Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ದಿ.ಬಾಪುಗೌಡರ 38 ನೇ ಪುಣ್ಯಸ್ಮರಣೆ
  • Politics
  • State
  • ಶಹಾಪುರ

ದಿ.ಬಾಪುಗೌಡರ 38 ನೇ ಪುಣ್ಯಸ್ಮರಣೆ

Praja Vahini November 15, 2026 1 minute read
Screenshot_2026-11-15-19-01-36-99_6012fa4d4ddec268fc5c7112cbb265e7
Spread the love

ದರ್ಶನಾಪುರ ಮನೆತನದ ರಾಜಕೀಯ ಸೇವೆ ಮತ್ತು ಕೊಡುಗೆ ನಾಡಿಗೆ ಮಾದರಿ

ಶಹಾಪುರ: ದರ್ಶನಾಪುರ ಮನೆತನದ ರಾಜಕೀಯ ಸೇವೆ ಮತ್ತು ಕೊಡುಗೆ ನಾಡಿಗೆ ಮಾದರಿಯಾಗಿದೆ, ಪ್ರಸ್ತುತ ದಿನಮಾನಗಳಲ್ಲಿ ಅನ್ನದಾತರು ನೀರಿಗಾಗಿ ಯುದ್ಧ ಮಾಡುವ ಪರಿಸ್ಥೀತಿ ಬಂದಿದೆ. ಆದರೆ ಈ ಭಾಗದ ಜನರ ಕಲ್ಯಾಣಕ್ಕೆ ಅಂದು ನೀರುಕೊಟ್ಟ ಪುಣ್ಯತ್ಮನನ್ನು ಇಂದಿಗೂ ಜನ ಸ್ಮರಿಸುತ್ತಾರೆ, ಕೃಷಿ, ಕೈಗಾರಿಗೆ, ನೀರಾವರಿ, ಮುಂತಾದ ಕ್ಷೇತ್ರಗಳನ್ನು ಅಭಿವೃದ್ಧಿಗೊಳಿಸಲು ಅವಿರತ ಶ್ರಮಿಸಿರುವ ದಿ.ಬಾಪುಗೌಡ ದರ್ಶನಾಪುರ ಅವರು ಇಂದಿಗೂ ಜನಮಾನಸದಲ್ಲಿ ನೆಲೆಸಿದ್ದಾರೆ ಎಂದು ಹಿರಿಯ ರೈತ ಮುಖಂಡ ಕೇದಾರಲಿಂಗಯ್ಯ ಹಿರೇಮಠ ಹೇಳಿದರು.

ದಿ.ಬಾಪುಗೌಡ ದರ್ಶನಾಪುರ ಅವರ ೩೮ನೇ ಪುಣ್ಯಸ್ಮರಣೆ ಕಾರ್ಯಕ್ರಮ ಶ್ರೀ ಚರಬಸವೇಶ್ವರ ಪ್ರೌಢಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಸಂದರ್ಭದಲ್ಲಿ ಪಾಲ್ಗೊಂಡು ಮಾತನಾಡಿ, ಕಲ್ಯಾಣ ಕರ್ನಾಟಕದ ಸಗರನಾಡಿನ ಕೃಷ್ಣೆ-ಭೀಮೆಯರ ಒಡಲಿನ ಹಸಿರು ಕಂಡಾಗಲೆಲ್ಲ ಈ ನೆಲದ ನೀರಾವರಿಗೆ ಶ್ರಮಿಸಿದ ಬಾಪುಗೌಡರು ನೆನಪಾಗುತ್ತಾರೆ. ಮತ್ತು ಅವರ ಸಹೋದರ ದಿ. ಬಸವರಾಜಪ್ಪಗೌಡ ದರ್ಶನಾಪುರ ಅವರು ಪ್ರಸ್ತುತ ನಮ್ಮೊಡನೆ ಇಲ್ಲ ಆದರೆ ತಮ್ಮ ಸರಳತೆಯಿಂದಲೇ ಹೆಸರುವಾಸಿಯಾಗಿದ್ದ ಅವರು ಈ ಭಾಗದ ಗುತ್ತಿಗೆದಾರರು ಬೆಳೆಯಲು ಅವರೇ ಕಾರಣರಾಗಿದ್ದಾರೆ.

ಜಿಲ್ಲೆಮಟ್ಟದಲ್ಲಿ ಇರದ ಅಭಿವೃದ್ಧಿ ನಮ್ಮ ತಾಲೂಕಿನಲ್ಲಿ ಆಗಿದೆ. ಆ ಕೆಲಸವನ್ನು ದರ್ಶನಾಪುರ ಮನೆತನದವರು ಅಧಿಕಾರದಲ್ಲಿದ್ದು ಮಾಡಿದ್ದಾರೆ. ಸಾಮಾಜಿಕವಾಗಿ ,ರಾಜಕೀಯವಾಗಿ ಸಾಹಿತ್ಯಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಕಲ್ಯಾಣ ಕರ್ನಾಟಕಕ್ಕೆ ಅನೇಕ ಕೊಡುಗೆಗಳನ್ನು ದಾಸೋಹಗೈದು ತನ್ನತನ ಮೆರೆದ ಮನೆತನ ಅವರದು. ದೂರದೃಷ್ಠಿ, ಮತ್ತು ಜನಪರ ಕಾಳಜಿಯಿಂದ ಎಲ್ಲ ವರ್ಗದವರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿ ಜನಸೇವೆ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದಡಿ ಇಡೀ ಕಲ್ಯಾಣ ಕರ್ನಾಟಕ ಭಾಗಕ್ಕೆ ದಿ.ಬಾಪುಗೌಡ ದರ್ಶನಾಪುರ ಅವರು ಪ್ರೇರಕ ಶಕ್ತಿಯಾಗಿದ್ದರು ಎಂದರು.

ಹಿರಿಯ ಮುಖಂಡ ಚಂದ್ರಶೇಖರ ಆರಭೋಳ ಮಾತನಾಡಿ, ದಿ.ಬಾಪುಗೌಡರು ದೀನ ದುರ್ಬಲರ, ಹಿಂದುಳಿದವರ ಬಗ್ಗೆ ಕಾಳಜಿ ಹೊಂದಿದ ನಾಯಕರಾಗಿದ್ದರು ಎಂಬುದಕ್ಕೆ ಅನೇಕರು ಉನ್ನತ ಸ್ಥಾನಕ್ಕೆ ತಲುಪಿರುವುದೇ ನಿದರ್ಶನವಾಗಿದೆ, ನೀರಾವರಿಗೆ ಅವರು ಕೊಟ್ಟ ಕೊಡುಗೆಯನ್ನು ಜನ ಎಂದೂ ಮರೆಯಲಾರರು. ಸಗರನಾಡಿಗೆ ಕೃಷ್ಣಭಾಗ್ಯ ಜಲ ನಿಗಮದ ಮೂಲಕ ನೀರನ್ನು ಹರಿಸಿ ಈ ಭಾಗವನ್ನು ಹಚ್ಚಹಸಿರಾಗಿಸಿದವರು ಈ ಭಾಗದ ಅಂದಿನ ಜನಪ್ರಿಯ ಸಚಿವರು ದಿ.ಬಾಪುಗೌಡರು. ಅಂಥವರ ಸುಪುತ್ರ ಶಾಸಕ ಶರಣಬಸ್ಸಪ್ಪಗೌಡ ದರ್ಶನಾಪುರ ಅವರೊಡನೆ ನಮ್ಮದು ಸುಮಾರು 20 ವರ್ಷಗಳಿಂದ ಒಡನಾಟವಿದೆ. ಕಲ್ಯಾಣ ಕರ್ನಾಟಕದಲ್ಲಿಯೇ ನಮ್ಮ ತಾಲೂಕಿಗೆ ತಂದಷ್ಟು ಅನುದಾನ ಬೇರೆ ಯಾವುದೇ ತಾಲೂಕಿಗೂ ಸಿಕ್ಕಿಲ್ಲ. ಅಂತಹ ಶಾಸಕರನ್ನು ಪಡೆದ ಕ್ಷೇತ್ರದ ಜನರು ಭಾಗ್ಯವಂತರು. ಪ್ರಸ್ತುತ ಅನೇಕ ಮಠ, ದೇವಸ್ಥಾನಕ್ಕೆ ಸಾಕಷ್ಟು ಅನುದಾನ ಒದಗಿಸಿದ್ದು, ಆ ದೇವರು ಮುಂದಿನ ಬಾರಿಗೆ ಅವರನ್ನು ಕೈಬಿಡುವುದಿಲ್ಲ ಎಂದರು.

ಹಿರಿಯ ಮುಖಂಡರಾದ ಘೇವರಚಂದ ಜೈನರವರು ಪ್ರಾಸ್ತಾವಿಕವಾಗಿ ಮಾತನಾಡಿದರು,

ಚರಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಪ್ರಾಥಮಿಕ ವಿಭಾಗದಿಂದ ಹಿಡಿದು ಪದವಿ ಕಾಲೇಜಿನ ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದಕ್ಕಾಗಿ ವಿಶೇಷವಾಗಿ ಸನ್ಮಾನಿಸಲಾಯಿತು.

ಅದಕ್ಕಿಂತ ಪೂರ್ವದಲ್ಲಿ ಭೀ.ಗುಡಿ ವೃತ್ತದಲ್ಲಿರುವ ದಿ.ಬಾಪುಗೌಡ ಪುತ್ಥಳಿಗೆ ದರ್ಶನಾಪುರ ಅಭಿಮಾನಿಗಳು, ಹಿತೈಷಿಗಳು ಕಾರ್ಯಕರ್ತರು ಗೌರವ ಸಮರ್ಪಣೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಶ್ರೀ ಚರಬಸವೇಶ್ವರ ಸಂಸ್ಥಾನ ಮಠದ ವೇ.ಮೂ.ಬಸವಯ್ಯ ಶರಣರು, ಪೂಜ್ಯ ಚೆನ್ನವೀರ ಶಿವಾಚಾರ್ಯ ಕೆಂಭಾವಿ, ಶರಣಪ್ಪ ಶರಣರು ನಗನೂರ, ಪೂಜ್ಯ ಮಾತೆಯರು.

ಶಾಸಕ ಶರಣಬಸ್ಸಪ್ಪಗೌಡ ದರ್ಶನಾಪುರ, ಯಾದಗಿರಿ ಶಾಸಕ ಚೆನ್ನರೆಡ್ಡಿ ಪಾಟೀಲ್ ತುನ್ನೂರ, ಸೋಮಶೇಖರ ಗೋನಾಯಕ್, ಶರಣಪ್ಪ ಸಲಾದಪುರ, ಮಲ್ಲಣ್ಣ ಸಾಹು ಮಡ್ಡಿ, ಕಾಡಾ ಅಧ್ಯಕ್ಷ ಬಾಬು ಹೊನ್ನನಾಯಕ, ಶಂಕ್ರಣ್ಣ ವಣಿಕ್ಯಾಳ, ಸುರೇಶ್ ಸಜ್ಜ, ಬಾಬುಗೌಡ, ಶ್ರೀನಿವಾಸರಾವ್ ಕುಲ್ಕರ್ಣಿ, ಶರಣು ಗದ್ದುಗೆ, ಸಿದ್ದರಾಮ ಹೊನ್ಕಲ್, ಬಸವರಾಜ ಹೊಸ್ಮನಿ, ಚೇತನ್ ಗೋನಾಯಕ, ಸಿದ್ದಲಿಂಗಣ್ಣ ಆನೇಗುಂದಿ, ಬಸವರಾಜ ಹಿರೇಮಠ, ಗುಂಡಪ್ಪ ತುಂಬಗಿ, ನೀಲಕಂಠ ಬಡಿಗೇರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವುಮಾಹಂತ ಚಂದಾಪುರ, ಬಸಣಗೌಡ ಯಾಳಗಿ, ಗೌಡಪ್ಪಗೌಡ ಆಲ್ದಾಳ, ಅಲ್ಲಾ ಪಟೇಲ್ ಮಕ್ತಾಪುರ, ಚಂದಪ್ಪ ಸಿತ್ನಿ, ಕಿಸಾನ್ ರಾಠೋಡ, ಶೇಖುಬಾಯಿ, ಅಯ್ಯಣ್ಣ ಕನ್ಯಾಕೊಳ್ಳುರ, ಸಣ್ಣನಿಂಗಣ್ಣ ನಾಯ್ಕೋಡಿ, ಬಸನಗೌಡ ಸುಬೇದಾರ, ಶಾಂತಪ್ಪ ಕಟ್ಟಿಮನಿ, ಸಿದ್ದಣ್ಣ ಟಣಕೇದಾರ, ಮಲ್ಲಣಗೌಡ ತಿಪ್ಪನಹಳ್ಳಿ, ಸಂಗಣ್ಣ ದೊಡ್ಮನಿ, ಸಿದ್ದು ಮುಂಡಾಸ ಸೇರಿದಂತೆ

ದಿ.ಬಾಪುಗೌಡರ ಅಭಿಮಾನಿಗಳು, ಕಾರ್ಯಕರ್ತರು ಹಿರಿಯ ಕಿರಿಯ ಮುಖಂಡರು, ಶ್ರೀ ಚರಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಪ್ರಧಾನ ಅಧ್ಯಾಪಕರು, ಬೋಧಕ ಬೋಧಕೇತರ ಸಿಬ್ಬಂಧಿ ವರ್ಗದವರು, ವಿದ್ಯಾರ್ಥಿಗಳು ಇದ್ದರು. ಶಿಕ್ಷಕ ಅರುಣಕುಮಾರ ಜೇವರ್ಗಿ ಕಾರ್ಯಕ್ರಮ ನಿರೂಪಿಸಿದರು, ಪ್ರಾಂಶುಪಾಲ ಶಿವಲಿಂಗಣ್ಣಗೌಡ ಸಾಹು ವಂದಿಸಿದರು, ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು.

About the Author

Praja Vahini

Editor

View All Posts

Spread the love

Post navigation

Previous: ಮಕ್ಕಳ ಹಬ್ಬಕ್ಕೆ ವಿಜ್ಞಾನದ ಮೆರುಗು; ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಜಾತ್ರೆಗೆ ಅದ್ಧೂರಿ ಚಾಲನೆ!
Next: ವಿಕಸಿತ ಭಾರತ 2047 ನಿರ್ಮಾಣಕ್ಕೆ ಯುವಜನರ ಮಹಾಸಂಕಲ್ಪ ಹೊಂದಬೇಕು: ಡಾ.ಸುಧಾ ಯಾದವ್ ಕರೆ

Views:

54

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.