ಬೆಳಗಾವಿ: ಸರಿಗಮಪ ಮೂಲಕ ಕರ್ನಾಟಕದ ಮನೆ ಮಾತಾಗಿದ್ದ ಕುರಿ ಕಾಯುವ ಬೆಳಗಾವಿ ಜಿಲ್ಲೆಯ ಹಳ್ಳಿ ಹೈದ ಹನುಮಂತ ಕರ್ನಾಟಕದ ಎಲ್ಲ ಮನೆ ಮಂದಿಯ ಮನೆಗೆದ್ದಿದ್ದ. ಮತ್ತೆ ಖಾಸಗಿ ವಾಹಿನಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಕನ್ನಡ ಬಿಗ್ ಬಾಸ್ ಸೀಸನ್ 11ಕ್ಕೆ ವೈಲ್ಡ್ ಕಾರ್ಡ್ ಮೂಲಕ ಪ್ರವೇಶಿಸಿ ಟ್ರೋಫಿ ಗೆದ್ದಿದ್ದಾರೆ. ಇದನ್ನೂ ಓದಿ: ‘ಮ್ಯಾಕ್ಸ್’ ಸಿನಿಮಾ ರಿಲೀಸ್ ಬಗ್ಗೆ ಸುದೀಪ್ ಹೇಳಿದ್ದೇನು?
ಇನ್ನು ಟ್ರೋಫಿ ಗೆದ್ದ ಖುಷಿಯಲ್ಲಿರುವ ಹನುಮಂತು ತಮ್ಮ ಅಭಿಮಾನಿಗಳಿಗೆ ಇದೀಗ ಸಿಹಿಸುದ್ದಿಯನ್ನು ನೀಡಿದ್ದಾರೆ.
ಹೌದು, ಬಿಗ್ ಬಾಸ್ ಟೋಪಿಯನ್ನು ಗೆದ್ದು ತಮ್ಮ ಹಳ್ಳಿಗೆ ಹೋಗಿರುವ ಹನುಮಂತನಿಗೆ ಅದ್ದೂರಿ ಸ್ವಾಗತ ಸಿಕ್ಕಿದೆ. ಇನ್ನು ಹನುಮಂತುಗೆ ಮುಂದಿನ ಮೂರ್ನಾಲ್ಕು ತಿಂಗಳಿನಲ್ಲಿ ಮದುವೆ ಆಗಲಿದೆ ಎಂದು ಹನುಮಂತ ಅವರ ಗ್ರಾಮಸ್ಥರು ತಿಳಿಸಿದ್ದಾರೆ.
ಹಾಗಾದ್ರೆ ಹನುಮಂತನ ಕೈಹಿಡಿಯುವ ಹುಡುಗಿ ಯಾರು ಅವರ ಮದುವೆಯ ಯಾವಾಗ ಎಂಬುದು ಸದ್ಯದಲ್ಲೇ ಗೊತ್ತಾಗಲಿದೆ.
