Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಖಾಸಗಿ ಸಂಸ್ಥೆಗಳ ಸಹಕಾರ
  • Bangalore
  • Front news
  • Politics
  • State

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಖಾಸಗಿ ಸಂಸ್ಥೆಗಳ ಸಹಕಾರ

Praja Vahini November 4, 2026 1 minute read
IMG_2857
Spread the love

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಿಸುವುದು ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಹೊಸ ಉಪಕ್ರಮವೊಂದನ್ನು ಆರಂಭಿಸಿದೆ. ‘ನಮ್ಮ ಶಾಲೆ, ನಮ್ಮ ಜವಾಬ್ದಾರಿ’ ಹೆಸರಿನ ಈ ಯೋಜನೆಯು ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ನಡುವೆ ಸಹಭಾಗಿತ್ವವನ್ನು ಬೆಳೆಸುವ ಗುರಿ ಹೊಂದಿದೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಯೋಜನೆಗೆ ಚಾಲನೆ ನೀಡಿದರು.

ಯೋಜನೆಯ ಭಾಗವಾಗಿ ಖಾಸಗಿ ಶಾಲೆಗಳು ತಲಾ ಐದು ಸರ್ಕಾರಿ ಶಾಲೆಗಳವರೆಗೆ ಆಯ್ಕೆ ಮಾಡಿಕೊಂಡು ಅವುಗಳ ಶೈಕ್ಷಣಿಕ ಬೆಳವಣಿಗೆಗೆ ಅಗತ್ಯವಾದ ಸಹಕಾರ ಮತ್ತು ಮಾರ್ಗದರ್ಶನ ನೀಡಲಿವೆ. ಈ ಸಹಯೋಗವನ್ನು ಮುಂದುವರಿಸಲು ಎರಡೂ ಕಡೆಯ ಸಂಸ್ಥೆಗಳ ನಡುವೆ ಮೂರುರಿಂದ ಐದು ವರ್ಷಗಳ ಅವಧಿಯ ಒಪ್ಪಂದ ಮಾಡಿಕೊಳ್ಳಲು ಅವಕಾಶವಿದೆ.

ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಸಕ್ತಿ ಹೊಂದಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ಅಧಿಕೃತ ವೆಬ್‌ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲೇ ರಾಜ್ಯದ 1,000ಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಈ ಯೋಜನೆಯ ವ್ಯಾಪ್ತಿಗೆ ತರುವ ಮಹತ್ವಾಕಾಂಕ್ಷೆಯ ಗುರಿಯನ್ನು ಸರ್ಕಾರ ಹೊಂದಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಪ್ರತಿಯೊಬ್ಬ ಮಗುವಿಗೂ ಉತ್ತಮ ಶಿಕ್ಷಣ ದೊರೆಯುವಂತೆ ಮಾಡುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಹೇಳಿದರು.

ಶಿಕ್ಷಕರ ಕೊರತೆ ನೀಗಿಸುವ ನಿಟ್ಟಿನಲ್ಲಿ ಈಗಾಗಲೇ 13,000 ಶಿಕ್ಷಕರ ನೇಮಕಾತಿ ಮಾಡಲಾಗಿದೆ. ಮುಂದಿನ ಜನವರಿ ವೇಳೆಗೆ ಇನ್ನೂ 18,000 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸುವ ಉದ್ದೇಶವಿದೆ ಎಂದು ಮಾಹಿತಿ ನೀಡಿದರು.

ಇದಲ್ಲದೆ, ಸರ್ಕಾರಿ ಶಾಲೆಗಳ ನಿರ್ವಹಣಾ ವೆಚ್ಚ ಕಡಿಮೆ ಮಾಡುವ ಉದ್ದೇಶದಿಂದ ಉಚಿತ ವಿದ್ಯುತ್ ಸೌಲಭ್ಯ ಒದಗಿಸಲಾಗುತ್ತಿದೆ. ಪೋಷಕರು ಖಾಸಗಿ ಶಾಲೆಗಳತ್ತ ಮುಖ ಮಾಡುವುದನ್ನು ತಡೆಯಲು ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ 7,500 ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಆರಂಭಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಸರ್ಕಾರಿ ಶಾಲೆಗಳ ಬಲವರ್ಧನೆಗೆ ಸರ್ಕಾರದ ಪ್ರಯತ್ನಗಳ ಜೊತೆಗೆ ಖಾಸಗಿ ಸಂಸ್ಥೆಗಳ ಸಹಭಾಗಿತ್ವವೂ ನೆರವಾಗಲಿದೆ ಎಂಬ ನಿರೀಕ್ಷೆ ಈ ಹೊಸ ಯೋಜನೆಯಿಂದ ಮೂಡಿದೆ.

About the Author

Praja Vahini

Editor

View All Posts

Spread the love

Post navigation

Previous: ಬಸ್ ಪ್ರಯಾಣಿಕರಿಗೆ ಸರ್ಕಾರದಿಂದ ಶಾಕ್!
Next: ಗೃಹಲಕ್ಷ್ಮಿ ಹಣದ ವರ್ಗಾವಣೆ ಕುರಿತು ₹2,600 ಕೋಟಿ ಲೆಕ್ಕ ನೀಡುವಂತೆ ಆಗ್ರಹ

Views:

11

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.