Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಪ್ರಶಾಂತಿ ಕುಟೀರದ 50 ವರ್ಷಗಳ ಸೇವೆಗೆ ಪ್ರಧಾನಿ ಮೋದಿ ಮೆಚ್ಚುಗೆ
  • Bangalore
  • Front news
  • Politics
  • State

ಪ್ರಶಾಂತಿ ಕುಟೀರದ 50 ವರ್ಷಗಳ ಸೇವೆಗೆ ಪ್ರಧಾನಿ ಮೋದಿ ಮೆಚ್ಚುಗೆ

Praja Vahini November 13, 2026
IMG_2960
Spread the love

ಬೆಂಗಳೂರು: ಯೋಗವು ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಮಹತ್ವದ ಕೊಡುಗೆ ನೀಡುತ್ತದೆ. ಯೋಗದ ಮಹತ್ವವನ್ನು ಜಗತ್ತಿಗೆ ಸಾರುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಬೆಂಗಳೂರು ಹೊರವಲಯದ ಆನೇಕಲ್‌ನಲ್ಲಿರುವ ಪ್ರಶಾಂತಿ ಕುಟೀರದ ಸ್ವರ್ಣ ಮಹೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕವು ಪುರಾತನ ಕಾಲದಿಂದಲೂ ಯೋಗದ ಪ್ರಮುಖ ಕೇಂದ್ರವಾಗಿದೆ. ಯೋಗದ ಬಗ್ಗೆ ಪ್ರಾಯೋಗಿಕ ಮಾರ್ಗದರ್ಶನ ನೀಡುವ ಅನೇಕ ಆಚಾರ್ಯರಿಗೆ ಈ ನಾಡು ಜನ್ಮ ನೀಡಿದ್ದು, ಯೋಗ ಪರಂಪರೆಯನ್ನು ಶ್ರೀಮಂತಗೊಳಿಸಿದೆ ಎಂದರು.

ಕನ್ನಡದ ವರನಟ ಡಾ. ರಾಜ್‌ಕುಮಾರ್ ಅವರನ್ನೂ ಸ್ಮರಿಸಿದ ಪ್ರಧಾನಿ, ಅವರು ಯೋಗಾಭ್ಯಾಸದ ಮೂಲಕವೂ ಪ್ರಸಿದ್ಧರಾಗಿದ್ದರು ಎಂದು ಉಲ್ಲೇಖಿಸಿದರು.

ಕರ್ನಾಟಕವು ಸೇವೆ ಮತ್ತು ಸಮರ್ಪಣೆಯ ಮೂಲಕ ಮಾದರಿಯನ್ನು ನಿರ್ಮಿಸಿದ್ದು, ದೇಶದ ಪ್ರತಿಯೊಂದು ರಾಜ್ಯವೂ ಇದನ್ನು ಅನುಸರಿಸಬೇಕು ಎಂದು ಕರೆ ನೀಡಿದರು. ಒಂದು ಸಣ್ಣ ಯೋಗ ಕೇಂದ್ರವಾಗಿ ಆರಂಭವಾದ ಪ್ರಶಾಂತಿ ಕುಟೀರ ಇಂದು ಬೃಹತ್ ಸಂಸ್ಥೆಯಾಗಿ ಬೆಳೆದಿರುವುದು ಅದರ ಸಾಧನೆಗೆ ಸಾಕ್ಷಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಶಾಂತಿ ಕುಟೀರದೊಂದಿಗೆ ಸಂಬಂಧ ಹೊಂದಿರುವ ಲಕ್ಷಾಂತರ ಮಂದಿಗೆ ಸ್ವರ್ಣ ಮಹೋತ್ಸವದ ಶುಭಾಶಯಗಳನ್ನು ತಿಳಿಸಿದ ಪ್ರಧಾನಿ, ಇದೇ ಸಂದರ್ಭದಲ್ಲಿ ಹೂ ವೆ ಶೇಷಾದ್ರಿಯವರ ಜನ್ಮಶತಮಾನೋತ್ಸವವೂ ನಡೆಯುತ್ತಿರುವುದನ್ನು ಸ್ಮರಿಸಿದರು.

ಶೇಷಾದ್ರಿಯವರು ತಮ್ಮ ಇಡೀ ಜೀವನವನ್ನು ಸಮಾಜದ ಮುನ್ನಡೆಗಾಗಿ ಸಮರ್ಪಿಸಿಕೊಂಡಿದ್ದರು. ದೇಶದ ಪ್ರಗತಿಗೆ ಸಮರ್ಪಿತ, ಸಮರ್ಥ ಮತ್ತು ಶಿಸ್ತಿನ ನಾಗರಿಕರು ಅಗತ್ಯ ಎಂಬ ಸಂದೇಶವನ್ನು ಅವರು ಸಾರಿದ್ದರು ಎಂದು ಮೋದಿ ಹೇಳಿದರು.

ಬಹುದೊಡ್ಡ ವ್ಯಕ್ತಿತ್ವ ಹೊಂದಿದ್ದರೂ ಶೇಷಾದ್ರಿಯವರು ಅತ್ಯಂತ ವಿನಮ್ರರಾಗಿದ್ದರು. ತಾಯಿ ತನ್ನ ಮಗುವಿನ ಆರೈಕೆಗಾಗಿ ಇಡೀ ರಾತ್ರಿ ಜಾಗರಣೆ ಮಾಡುವಂತೆ ಪ್ರತಿಯೊಬ್ಬರೂ ಸಮಾಜದ ಬಗ್ಗೆ ಕಾಳಜಿ ಮತ್ತು ಅನುಕಂಪ ಹೊಂದಿರಬೇಕು ಎಂಬುದು ಅವರ ಆಶಯವಾಗಿತ್ತು. ಅವರೂ ಕೂಡ ತಾಯಿಯಂತೆ ಸಮಾಜವನ್ನು ಕಾಳಜಿಯಿಂದ ಸಲಹಿದ್ದರು ಎಂದು ಪ್ರಧಾನಿ ಸ್ಮರಿಸಿದರು.

ಶೇಷಾದ್ರಿಯವರ ಸ್ನೇಹ ಮತ್ತು ಮಾರ್ಗದರ್ಶನ ತಮಗೆ ದೊರೆತಿರುವುದು ಜೀವನದ ಅತ್ಯಂತ ಅಮೂಲ್ಯ ಅನುಭವಗಳಲ್ಲಿ ಒಂದಾಗಿದೆ ಎಂದು ಮೋದಿ ತಮ್ಮ ನೆನಪುಗಳನ್ನು ಹಂಚಿಕೊಂಡರು.

ಪ್ರಶಾಂತಿ ಕುಟೀರದ 50 ವರ್ಷಗಳ ಸೇವೆ, ಯೋಗ ಪರಂಪರೆಯ ಬೆಳವಣಿಗೆ ಹಾಗೂ ಸಮಾಜಮುಖಿ ಕಾರ್ಯಗಳನ್ನು ಪ್ರಧಾನಿ ಈ ಸಂದರ್ಭದಲ್ಲಿ ಶ್ಲಾಘಿಸಿದರು.

About the Author

Praja Vahini

Editor

View All Posts

Spread the love

Post navigation

Previous: ಮೋದಿ ಜೊತೆ ನೇರ ಚರ್ಚೆಗೆ ರಾಹುಲ್ ಗಾಂಧಿ ಸವಾಲು
Next: ಎಸ್‌ಸಿಪಿ ಟಿಎಸ್‌ಪಿ ಅನುದಾನ ಸಮರ್ಪಕವಾಗಿ ಬಳಸಿ: ಸಚಿವ ಟಿ ರಘುಮೂರ್ತಿ ಸೂಚನೆ

Views:

7

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.