Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಕಾಂಗ್ರೆಸ್ ವಿರುದ್ಧ ನಾರಾಯಣಸ್ವಾಮಿ ವಾಗ್ದಾಳಿ
  • Bangalore
  • Front news
  • Politics
  • State

ಕಾಂಗ್ರೆಸ್ ವಿರುದ್ಧ ನಾರಾಯಣಸ್ವಾಮಿ ವಾಗ್ದಾಳಿ

Praja Vahini November 11, 2026 1 minute read
IMG_2942
Spread the love

ಬೆಂಗಳೂರು: ಕಾಂಗ್ರೆಸ್ ಸರಕಾರವು ಯಾವುದಕ್ಕೆ ಬೆಲೆ ಏರಿಸಿಲ್ಲ ಎಂದು ಹುಡುಕುವುದೇ ಕಷ್ಟವಾಗಿದೆ ಎಂದು ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದ್ದಾರೆ.

ರಾಜ್ಯ ಸರಕಾರದ ಬೆಲೆ ಏರಿಕೆ ಖಂಡಿಸಿ ಬಿಜೆಪಿ ರಾಜ್ಯ ಘಟಕದ ವತಿಯಿಂದ ಇಂದು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್, ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು. ಜನಾಕ್ರೋಶಕ್ಕೆ ಸ್ಪಂದಿಸಿ ಬಿಜೆಪಿ ಹೋರಾಟಕ್ಕೆ ಮುಂದಾಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು. ಇಂದು ಮದಕರಿ ನಾಯಕನ ಆಸ್ಥಾನವನ್ನು ರಕ್ಷಿಸಿದ ವೀರ ವನಿತೆ ಓಬವ್ವರ ಜನ್ಮ ದಿನಾಚರಣೆ. ಅವರಿಗೆ- ಮಹಿಳೆಯರಿಗೆ ಗೌರವ ಸಲ್ಲುವಂತೆ ಮಾಡಿದವರು ಬಸವರಾಜ ಬೊಮ್ಮಾಯಿಯವರು ಎಂದು ವಿವರಿಸಿದರು.

ಹಾಲು, ನೀರಿನ ದರ ಹೆಚ್ಚಳ, ಬಸ್ ಟಿಕೆಟ್ ದರ ಏರಿಸಿದ್ದಾರೆ. ವಿದ್ಯುತ್ ದರವೂ ಏರಲಿದೆ ಎಂದು ಎಚ್ಚರಿಸಿದರು. ಜನರ ಮೇಲೆ ಹೊರೆ ಹಾಕಿ ಇನ್ನೊಂದು ವರ್ಷ ಕಳೆಯುವ ಚಿಂತನೆಯಲ್ಲಿ ಈ ಸರಕಾರ ಇದೆ ಎಂದು ದೂರಿದರು. ಚುನಾವಣೆಗೆ ಮೊದಲು ಮತ ಭಿಕ್ಷೆ ಬೇಡಿದ್ದರು. ಈಗ ಎಲ್ಲಕ್ಕೂ ಕತ್ತರಿ ಹಾಕಿದ್ದಾರೆ ಎಂದು ಟೀಕಿಸಿದರು. ಈಗ ಮೋದಿಜೀ ಅವರು ಕೊಡುವ ಅಕ್ಕಿಯನ್ನಷ್ಟೇ ಕೊಡುತ್ತಿದ್ದಾರೆ ಎಂದು ದೂರಿದರು. ಗೃಹಲಕ್ಷ್ಮಿಯರನ್ನು ಭಿಕ್ಷುಕರನ್ನಾಗಿ ಮಾಡಿದ್ದಾರೆ ಎಂದರು.
ಇವರದು ಗ್ಯಾರಂಟಿ ಚೋರಿ ಎಂದು ಟೀಕಿಸಿದರು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಸಿನವರು ಮತ ಕೇಳಲು ಹೋದಾಗ ಹುಶಾರಾಗಿರಬೇಕು ಎಂದು ವ್ಯಂಗ್ಯವಾಗಿ ನುಡಿದರು. 300, 400, 700, 2 ಸಾವಿರ- ಹೀಗೆ ಗ್ಯಾರಂಟಿ ಹಣ ಜಮಾ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಇವರದು ಚಾಕು, ಚೂರಿ ಸಂಸ್ಕೃತಿ 
ಚೂರಿ ಕಳಿಸುತ್ತಾರೆ. ಕಾಂಗ್ರೆಸ್ಸಿನ ಸಂಸ್ಕೃತಿಯೇ ಚಾಕು, ಚೂರಿ ಸಂಸ್ಕøತಿ ಎಂದು ಟೀಕಿಸಿದರು. 2028ರಲ್ಲಿ ರಾಜ್ಯದ ಜನರು ಮನಸ್ಸು ಮಾಡಿದರೆ ಇವರನ್ನು ಅರಬ್ಬಿ ಸಮುದ್ರದಲ್ಲಿ ಹುಡುಕಿದರೂ ಸಿಗುವುದಿಲ್ಲ ಎಂದು ಎಚ್ಚರಿಸಿದರು. ಕಾಂಗ್ರೆಸ್ಸಿನ ತುಂಡುಗಳು ಎಲ್ಲೆಡೆ ಇವೆ ಎಂದು ವಿವರಿಸಿದರು. ವಿದ್ಯಾವಂತರ ಹೆಚ್ಚಳದಿಂದ ಕಾಂಗ್ರೆಸ್ಸಿನ ಮನೆ ಬಾಗಿಲು ಹಾಕುವಂತಾಗಿದೆ ಎಂದು ವಿಶ್ಲೇಷಿಸಿದರು.

 

About the Author

Praja Vahini

Editor

View All Posts

Spread the love

Post navigation

Previous: ಬೆಲೆ ಏರಿಕೆ ಮೂಲಕ ಜನರ ಮೇಲೆ ದಬ್ಬಾಳಿಕೆ: ಅರಗ ಜ್ಞಾನೇಂದ್ರ
Next: ಕಾಂಗ್ರೆಸ್ ಬಲವರ್ಧನೆಗೆ ಹೊಸ ಕಾರ್ಯತಂತ್ರ

Views:

10

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.