ಶಹಾಪುರ: ಮೂರು ಬಾರಿ ಸಚಿವರಾಗಿ ಐದು ಭಾರಿ ಶಾಸಕರಾಗಿ ಕಾರ್ಯನಿರ್ವಹಿಸಿದ ಸಚಿವ ಶರಣಬಸಪ್ಪಗೌಡ ದರ್ಶನಾಪುರರ ವಿರುದ್ಧ ಬಸವರಾಜ ವಿಭೂತಿಹಳ್ಳಿ ಅವರು ಆರೋಪ ಮಾಡಿರುವುದು ನೋಡಿದರೆ ಅವರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ ದೊರೆತಿರುವುದು ಸಿಗಲಾರದ ಅಧಿಕಾರ ಸಿಕ್ಕಂತಾಗಿದೆ ಎಂದು ಬಿಜೆಪಿ ನೂತನ ಅಧ್ಯಕ್ಷ ಬಸವರಾಜಪ್ಪ ವಿಭೂತಿಹಳ್ಳಿ ಅವರ ಹೇಳಿಕೆಗೆ ಕಾಂಗ್ರೆಸ್ ಜಿಲ್ಲಾ ವಕ್ತರರಾದ ಮಲ್ಲಣ್ಣ ಉಳ್ಳಂಡಗೇರ ತಿರುಗೇಟು ನೀಡಿದ್ದಾರೆ.
ಈ ಕುರಿತು ನಗರದ ಸಚಿವರ ಕಾರ್ಯಲಯದಲ್ಲಿ (ಗುರುವಾರ ಜ.30) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡಿರುವ ಬಸವರಾಜಪ್ಪ ವಿಭೂತಿಹಳ್ಳಿ ಅವರು ಸಚಿವ ದರ್ಶನಾಪುರ ಶಹಾಪುರಗೆ ಸೀಮಿತ ಎಂಬ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು ತಾಲೂಕಿಗಷ್ಟೇ ಅಲ್ಲ ಇಡೀ ರಾಜ್ಯಕ್ಕೆ ಮಾದರಿಯ ರಾಜಕೀಯ ನಾಯಕರಾಗಿದ್ದು, ಸದಾಕಾಲಮುಖಿಯಾಗಿ ದುಡಿದು ರಾಜಕೀಯವಾಗಿ ಪ್ರಬಲವಾಗಿ ಬೆಳೆದಿದ್ದು ಅವರ ಸಾಧನೆಗೆ ಸಾಕ್ಷಿಯಾಗಿದೆ. ಆದರೆ ಬಸವರಾಜಪ್ಪ ವಿಭೂತಿಹಳ್ಳಿ ಅವರಿಗೆ ಮುಪ್ಪಿನಾವಸ್ಥೆಗೆ ಬಿಜೆಪಿಯ ಜಿಲ್ಲಾ ಅಧ್ಯಕ್ಷ ಆಗಿರುವುದೇ ಬಹು ದೊಡ್ಡ ಸಾಧನೆ ಅಂದುಕೊಂಡಿದ್ದಾರೆ. ಸಚಿವ ದರ್ಶನಾಪುರರು ಶಹಾಪುರ-ಯಾದಗಿರಿಗೆ ಮಾತ್ರ ಸಚಿವ ಸ್ಥಾನ ಸೀಮಿತ ಎಂದಿರುವುದು ಹಾಸ್ಯಸ್ಪದವಾಗಿದೆ.
ದರ್ಶನಾಪುರ ಸಾಹೇಬರ ಹಲವಾರು ಸಾಧನೆಗಳ ಸಾಕ್ಷಿಗೆ ಸಚಿವ ಸ್ಥಾನ ಸಿಕ್ಕಿದೆ. ಅವರ ಸಾಧನೆಗಳೇ ಪ್ರಚಂಡ ಗೆಲುವಿನ ಮೆಟ್ಟಿಲುಗಳಾಗಿವೆ. ಯಾದಗಿರಿಯ ಜಿಲ್ಲಾಧ್ಯಕ್ಷರಾಗಿ ವರ್ಷ ಕಳೆದಿರುವುದಿಲ್ಲ ಮತ್ತೊಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಿರುವದು ಬಿಜೆಪಿಯಲ್ಲಿ ಯಾವುದು ಸರಿ ಇಲ್ಲವೆಂಬುದು ಕಂಡು ಬರುತ್ತದೆ ಎಂದರು.
ಈ ಸಂದರ್ಭದಲ್ಲಿ ಮಾಹಾದೇವಪ್ಪ ಸಾಲಿಮನಿ, ಅಲ್ಲಾ ಪಟೇಲ್ ಮಕ್ತಾಪುರ, ಮೌನೇಶ ನಾಟೇಕರ್, ಶಾಂತಕುಮಾರ ಪಾಟೀಲ, ಭೀಮರಾಯ ಜುನ್ನ ಸೇರಿದಂತೆ ಇತರರು ಇದ್ದರು.
