೆದಾರ, ಭೀಮಣ್ಣ ಶಖಾಪುರ, ಹೋನಪ್ಪ ಗಂಗನಾಳ್, ಗಿರೆಪ್ಪಗೌಡ ಬಾಣತಿಹಾಳ, ಚೆನ್ನಪ್ಪ ಆನೆಗುಂದಿ, ಅಂಬ್ರೇಶ ವಿಬೂತಿಹಳ್ಳಿ, ನಾಗಣ್ಣ ಬಡಿಗೇರ, ಭೀಮರಾಯ ಹೊಸಮನಿ, ಶಿವಪುತ್ರ ಜವಳಿ, ಡಾ.ರವಿಂದ್ರನಾಥ ಹೊಸಮನಿ, ಸುಭಾಶ ತಳವಾರ, ಅಪ್ಪಣ್ಣ ದಶವಂತ, ಮಾಪಣ್ಣ ಬಡಿಗೇರ, ಶಿವುಕುಮಾರ ತಳವಾರ, ಮರೆಪ್ಪ ಪ್ಯಾಟಿ, ವಿಜಯಕುಮಾರ ಎದರಮನಿ, ಶೇಖರ ದೊರಿ, ಸಿದ್ದಣ್ಣ ತನಕೆದರ್, ಶಂಕರ್ ಸಿಂಗೆ, ಚಂದಪ್ಪ ಸಿತ್ನಿ, ಬಸವರಾಜ ನಾಟೆಕಾರ್, ಭೀಮರಾಯ ಸೈದಾಪುರ, ಸುರೇಂದ್ರ ಕರಕಳ್ಳಿ, ಮೌನೇಶ್ ನಾಟೆಕಾರ್, ರಾಯಪ್ಪ ಚಲುವಾದಿ, ವೆಂಕಟೇಶ್ ಬೋನರ್, ಗುರು ದೊಡ್ಡಮನಿ ಸೇರಿದಂತೆ ದಲಿಪರ ಮುಖಂಡರು, ಸಾಮಾಜಿಕ ಹೋರಾಟಗಾರರು, ಕನ್ನಡಪರ ಹೋರಾಟಗಾರರು, ಪ್ರಗತಿಪರ ಚಿಂತಕರು ಸಿಹಿ ಹಂಚಿ ಹರ್ಷ ವ್ಯಕ್ತಪಡಿಸಿದರು.
