Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ನೀರಿನ ಮಹತ್ವ ಕುರಿತು ಜಾಗೃತಿ ಕಾರ್ಯಕ್ರಮ
  • Bangalore

ನೀರಿನ ಮಹತ್ವ ಕುರಿತು ಜಾಗೃತಿ ಕಾರ್ಯಕ್ರಮ

admin January 31, 2025 1 minute read
Spread the love

ರಾಮನನಗರ: ತಾಲ್ಲೂಕಿನ ದೊಡ್ಡಗಂಗವಾಡಿಯಲ್ಲಿ ಜಿಲ್ಲಾ ಪಂಚಾಯಿತಿ ರಾಮನಗರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಮಾಹಿತಿ, ಶಿಕ್ಷಣ ಮತ್ತು ಸಂವಾಹನ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಕಾರ್ಯಕ್ರಮಗಳೊಂದಿಗೆ ದೊಡ್ಡದಂಗವಾಡಿ ಗ್ರಾಮದ ಆಂಜನೇಯ ದೇವಸ್ಥಾನದ ಆವರಣದಲ್ಲಿ ಕುಡಿಯುವ ನೀರಿನ ಮಹತ್ವ ಕುರಿತು  ಬೀದಿ ನಾಟಕ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಮನಗರ ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಡಿ ಎಮ್ ಮಹದೇವಯ್ಯ ಮಾತನಾಡಿ, ಪ್ರಕೃತಿಯಲ್ಲಿ ಮನುಷ್ಯ ಹಾಗೂ ಯಾವುದೇ ಜೀವರಾಶಿ ಬದುಕಬೇಕಾದರೆ ನೀರು ಅತ್ಯಮೂಲ್ಯವಾದದ್ದು, ಮತ್ತು ಮೂವತ್ತು ನಲವತ್ತು ವರ್ಷಗಳ ಹಿಂದೆ ಕೆರೆ, ಕಟ್ಟೆ, ತೊರೆ, ಗಳಲ್ಲಿ ನೀರು ಯಥೇಚ್ಛವಾಗಿ ಇರುತ್ತಿತ್ತು. ಅಂತರ್ಜಲ ತುಂಬಿತುಳುಕುತ್ತಿತ್ತು ಮನುಷ್ಯನ ಸ್ವಾರ್ಥತೆಗಾಗಿ ಪ್ರಕೃತಿಯನ್ನು ಮಾನವ ವಿನಾಶ ಮಾಡಿ ಇಂದು ಸರಿಯಾದ ಮಳೆ ಇಲ್ಲದೆ ನೀರಿಗೆ ಅಹಾಕಾರ ಬಂದಿದೆ ಹೀಗೆ ಮುಂದುವರೆದರೆ ಮುಂದೊಂದು ದಿನ ಈಗ ಪೆಟ್ರೋಲ್ ಡೀಸೆಲ್ ಗಳಿಗೆ ಹಣ ನೀಡಿ ಪಡೆದುಕೊಂಡಂತೆ ನಾವು ಕುಡಿಯುವ ನೀರಿಗೂ ಕೂಡ ಅದೇ ರೀತಿ ಬೆಲೆತೆತ್ತಬೇಕಾಗುತ್ತದೆ ಎಂದು ವಿಷಾದ ವ್ಯಕ್ತಪಡಿಸುವುದರ ಜೊತೆಗೆ ನಮ್ಮ ದೊಡ್ಡಗಂಗವಾಡಿ ಗ್ರಾಮ ಪಂಚಾಯಿತಿಯಲ್ಲಿ ಪ್ರಸ್ತುತ ಸಮಯದಲ್ಲಿ ನೀರಿನ ಸಮತೋಲನವನ್ನು ಕಾಪಾಡಿಕೊಂಡು ಜನಸಾಮಾನ್ಯರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನಿಭಾಯಿಸಿಕೊಂಡು ಹೋಗುವುದರಲ್ಲಿ ನಮ್ಮ ಗ್ರಾಮ ಪಂಚಾಯಿತಿ ಯಶಸ್ವಿಯಾಗಿದೆ ಎಂದು ನುಡಿದರು. ಇದನ್ನೂ ಓದಿ: ನೂತನ ಬಿಜೆಪಿ ಜಿಲ್ಲಾಧ್ಯಕ್ಷರ ಹೇಳಿಕೆ ಹಾಸ್ಯಾಸ್ಪದ

ದೊಡ್ಡಗಂಗವಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ಕೆ ರಾಜಕುಮಾರ್ ಮಾತನಾಡಿ, ನಾವು ಮತ್ತು ನಮ್ಮ ಪೂರ್ವಿಕರು ಹಿಂದಿನ ದಿನಗಳಲ್ಲಿ ಕುಡುಯುತ್ತಿದ್ದ ನೀರಿನಲ್ಲಿ ಮನುಷ್ಯನ ಆರೋಗ್ಯಕ್ಕೆ ಬೇಕಾದಂತಹ ಎಲ್ಲಾ ಆರೋಗ್ಯಪೂರಕ ಅಂಶಗಳು ಇದ್ದವು,  ಆಗ ನೀರನ್ನು ಬಹುಶಹ ಶುದ್ಧೀಕರಣ ಮಾಡುತ್ತಿರಲಿಲ್ಲ ಸುಮಾರು 20- 30 ಅಡಿಗಳಿಂದ 100 ಅಡಿಗಳಲ್ಲಿ ಭೂಮಿಯಲ್ಲಿ ನೀರು ಸಿಗುತ್ತಿತ್ತು. ಕುಡಿಯುವ ನೀರಿನ ಬಾವಿಗಳು ಹಳ್ಳಿ ಹಳ್ಳಿಗಳ ಮನೆ ಮುಂದೆ, ಕೆರೆ ಕಟ್ಟೆಗಳಲ್ಲಿ ಇದ್ದವು, ಆ ನೀರನ್ನು ಕುಡಿಯುತ್ತಿದ್ದ ನಮ್ಮ ಪೂರ್ವಿಕರು ಯಾವುದೇ ಮಂಡಿ ನೋವು ಕೀಲು ನೋವು ಇಲ್ಲದೆ ಆರೋಗ್ಯವಾಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಮನುಷ್ಯನ ದುರಾಸೆಯಿಂದ ನಿಸರ್ಗವನ್ನು ಹಾಳು ಮಾಡಿದಂತೆ ಪ್ರಕೃತಿಯು ನಮ್ಮನ್ನು ಆಹುತಿ ಪಡೆಯುತ್ತಿದೆ. ಮನುಷ್ಯನಿಂದ ಅರಣ್ಯ, ಮರ, ಗಿಡ, ಬಳ್ಳಿ ನಾಶವಾದಂತೆ ಅಂತರ್ಜಲ ಬತ್ತಿ ಇಂದು ನೀರಿನ ಮಟ್ಟ ಪಾತಾಳಕ್ಕೆ ಸೇರಿದೆ, ಅದರಿಂದ ಪಡೆಯುತ್ತಿರುವ ನೀರು ಕಲುಷಿತಭರಿತವಾಗಿದ್ದು ಅದನ್ನು ಉಪಯೋಗಿಸುವ ಮಾನವ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾನೆ ಎಂದು ತಿಳಿಸಿದರು.

ಪ್ರಕೃತಿ ಮಹಿಳಾ ಸಾಂಸ್ಕೃತಿಕ ಕಲಾತಂಡ ಹರಿಹರ ಚೇತನ್ ಮತ್ತು ಸಂಗಡಿಗರಿಂದ ನೀರಿನ ಬಗ್ಗೆ ಜಾಗೃತಿ ಗೀತೆಗಳು ಹಾಗೂ ನೀರಿನ ಮಹಿಮೆ ಕುರಿತು ಬೀದಿ ನಾಟಕವನ್ನು ಕಲಾವಿದರಾದ ಚೇತನ್, ಶ್ರೀನಿವಾಸ್, ಕಾವೇರಿ, ವೆಂಕಟೇಶ್, ಜಾಕೀರ್, ಯಶವಂತ್ ಇವರುಗಳಿಂದ ಪ್ರದರ್ಶನ ನೀಡಿ ಗ್ರಾಮಸ್ಥರಿಗೆ ಜಾಗೈತಿ ಮೂಡಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡರಾದ ಮರಿಚನ್ನಯ್ಯ, ಚನ್ನವೀರಯ್ಯ, ಸೋಮಣ್ಣ, ಶಾಸ್ತ್ರಿ ಬಸವಲಿಂಗಯ್ಯ, ಶಿವನಂಜಯ್ಯ, ಮೀಸೆ ರಾಜಣ್ಣ, ವೀರಪ್ಪ, ಚಿಕ್ಕವೀರಯ್ಯ, ರವಿ, ಯುವ ಮುಖಂಡ ಗೋಪಾಲ ಗಂಗವಾಡಿ, ರಘು, ಮೃತ್ಯುಂಜಯ, ಸುರೇಶ್, ಪಂಚಾಯಿತಿ ಸಿಬ್ಬಂದಿ ಲೋಕೇಶ್ ಹಾಗೂ ಗ್ರಾಮಸ್ಥರು ಇದ್ದರು.

About the Author

admin

Administrator

Visit Website View All Posts

Spread the love

Post navigation

Previous: ನೂತನ ಬಿಜೆಪಿ ಜಿಲ್ಲಾಧ್ಯಕ್ಷರ ಹೇಳಿಕೆ ಹಾಸ್ಯಾಸ್ಪದ
Next: ನೂತನ ಬಿಜೆಪಿ ಜಿಲ್ಲಾಧ್ಯಕ್ಷ ವಿಭೂತಿಹಳ್ಳಿ ಕ್ಷಮೆಕೊರಬೇಕು

Views:

80

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.