Skip to content
November 23, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಕನ್ನಡ ಉಳಿವಿಗೆ ಕನ್ನಡ ಪರ ಸಂಘಟನೆಗಳ ಪಾತ್ರ ಮಹತ್ತರ
  • State
  • ಶಹಾಪುರ

ಕನ್ನಡ ಉಳಿವಿಗೆ ಕನ್ನಡ ಪರ ಸಂಘಟನೆಗಳ ಪಾತ್ರ ಮಹತ್ತರ

Praja Vahini November 23, 2026 1 minute read
WhatsApp Image 2026-11-23 at 16.21.17
Spread the love

ಶಹಾಪುರ: ನಾಡಿನ ನೆಲ, ಜಲ, ಭಾಷೆ ಸಂಸ್ಕೃತಿಗೆ ದಕ್ಕೆಯಾದ ಸಂದರ್ಭದಲ್ಲಿ ಕನ್ನಡ ಪರ ಸಂಘಟನೆಗಳು ರಾಜಕೀಯ ಪಕ್ಷಗಳಿಗಿಂತ ಮೊದಲು ಬೀದಿಗಿಳಿದು ಹೋರಾಟ ಹಮ್ಮಿಕೊಳ್ಳುವ ಮೂಲಕ ನಿರಂತರ ಜನಜಾಗೃತಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

ನಗರದ ಹೊಟೇಲ್ ಆದರ್ಶದಲ್ಲಿ ಜೈ ಕನ್ನಡಿಗರ ರಕ್ಷಣಾ ಸಂಘ ತಾಲೂಕ ಘಟಕ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬೆಂಗಳೂರಿನಂತಹ ಭಾಗದಲ್ಲಿ ಕನ್ನಡ ಪರ ಸಂಘಟನೆಗಳು ಕನ್ನಡಿಗರ ರಕ್ಷಣೆಗಾಗಿ, ಕೈಗಾರಿಕೆ ಪ್ರದೇಶದಲ್ಲಿ ಕನ್ನಡಿಗರಿಗೆ ಉದ್ಯೋಗಕ್ಕಾಗಿ, ಕನ್ನಡಿಗರ ಸ್ವಾಭಿಮಾನಕ್ಕಾಗಿ ಮನೆಯನ್ನು ಬಿಟ್ಟು ಸಮಾಜಮುಖಿ ಕಾರ್ಯಕ್ಕೆ ನಿಸ್ವಾರ್ಥಕ್ಕಾಗಿ ಸೇವೆ ಸಲ್ಲಿಸುತ್ತಿರುವ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯವಾದದ್ದು. ನಾಡಿನ ವಿವಿಧ ಕನ್ನಡಪರ ಸಂಘಟನೆಗಳು ಮುಂಚೂಣಿಲ್ಲಿ ನಿಂತು ಬೀದಿಗಿಳಿದು ಹೋರಾಟ ಹಮ್ಮಿಕೊಳ್ಳುವ ಮೂಲಕ ಜನಜಾಗೃತಿ ರೂಪಿಸುತ್ತಿದೆ ಎಂದು ಕನ್ನಡಪರ ಸಂಘಟನೆಗಳ ಪರವಾಗಿ ಹೆಮ್ಮೆ ವ್ಯಕ್ತಪಡಿಸಿದರು.

ಸಂಸ್ಥಾಪಕ ರಾಜ್ಯಾಧ್ಯಕ್ಷ ಮಹಾದೇವಯ್ಯಸ್ವಾಮಿ ಹಿರೇಮಠ(ಚುಂಗಿ) ಕಾರ್ಯಕ್ರಮ ಅಧ್ಯಕ್ಷತೆ ವಹಿಸಿಕೊಂಡಿದ್ದರು. ವಿಭಾಗ ಅಧ್ಯಕ್ಷ ಸಂತೋಷ ಪತ್ತಾರ ಪ್ರಾಸ್ತವಿಕವಾಗಿ ಮಾತನಾಡಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಮೂರು ಸಾವಿರಕ್ಕೂ ಹೆಚ್ಚು ನಿವೇಶನಗಳ ಭರವಸೆ

ಸರ್ಕಾರವು ಪ್ರತಿ ಮತಕ್ಷೇತ್ರದಲ್ಲಿ ಸುಮಾರು 50 ಸಾವಿರ ನಿವೇಶನ ನೀಡಲು ಮುಖ್ಯಮಂತ್ರಿಗಳು ಆದೇಶ ಹೊರಡಿಸಿದ್ದು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸರ್ಕಾರದ ಜಾಗವನ್ನು ವಶಕ್ಕೆ ತೆಗೆದುಕೊಂಡು ಅವುಗಳನ್ನು ಬಡವರಿಗೆ ಹಂಚಿಕೆ ಮಾಡಲಾಗುವುದು.  ಅದರಂತೆ ನಗರದಲ್ಲಿ ನಿವೇಶನ ರಹಿತರಿಗೆ ಕನಿಷ್ಠ ೩ ಸಾವಿರಕ್ಕೂ ಹೆಚ್ಚು ಜನರಿಗೆ ಸ್ಥಳ ನೀಡುವ ಕೆಲಸ ಮಾಡಲಾಗುವುದು. ನಗರದ ಹಳಿಸಗರ ರೈಲ್ವೆ ಜಾಗದ ಹತ್ತಿರ ೧೩ ಎಕರೆ ಮಂಜೂರಿಯಾಗಿದೆ. ರೇಷ್ಮೇ ಇಲಾಖೆಯಲ್ಲಿ 50 ಎಕರೆ ಸ್ಥಳ ಕೇಳಲಾಗಿದೆ, ಹಳಿಸಗರದಲ್ಲಿ 16 ಎಕರೆ ಜಾಗ ಲಭ್ಯತೆ ನೋಡಿ ನಗರದ ಬಡವರಿಗೆ ೩ ಸಾವಿರ ಕ್ಕೂ ಹೆಚ್ಚು ಜಾಗ(ನಿವೇಶನ) ನೀಡಲಾಗುವುದು. ನಗರ ಅಷ್ಟೇ ಅಲ್ಲದೇ ಗ್ರಾಮೀಣ ಭಾಗದಲ್ಲಿ ಸಹ ಸ್ಥಳದ ಲಭ್ಯತೆ ನೋಡಿ ಬಡವರಿಗೆ ಮನೆಗಾಗಿ ಸ್ಥಳದ ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕರು ತಿಳಿಸಿದರು.

ಮನಸ್ಸಿಗೆ ನೋವುಂಟು ಮಾಡಿದ ರೈತರ ಹೋರಾಟ

ವರುಣ ದೇವ ರೈತರ ಮೇಲೆ ಮುನಿಸಿಕೊಂಡಿದ್ದಾನೆ. ಪ್ರಸ್ತುತ ಬರಗಾಲದಿಂದಾಗಿ ಬೆಳೆಯಿಲ್ಲದೆ ರೈತರು ಕಂಗಾಲಾಗಿದ್ದಾರೆ, ಜನತೆ ಅನಿವಾರ್ಯದ ಪರಿಸ್ಥೀತಿಯಲ್ಲಿ ಕಾಲ ಕಳೆಯುವಂತಾಗಿದೆ, ಬೆಳೆ ಉಳಿಸಿಕೊಳ್ಳಲು ಕಾಲುವೆಗೆ ನೀರು ಹರಿಸುವಂತೆ ೧೫ ದಿನಗಳ ಕಾಲ ನಿರಂತರ ರೈತರು ನೀರಿಗಾಗಿ ರಸ್ತೆಗಿಳಿದು ಹೋರಾಟ ಮಾಡಿದ್ದು, ವಯಕ್ತಿಕವಾಗಿ ನನ್ನ ಮನಸ್ಸಿಗೆ ನೋವುಂಟು ಮಾಡಿದೆ ಆದ್ದರಿಂದ ರೈತರ ಹಿತಕ್ಕಾಗಿ ಬಿಟ್ಟು ಬಿಡದೇ ಸರ್ಕಾರದ ಮೇಲೆ ಒತ್ತಡ ಹಾಕಿ ಅಲ್ಪಸ್ವಲ್ಪ ನೀರಿನ ವ್ಯವಸ್ಥೆ ಮಾಡಿದ್ದೇನೆ ಆದರೆ ಅದು ಸಾಕಾಗಲ್ಲಾ, ದೇವರು ಬಡವರ ಮೇಲೆ ಮುನಿಸಿಕೊಂಡಿದ್ದು ಮಳೆ ಬಂದಿದ್ದರೆ ಇಷ್ಠೇಲ್ಲಾ ತೊಂದರೆ ಆಗುತ್ತಿರಲಿಲ್ಲಾ ಎಂದು ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

ಈ ಸಂದರ್ಭದಲ್ಲಿ ಹಿರಿಯ ಮುಖಂಡ ಬಸವರಾಜ ಹಿರೇಮಠ, ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಬಿ ಗದ್ದುಗೆ, ಜಂಗಮ ಸಮಾಜದ ತಾಲೂಕ ಅಧ್ಯಕ್ಷ ಮಹಾದೇವಯ್ಯಸ್ವಾಮಿ, ಜಿಲ್ಲಾಧ್ಯಕ್ಷೆ ಶಿವಲೀಲಾ ಸಿಂಪಿ, ನಮ್ಮ ಕರ್ನಾಟಕ ಸೇನೆ ರಾಜ್ಯ ಪ್ರಧಾನ ಸಂಚಾಲಕ ಭೀಮಣ್ಣ ಶಖಾಪುರ, ಮೌನೇಶ ಹಳಿಸಗರ, ಸುನೀತಾ ದೊಡ್ಡಮನಿ, ಲಿಲಾವತಿ ಹಳಿಸಗರ, ಗಂಗುಬಾಯಿ ಗುರುಲಿಂಗಯ್ಯಮಠ, ಶಶಿಕಲಾ ಹಳಿಸಗರ, ರೇವಣಸಿದ್ದ ಡೆಂಗಿಮಠ, ಮಹ್ಮದ್ ಗೌಸ್, ಯಲ್ಲಪ್ಪ ಹಳಿಕಟ್ಟಿ, ಮರೆಮ್ಮ ದೇವಿನಗರ, ರಾಜೇಶ್ವರಿ ಅಂಬಾಜಿ ಸೇರಿದಂತೆ ಸಂಘಟನಾ ಪದಾಧಿಕಾರಿಗಳು, ಕನ್ನಡಾಭಿಮಾನಿಗಳು ಇದ್ದರು.

 

About the Author

Praja Vahini

Editor

View All Posts

Spread the love

Post navigation

Previous: ಜಪಾನ್ ಪ್ರವಾಸ ಮುಗಿಸಿ ಬಂದ ಮೇಲಾದರೂ ಆಶಾ ಕಾರ್ಯಕರ್ತೆಯರ ಸಮಸ್ಯೆ ಆಲಿಸಿ: ಹೆಚ್ ಡಿ ಕೆ

Views:

5

You may have missed

WhatsApp Image 2026-11-23 at 16.21.17
  • State
  • ಶಹಾಪುರ

ಕನ್ನಡ ಉಳಿವಿಗೆ ಕನ್ನಡ ಪರ ಸಂಘಟನೆಗಳ ಪಾತ್ರ ಮಹತ್ತರ

Praja Vahini November 23, 2026
IMG_3245
  • Bangalore
  • Front news
  • Politics
  • State

ಜಪಾನ್ ಪ್ರವಾಸ ಮುಗಿಸಿ ಬಂದ ಮೇಲಾದರೂ ಆಶಾ ಕಾರ್ಯಕರ್ತೆಯರ ಸಮಸ್ಯೆ ಆಲಿಸಿ: ಹೆಚ್ ಡಿ ಕೆ

Praja Vahini November 23, 2026
IMG_3244
  • Front news
  • National
  • Politics

ಭಾರತ-ನೇಪಾಳ ಬಾಂಧವ್ಯಕ್ಕೆ ಹೊಸ ಬಲ

Praja Vahini November 23, 2026
ac557116-51d0-4a29-a977-07dbdddb702a
  • Bangalore
  • Front news
  • Politics
  • State

ಸಿಎಂ ಜಪಾನ್ ಪ್ರವಾಸ, ಅಧಿಕಾರಿಗಳ ಮೋಜುಮಸ್ತಿ ವಿರುದ್ಧ ವಿಜಯೇಂದ್ರ ವಾಗ್ದಾಳಿ

Praja Vahini November 23, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.