ಬೀದರ್: ಗಣರಾಜ್ಯೋತ್ಸವ ಹಾಗೂ 75 ವರ್ಷದ ಸಂವಿಧಾನ ಸಮರ್ಪಣಾ ನಿಮಿತ್ಯ ಅಂಗವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೀದರ ಘಟಕ ವತಿಯಿಂದ ನಗರದ ನೆಹರೂ ಸ್ಟೇಡಿಯಂ ಇಂದ ಬೃಹತ್ ತಿರಂಗಾ ರ್ಯಾಲಿಗೆ ತರುಣ ನಾಗರಮಪಳ್ಳಿ ಯುವ ಮುಖಂಡರು ಹಾಗೂ ಎಬಿವಿಪಿಯ ರಾಜ್ಯ ಸಹ ಕಾರ್ಯದರ್ಶಿಗಳಾದ ಹನುಮಂತ ಬಗಲಿ, ಶ್ರೀಕಾಂತ ಮೋದಿ ಚಾಲನೆ ನೀಡಿದರು.
ಪ್ರಾಸ್ತಾವಿಕ ನುಡಿಯನ್ನು ಸಂತೋಷಕುಮಾರ ಹಂಗರಗಿ ಜಿಲ್ಲಾ ಪ್ರಮುಖರು ಮಾತನಾಡಿ, ವಿದ್ಯಾರ್ಥಿ ಷರಿಷತ್ ಅಲ್ಲಿ ಈ ರೀತಿಯ ಆಂದೋಲನಾತ್ಮಕ ಕಾರ್ಯಕ್ರಮ ರೂಪಿಸುವುದು, ಭಾರತೀಯ ಪ್ರತಿಯೊಬ್ಬ ನಾಗರಿಕ ಸಂವಿಧಾನ ಓದುವ ರೀತಿ ಆಗಬೇಕು, ನಾಗರಿಕ ಶಿಷ್ಟಾಚಾರ ಪಾಲನೆ ಮಾಡುಬೇಕು ಎಂದು ಹೇಳಿದರು. ಇದನ್ನೂ ಓದಿ: ಬಿಬಿಕೆ 11ರ ಟ್ರೋಫಿ ಗೆದ್ದಿರುವ ಹನುಮಂತನಿಗೆ ಕೂಡಿಬಂತಾ ಕಂಕಣ ಭಾಗ್ಯ?
ತಿರಂಗಾ ಜಾಥವನ್ನು ಉದ್ದೇಶಿಸಿ ಎಬಿವಿಪಿಯ ರಾಜ್ಯ ಸಹ ಕಾರ್ಯದರ್ಶಿಗಳಾದ ಹನುಮಂತ ಬಗಲಿ ಮಾತನಾಡಿ, ವಿಶ್ವದ ಎಲ್ಲಾ ರಾಷ್ಟ್ರಗಳಿಗಿಂತ ಭಿನ್ನವಾದ ಹಾಗೂ ಬೃಹತ್ ಸಂವಿಧಾನವನ್ನು ದೇಶದಲ್ಲಿ ಜಾರಿಗೆ ತಂದ ದಿನ ಭಾರತದ ಸಂವಿಧಾನವನ್ನು 1949ರ ನವೆಂಬರ್ 26ಕ್ಕೆ ಅಂಗೀಕರಿಸಲಾಯಿತು. 1950ರ ಜನವರಿ 26ರಂದು ಸಂವಿಧಾನವನ್ನು ಜಾರಿಗೆ ತರಲಾಗಿದೆ ಸಂವಿಧಾನವನ್ನು ಅಂಗೀಕರಿಸಿದ ಹಾಗೂ ಭಾರತ ಗಣತಂತ್ರ ರಾಷ್ಟ್ರವಾಗಿ ಬದಲಾದ ಗೌರವಾರ್ಥ ಗಣರಾಜ್ಯೋತ್ಸವವನ್ನು. “ಸುವರ್ಣ ಭಾರತ ಪರಂಪರೆ ಮತ್ತು ಪ್ರಗತಿ” ಎನ್ನುವುದು 2025ನೇ ಸಾಲಿನ ಗಣರಾಜ್ಯೋತ್ಸವದ ಆಗಿದೆ. ದೇಶವೇ ಹೆಮ್ಮಪಡುವ ಹಾಗೂ ಸಂಭ್ರಮಿಸುವ ದಿನಗಳಲ್ಲಿ ಒಂದಾಗಿದೆ,ಈ ರೀತಿ ಕಾರ್ಯಕ್ರಮ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಸಂವಿಧಾನ ಜಾಗೃತಿ ಕಾರ್ಯಕ್ರಮ ಸಮಾಜದಲ್ಲಿ ಮಾಡುವುದು ಅವಶ್ಯಕತೆ ಇದೆ ಎಂದು ಹೇಳಿದ್ದರು.
ನಂತರ ನೆಹರೂ ಸ್ಟೇಡಿಯಿಂದ ಜಾಥವನ್ನು ಪ್ರಾರಂಭಿಸಿ, ಸರ್ಕಾರಿ ಆಸ್ಪತ್ರೆಯ ಮುಂಭಾಗದಿAದ ಅಂಬೇಡ್ಕರ ವೃತ್ತ, ಜಿಲ್ಲಾ ಅಧಿಕಾರಿಗಳ ಕಛೇರಿ,ಮೋಹನ ಮಾರುಕಟ್ಟೆ ,ಗದ್ದುಗೆ ಆಸ್ಪತ್ರೆಯಿಂದ ರಂಗ ಮಂದಿರ ರ್ಯಾಲಿ ತಲುಪಿತು.
ಈ ಸಂದರ್ಭದಲ್ಲಿ ಹಿರಿಯರು ಕಾರ್ಯಕರ್ತರು ನಗರ ಕಾರ್ಯದರ್ಶಿ ಆನಂದ, ಸಹ ಕಾರ್ಯದರ್ಶಿ ಪವನ್ ಕುಂಬಾರ, ನಾಗರಾಜ ಜಿಲ್ಲಾ ಸಂಚಾಲಕ ಶಶಿಕಾಂತ, ಜಿಲ್ಲಾ ಸಂಘಟನ ಕಾರ್ಯದರ್ಶಿಗಳಾದ ಹೇಮಂತ, ಜಿಲ್ಲಾ ವಿದ್ಯಾರ್ಥಿನಿ ಪ್ರಮುಖ ಪ್ರಾರ್ಥನ, ಮಮತ ವಂಸತ, ಮಮತ ಗಾಯವಾಡ, ಕಾವೇರಿ, ಅಶ್ವಿನಿ, ಸಹನ, ಪ್ರಜಾ ಸೋನಿಯಾ ,ಹಿರಿಯರಾದ, ಸ್ನೇಹ ಕಾಳಗಪೂರೆ ಇಂದ್ರಾಯಣಿ ಸಗರ,ದೀಪಕ ಹಿರೇಮಠ, ಲಿಂಗದೇವ ಗುತ್ತಿ, ಅಭಿಷೇಕ, ಲಕ್ಷ್ಮಿಕಾಂತ್, ಪೃಥ್ವಿರಾಜ ಕಾಲೇಜಿನ ಪ್ರಾಂಶುಪಾಲರು ಉಪನ್ಯಾಸಕರು ಹಾಗೂ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
